ಪಾಕಿಸ್ತಾನಕ್ಕೆ ಏಷ್ಯಾಕಪ್ ಆತಿಥ್ಯ ಕೈತಪ್ಪುವುದು ಬಹುತೇಕ ಖಚಿತ
ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಕೂಡಾ ಬೇರೆಡೆಗೆ ಶಿಫ್ಟ್?
ಕರಾಚಿ(ಜೂ.10): ಈ ಬಾರಿಯ ಏಷ್ಯಾಕಪ್ ಆತಿಥ್ಯ ಕೈತಪ್ಪುವುದು ಬಹುತೇಕ ಖಚಿವಾಗುತ್ತಿರುವ ಹೊತ್ತಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬೀಳುವ ಲಕ್ಷಣಗಳು ಕಂಡುಬರುತ್ತಿದ್ದು, 2025ರ ಐಸಿಸಿ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಿಂದ ಎತ್ತಂಗಡಿಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಭದ್ರತಾ ಕಾರಣದಿಂದಾಗಿ ಭಾರತ ತಂಡ ಪಾಕ್ನಲ್ಲಿ ಈ ಬಾರಿಯ ಏಷ್ಯಾಕಪ್ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಚಾಂಪಿಯನ್ಸ್ ಟ್ರೋಫಿ ಆಡಲು ಸಹ ಪಾಕ್‌ಗೆ ಭಾರತ ಪ್ರಯಾಣಿಸುವ ಸಾಧ್ಯತೆ ಇಲ್ಲ. ಆದರೆ ಭಾರತ, ಪಾಕ್ನಲ್ಲಿ ಆಡದಿದ್ದರೆ ಐಸಿಸಿಗೆ ಟೂರ್ನಿಯನ್ನು ಪಾಕ್ನಿಂದ ಸ್ಥಳಾಂತರಗೊಳಿಸದೆ ಬೇರೆ ಮಾರ್ಗವಿಲ್ಲ. ಹೀಗಾಗಿ ಟೂರ್ನಿ ಪಾಕ್ನಿಂದ ಎತ್ತಂಗಡಿ ಮಾಡಿ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಇದೇ ವೇಳೆ 2024ರ ಟಿ20 ವಿಶ್ವಕಪ್ ಟೂರ್ನಿಯನ್ನು ವಿಂಡೀಸ್, ಅಮೆರಿಕದ ಬದಲು ಇಂಗ್ಲೆಂಡ್‌ನಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
undefined
ಹಾಟ್‌ಸ್ಟಾರ್‌ನಲ್ಲಿ ವಿಶ್ವಕಪ್, ಏಷ್ಯಾಕಪ್ ಪ್ರಸಾರ ಉಚಿತ!
ಮುಂಬೈ: ತನ್ನ ಪ್ರಬಲ ಪ್ರತಿಸ್ಪರ್ಧಿ ರಿಲಾಯಲ್ಸ್‌ನ ಜಿಯೋ ಸಿನಿಮಾಗೆ ಪೈಪೋಟಿ ನೀಡುವ ಸಲುವಾಗಿ ಇದೀಗ ಡಿಸ್ನಿ+ ಹಾಟ್‌ಸ್ಟಾರ್ ಕೂಡ ಕ್ರಿಕೆಟ್ ಪಂದ್ಯಗಳ ಉಚಿತ ಪ್ರಸಾರಕ್ಕೆ ನಿರ್ಧರಿಸಿದೆ. ಮುಂಬರುವ ಏಷ್ಯಾಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಶುಕ್ರವಾರ ಸಂಸ್ಥೆಯು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.
WTC Final: ಭಾರತದ ಹೋರಾಟ, ಆಸೀಸ್‌ನ ಬಿಗಿ ಹಿಡಿತ!
ಮೊಬೈಲ್ ಹಾಗೂ ಟ್ಯಾಬ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಆ್ಯಪ್ ಮೂಲಕ ಸ್ಮಾರ್ಚ್‌ಫೋನ್ ಬಳಕೆದಾರರು ವೀಕ್ಷಿಸಬಹುದಾಗಿದೆ. ಟೀವಿಗಳಲ್ಲಿ ಉಚಿತ ಪ್ರಸಾರ ಆಯ್ಕೆ ಲಭ್ಯವಿರುವುದಿಲ್ಲ. ಇತ್ತೀಚೆಗೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್ ಪ್ರಸಾರ ನಡೆಸಿ ರಿಲಾಯನ್ಸ್ ಸಂಸ್ಥೆಯು ಭಾರೀ ಯಶಸ್ಸು ಕಂಡಿತ್ತು.
ಟಿ20ಯಲ್ಲಿ 500 ವಿಕೆಟ್: ನರೇನ್ 3ನೇ ಬೌಲರ್!
ಕಾರ್ಡಿಫ್(ವೇಲ್ಸ್): ವೆಸ್ಟ್ಇಂಡೀಸ್ನ ತಾರಾ ಸ್ಪಿನ್ನರ್ ಸುನಿಲ್ ನರೇನ್ ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ಗಳನ್ನು ಪೂರ್ತಿಗೊಳಿಸಿದ್ದು, ಈ ಸಾಧನೆ ಮಾಡಿದ 3ನೇ ಬೌಲರ್ ಎನಿಸಿಕೊಂಡರು. ಇಂಗ್ಲಿಷ್ ಕೌಂಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಸರ್ರೆ ತಂಡದ ಪರ ಆಡುತ್ತಿರುವ ನರೇನ್ ಬುಧವಾರ ಗ್ಲಾಮೋರ್ಗನ್ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದರು.
ವಿಂಡೀಸ್ನ ಡ್ವೇನ್ ಬ್ರಾವೋ ಟಿ20ಯಲ್ಲಿ 500 ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿ ಪಡೆದಿದ್ದರು. ಅವರು ಒಟ್ಟಾರೆ 615 ವಿಕೆಟ್ ಕಬಳಿಸಿದ್ದು, ಅಷ್ಘಾನಿಸ್ತಾನದ ರಶೀದ್ ಖಾನ್ 555 ವಿಕೆಟ್ಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ
ನಮೀಬಿಯಾ ವಿರುದ್ಧ ರಾಜ್ಯಕ್ಕೆ ಸರಣಿ ಗೆಲುವು
ವಿಂಡ್ಹೋಕ್: ನಮೀಬಿಯಾ ವಿರುದ್ಧದ 4ನೇ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯನ್ನು ಕರ್ನಾಟಕ ಒಂದು ಪಂದ್ಯ ಬಾಕಿ ಇರುವಂತೆಯೇ 3-1ರಲ್ಲಿ ವಶಪಡಿಸಿಕೊಂಡಿದೆ. ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ನಾಯಜ ಜಾನ್ ಫ್ರೈಲಿಂಕ್(109)ರ ಶತಕದ ನೆರವಿನಿಂದ 50 ಓವರಲ್ಲಿ 7 ವಿಕೆಟ್‌ಗೆ 253 ರನ್ ಗಳಿಸಿತು. ರಾಜ್ಯ ತಂಡ 47.1 ಓವರಲ್ಲಿ 5 ವಿಕೆಟ್‌ಗೆ 256 ರನ್ ಕಲೆಹಾಕಿತು. ನಾಯಕ ಸಮಥ್‌ರ್ ಔಟಾಗದೆ 56, ನಿಕಿನ್ ಜೋಸ್ 56, ಶುಭಾಂಗ್ ಔಟಾಗದೆ 30 ರನ್ ಗಳಿಸಿದರು.