ಈ ಮೂವರಲ್ಲಿ ದಿನೇಶ್ ಕಾರ್ತಿಕ್​ಗೆ ಟೀಂ ಇಂಡಿಯಾಗೆ ಸ್ಥಾನ ಬಿಟ್ಟುಕೊಡೋರ್ಯಾರು..?

By Suvarna NewsFirst Published Jun 25, 2022, 1:52 PM IST
Highlights

* ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್
* ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವ ಡಿಕೆ
* ಡಿಕೆ ಕಮ್‌ಬ್ಯಾಕ್‌ನಿಂದಾಗಿ ಮೂವರ ಪೈಕಿ ಇಬ್ಬರು ಬೆಂಚ್ ಕಾಯಿಸೋದು ಪಕ್ಕಾ

ಬೆಂಗಳೂರು(ಜೂ.25): ಈ ಸೀಸನ್ ಐಪಿಎಲ್​ನಲ್ಲಿ ಆರ್​ಸಿಬಿ ಪರ ಮ್ಯಾಚ್ ಫಿನಿಶರ್ ಆಗಿದ್ದೇ ಬಂತು. ದಿನೇಶ್ ಕಾರ್ತಿಕ್ (Dinesh Karthik) ಕ್ರಿಕೆಟ್ ಕೆರಿಯರ್ ಚೇಂಜ್ ಆಗಿ ಹೋಯ್ತು. ಅದು ನಿವೃತ್ತಿ ವಯಸ್ಸಿನಲ್ಲಿ. ಹೌದು, 37 ವರ್ಷದ ಡಿಕೆಯನ್ನ ಯಾರೂ ಕೇಳೋರಿರಲಿಲ್ಲ. ಆದ್ರೆ ಬಿಡ್​ನಲ್ಲಿ ಆರ್​ಸಿಬಿ (RCB) ಖರೀದಿಸಿ ಅವರಿಗೆ ಫಿನಿಶಿಂಗ್ ಜವಾಬ್ದಾರಿ ನೀಡಿತು. ಅದನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರ್ತಿಕ್, ಮೂರು ವರ್ಷಗಳ ನಂತರ ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡಿ ಸೌತ್ ಆಫ್ರಿಕಾ ಟಿ20 ಸಿರೀಸ್ ಆಡಿದ್ರು.

ಆಫ್ರಿಕಾ ಸಿರೀಸ್​ನಲ್ಲೂ ಸ್ಲಾಗ್ ಓವರ್​ಗಳಲ್ಲಿ ಆರ್ಭಟಿಸಿ, ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಜಸ್ಟ್ 27 ಬಾಲ್​ನಲ್ಲಿ 55 ರನ್ ಸಿಡಿಸಿ ಗೆಲುವಿನ ರೂವಾರಿಯಾದ್ರು. ಅಷ್ಟು ಮಾತ್ರವಲ್ಲ, ಈ ವರ್ಷ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯೋ ಐಸಿಸಿ ಟಿ20 ವಿಶ್ವಕಪ್​ಗೂ (ICC T20 World Cup) ಸೆಲೆಕ್ಟ್ ಆಗಲಿದ್ದಾರೆ. ಡಿಕೆ ಬ್ಯಾಟಿಂಗ್ ವೈಭವಕ್ಕೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಫಿದಾ ಆಗಿದ್ದಾರೆ. ಅಲ್ಲಿಗೆ ಆಸ್ಟ್ರೇಲಿಯಾ ಫ್ಲೈಟ್ ಟಿಕೆಟ್​​ ಕನ್ಫರ್ಮ್ ಅದಂತಾಗಿದೆ.

ದಿನೇಶ್ ಕಾರ್ತಿಕ್, ದ್ರಾವಿಡ್ ಹೊಗಳಿದ್ದೇ ಬಂತು, ಡಿಕೆ ಟಿ20 ವಿಶ್ವಕಪ್​​ ಆಡೋದು ಕನ್ಫರ್ಮ್​ ಅನ್ನೋದು ಎಲ್ಲರಿಗೂ ಗೊತ್ತಾಗಿ ಹೋಯ್ತು. ಆದರೆ ಡಿಕೆಗೆ ಸ್ಥಾನ ಬಿಟ್ಟುಕೋಡೋದು ಯಾರು ಅನ್ನೋ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಹಾಗೆ ಮೂವರು ಆಟಗಾರರಲ್ಲಿ ಭಯನೂ ಶುರುವಾಗಿದೆ. ಯಾಕೆ ಗೊತ್ತಾ..? ಡಿಕೆ ಆ ಮೂವರಲ್ಲಿ ಒಬ್ಬನ ಸ್ಥಾನವನ್ನ ಆಕ್ರಮಿಸಿಕೊಳ್ಳಲಿದ್ದಾನೆ. ಈ ಮುಂಚೆ ಮೂವರು ಟಿ20 ಟೀಮ್​ನಲ್ಲಿ ಸ್ಥಾನ ಪಡೆಯುತ್ತಿದ್ದರು. ಒಬ್ಬ ಬೆಂಚ್ ಕಾದ್ರೆ ಮತ್ತಿಬ್ಬರು ಪ್ಲೇಯಿಂಗ್-11ನಲ್ಲಿ ಆಡುತ್ತಿದ್ದರು. ಆದ್ರೆ ಡಿಕೆ ರೀ ಎಂಟ್ರಿಯಾದ್ರೆ, ಟಿ20 ವರ್ಲ್ಡ್​ಕಪ್ ಆಡೋ ಒಬ್ಬನ ಕನಸು ನುಚ್ಚುನೂರಾಗಲಿದೆ. ಮತ್ತೊಬ್ಬ ಪ್ಲೇಯಿಂಗ್-11ನಿಂದ ಡ್ರಾಪ್ ಆಗ್ತಾನೆ. ಇನ್ನೊಬ್ಬ ಮಾತ್ರ ನಂಬರ್ 4 ಸ್ಲಾಟ್​ನಲ್ಲಿ ಆಡ್ತಾನೆ.

