ಬೆಂಗಳೂರಲ್ಲಿ ಆಸೀಸ್‌ ವಿರುದ್ಧ ವಿಶ್ವಕಪ್‌ ಪಂದ್ಯ ಬೇಡ, ಪಾಕ್‌ ಮನವಿ ತಿರಸ್ಕರಿಸಿದ ಐಸಿಸಿ, ಬಿಸಿಸಿಐ

By Santosh Naik  |  First Published Jun 21, 2023, 7:25 PM IST

ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಕರಡು ವೇಳಾಪಟ್ಟಿಯಲ್ಲಿ ಐಸಿಸಿ ಬಿಡುಗಡೆ ಮಾಡಿದೆ. ಇದರಲ್ಲಿ ಎರಡು ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಪಾಕಿಸ್ತಾನ ಮಾಡಿದ್ದ ಮನವಿಯನ್ನು ಐಸಿಸಿ ಹಾಗೂ ಬಿಸಿಸಿಐ ತಿರಸ್ಕರಿಸಿದೆ.


ಮುಂಬೈ (ಜೂ.21): 2023ರ ODI ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಎರಡು ಲೀಗ್ ಪಂದ್ಯಗಳ ಸ್ಥಳವನ್ನು ಬದಲಾಯಿಸಲು ಬಯಸಿದೆ, ಆದರೆ ವರದಿಗಳ ಪ್ರಕಾರ, ಐಸಿಸಿ ಮತ್ತು ಬಿಸಿಸಿಐ, ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದೆ. ಪಾಕಿಸ್ತಾನವನ್ನು ತನ್ನ ಲೀಗ್‌ ಪಂದ್ಯಗಳ ಸ್ಥಳವನ್ನು ಬದಲಾಯಿಸಲು ಕಾರಣವೇನು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಆ ಕಾರಣಕ್ಕಾಗಿ ಪಾಕಿಸ್ತಾನದ ಮನವಿಯನ್ನು ತಿರಸ್ಕಾರ ಮಾಡಲಾಗಿದೆ. ಕರಡು ವೇಳಾಪಟ್ಟಿ ಪ್ರಕಾರ,  ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಸ್ಥಳವನ್ನು  ಬದಲಾಯಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮನವಿ ಮಾಡಿತ್ತು. ಚೆನ್ನೈನಲ್ಲಿ ಅಕ್ಟೋಬರ್ 23 ರಂದು ಅಫ್ಘಾನಿಸ್ತಾನದೊಂದಿಗೆ ಆಡುವ ಪಂದ್ಯ. ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲು ಪಾಕಿಸ್ತಾನ ಬಯಸಿತ್ತು. ಬಿಸಿಸಿಐ ಕರಡು ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಆದರೂ ಐಸಿಸಿ ಇದನ್ನೂ ಅಂತಿಮ ಮಾಡಿಲ್ಲ. ಈ ಕರಡು ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ನಡೆಯಲಿದೆ.

ಭದ್ರತಾ ಆತಂಕವಿದ್ದಲ್ಲಿ ಮಾತ್ರವೇ ಸ್ಥಳ ಬದಲಾವಣೆ: ಸಾಮಾನ್ಯವಾಗಿ ಐಸಿಸಿ ಪ್ರಕಟಿಸುವ ಕರಡು ವೇಳಾಪಟ್ಟಿಯೇ ಹೆಚ್ಚೂ ಕಡಿಮೆ ಅಂತಿಮವಾಗುತ್ತದೆ. ಆದರೆ, ಯಾವುದಾದರೂ ದೇಶಗಳು ಕೆಲವು ನಗರಗಳಲ್ಲಿ ಆಡಲು ತಮಗೆ ಭದ್ರತಾ ಆತಂಕವಿದೆ ಎಂದು ಹೇಳಿದಾಗ ಮಾತ್ರವೇ ಐಸಿಸಿ ಈ ಬಗ್ಗೆ ಪರಿಶೀಲನೆ ಮಾಡಿ ಸ್ಥಳವನ್ನು ಬದಲಾವಣೆ ಮಾಡುತ್ತದೆ. ಉದಾಹರಣೆಗೆ 2016ರ ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು. ಈ ವೇಳೆ ಮಾರ್ಚ್ 19 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಧರ್ಮಶಾಲಾದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ, ಭಾರತ ಸರ್ಕಾರ ಸೂಕ್ತ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ ಪಂದ್ಯವನ್ನು ಕೋಲ್ಕತ್ತಾಕ್ಕೆ ಶಿಫ್ಟ್‌ ಮಾಡಲಾಗಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಆಂತತಿಕ ನೋಟ್‌ನಲ್ಲಿ ಧರ್ಮಶಾಲಾದಲ್ಲಿ ಆಡಲು ತನಗೆ ಯಾವುದೇ ಭದ್ರತಾ ಆತಂಕವಿಲ್ಲ ಎಂದು ತಿಳಿಸಿತ್ತು.

ಆದರೆ, ಐಸಿಸಿ ಭಾರತ ಸರ್ಕಾರದ ಮಾತನ್ನು ಮಾನ್ಯ ಮಾಡಿದ್ದರಿಂದ ಪಂದ್ಯವನ್ನು ಕೋಲ್ಕತ್ತಕ್ಕೆ ಶಿಫ್ಟ್‌ ಮಾಡುವ ನಿರ್ಧಾರ ಮಾಡಿತ್ತು. ಈ ವೇಳೆ ಪಾಕಿಸ್ತಾನ ಅಥವಾ ಬಿಸಿಸಿಯ ಯಾವ ಮಂಡಳಿಗಳ ಮಾತನ್ನೂ ಆಲಿಸಿರಲಿಲ್ಲ.

ಅಫ್ಘಾನಿಸ್ತಾನ ವಿರುದ್ಧ ಚೆನ್ನೈನಲ್ಲಿ ಆಡಲು ಪಾಕ್‌ಗೆ ಆತಂಕ: ಇನ್ನು ಪಾಕಿಸ್ತಾನದ ಆತಂಕ್ಕೆ ಇನ್ನೂ ಒಂದು ಕಾರಣವಿದೆ. ಚೆನ್ನೈನ ಚೆಪಾಕ್‌ ಸ್ಟೇಡಿಯಂ ಸ್ಪಿನ್ನರ್‌ಗಳಿಗೆ ಅದ್ಭುತವಾಗಿ ನೆರವು ನೀಡುತ್ತದೆ. ಹಾಲಿ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡಕ್ಕಿಂತ ವಿಶ್ವದರ್ಜೆಯ ಸ್ಪಿನ್ನರ್‌ಗಳು ಅಫ್ಘಾನಿಸ್ತಾನ ತಂಡದಲ್ಲಿದ್ದಾರೆ. ರಶೀದ್‌ ಖಾನ್‌, ನೂರ್‌ ಅಹ್ಮದ್‌, ಮುಜೀಬ್‌ ಉರ್‌ ರೆಹಮಾನ್‌ ಹಾಗೂ ಮೊಹಮದ್‌ ನಬಿಯಂಥ ವಿಶ್ವದರ್ಜೆಯ ಸ್ಪಿನ್ನರ್‌ಗಳು ಅಫ್ಘಾನಿಸ್ತಾನ ತಂಡದಲ್ಲಿದ್ದಾರೆ. ಒಂದು ಸ್ವಲ್ಪ ಹೆಚ್ಚೂ ಕಡಿಮೆಯಾದರೂ, ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಸೋಲು ಕಾಣುವ ಅಪಾಯವಿದೆ. ಆ ಕಾರಣಕ್ಕಾಗಿ ಬ್ಯಾಟಿಂಗ್‌ ಸ್ನೇಹಿಯಾಗಿರುವ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲು ಪಾಕಿಸ್ತಾನ ಬಯಸಿದೆ.

ಫಿಫಾ ವಿಶ್ವಕಪ್‌ನಲ್ಲಿ ವೈರಲ್‌ ಆಗಿದ್ದ ಮಾಡೆಲ್‌ ಮತ್ತೆ ಪ್ರತ್ಯಕ್ಷ; ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ

Latest Videos

undefined

ಇನ್ನು ಬ್ಯಾಟಿಂಗ್‌ ಸ್ನೇಹಿಯಾಗಿರುವ ಬೆಂಗಳೂರು ಪಿಚ್‌ನಲ್ಲಿ ಆಸೀಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಪಾಕಿಸ್ತಾನದ ಬೌಲರ್‌ಗಳಿಗೆ ಸವಾಲಾಗಲಿದೆ. ಹಾಗಾಗಿ ಬೆಂಗಳೂರಿನಲ್ಲಿ ಆಸೀಸ್‌ ವಿರುದ್ಧದ ಪಂದ್ಯವನ್ನು ಚೆನ್ನೈಗೆ ಶಿಫ್ಟ್‌ ಮಾಡುವಂತೆ ಮನವಿ ಮಾಡಿದೆ ಎನ್ನಲಾಗಿದೆ.

ಅಕ್ಟೋಬರ್ 15ಕ್ಕೆ ಭಾರತ vs ಪಾಕ್‌ ಏಕದಿನ ವಿಶ್ವಕಪ್‌ ಕದನ..! ತಾತ್ಕಾ​ಲಿಕ ವೇಳಾ​ಪಟ್ಟಿ ಪ್ರಕಟ

click me!