ರಿಷಭ್​-ಸೂರ್ಯ-ಶ್ರೇಯಸ್​ ಮೂವರಲ್ಲಿ ಕಿಕೌಟ್ ಆಗೋರ್ಯಾರು..?:

ಸೂರ್ಯಕುಮಾರ್ ಯಾದವ್ (Suryakumar Yadav), ರಿಷಭ್ ಪಂತ್ (Rishabh Pant), ಶ್ರೇಯಸ್ ಅಯ್ಯರ್​ಗೆ (Shreyas Iyer) ಭಾರತ ಟಿ20 ಟೀಮ್​ನಲ್ಲಿ ಖಾಯಂ ಸ್ಥಾನ ಇದೆ. ಆದರೆ ಕಾರ್ತಿಕ್ ರೀ ಎಂಟ್ರಿಯಿಂದಾಗಿ ತ್ರಿಮೂರ್ತಿಗಳೂ ಚಿಂತೆಗೀಡಾಗಿದ್ದಾರೆ. ರೋಹಿತ್​-ರಾಹುಲ್ ಓಪನರ್ಸ್. ಕೊಹ್ಲಿ ಫಸ್ಟ್ ಡೌನ್. ಪಾಂಡ್ಯ-ಡಿಕೆ 5 ಮತ್ತು 6ನೇ ಸ್ಲಾಟ್​ನಲ್ಲಿ ಆಡಲಿದ್ದಾರೆ. ಅವರೇ ಫಿನಿಶಯರ್ ಸಹ. ಉಳಿದುಕೊಳ್ಳೋದು ನಂಬರ್ 4 ಸ್ಲಾಟ್ ಮಾತ್ರ. ಈಗ ಅದೇ ಸ್ಲಾಟ್​ನಲ್ಲಿ ಟಿ20 ವಿಶ್ವಕಪ್ ಆಡಲು ಮೂವರ ನಡುವೆ ಫೈಟ್ ಬಿದ್ದಿದೆ. ಟೀಂ ಇಂಡಿಯಾ (Team India) ಮುನ್ನಡೆಸಿದ್ದರು, ವಿಕೆಟ್ ಕೀಪರ್, ಎಡಗೈ ಬ್ಯಾಟ್ಸ್​ಮನ್. ಹೀಗೆ ಮೂರು ಮೂರು ಬೆನ್ನಿಗೆ ಇಟ್ಟುಕೊಂಡಿರುವ ರಿಷಭ್ ಪಂತ್​ ಆಯ್ಕೆಯಾಗಲಿದ್ದಾರೆ. ಸೂರ್ಯಕುಮಾರ್​ ಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ ಅವರನ್ನ ಡ್ರಾಪ್ ಮಾಡೋಕೆ ಆಗೋಲ್ಲ. ಅಲ್ಲಿಗೆ ಶ್ರೇಯಸ್ ಟೀಮ್​ನಿಂದಲೇ ಕಿಕೌಟ್ ಆಗಲಿದ್ದಾರೆ. ಆಗ ನಂಬರ್ 4 ಸ್ಲಾಟ್​ನಲ್ಲಿ ಆಡಲು ಪಂತ್​-ಸೂರ್ಯ ನಡುವೆ ಫೈಟ್ ಬೀಳಲಿದೆ. 

ICC T20 World Cup ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಹೆಸರಿಸಿದ ಇರ್ಫಾನ್ ಪಠಾಣ್..!

ಈ ಇಬ್ಬರಲ್ಲಿ ಯಾರು ಬೆಸ್ಟ್ ಅಂತ ನಾವ್ ಹೇಳಬೇಕಿಲ್ಲ. ಸೂರ್ಯ ಪ್ಲೇಯಿಂಗ್-11ಗೆ ಎಂಟ್ರಿಯಾದ್ರೆ ಪಂತ್ ಬೆಂಚ್ ಕಾಯಬೇಕಾಗುತ್ತೆ. ರಿಷಭ್ ಪಂತ್ ನಮ್ಮ ತಂಡದ ಅವಿಭಾಜ್ಯ ಅಂಗ ಅಂತ ಕೋಚ್ ರಾಹುಲ್ ದ್ರಾವಿಡ್ ಹೇಳಿರಬಹುದು. ಆದ್ರೆ ಟಿ20 ವಿಶ್ವಕಪ್ ಅಂತಹ ಮಹಾನ್ ಟೂರ್ನಿಯಲ್ಲಿ ಫಾರ್ಮ್​ ಇದ್ದವನಿಗೆ ಮಾತ್ರ ಅವಕಾಶ. ಒಟ್ನಲ್ಲಿ ಡಿಕೆ ರೀ ಎಂಟ್ರಿಯಿಂದ ಇಬ್ಬರ ಸ್ಥಾನಕ್ಕೆ ಕುತ್ತು ಬಂದಿರೋದಂತು ಸುಳ್ಳಲ್ಲ.

click me!