ಪಾಕ್‌ ಕ್ರಿಕೆಟಿಗ ಉಮರ್‌ಗೆ ಜೀವಾವಧಿ ನಿಷೇಧ ಸಾಧ್ಯತೆ..!

By Suvarna NewsFirst Published Mar 22, 2020, 1:34 PM IST
Highlights

ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದಡಿ ಉಮರ್ ಅಕ್ಮಲ್ ಜೀವಾವಧಿ ಶಿಕ್ಷೆಗೆ ಸಿಲುಕುವ ಭೀತಿಯಲ್ಲಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಲಾಹೋರ್‌(ಮಾ.22): ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಉಮರ್‌ ಅಕ್ಮಲ್‌ ಜೀವವಾಧಿ ನಿಷೇಧಕ್ಕೆ ಗುರಿಯಾಗುವ ಆತಂಕದಲ್ಲಿದ್ದಾರೆ. ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಬುಕ್ಕಿಗಳು 2 ಬಾರಿ ಸಂಪರ್ಕಿಸಿದ್ದನ್ನು ಉಮರ್‌, ಭ್ರಷ್ಟಾಚಾರ ನಿಗ್ರಹ ಹಾಗೂ ಭದ್ರತಾ ಸಿಬ್ಬಂದಿಗೆ ತಿಳಿಸದ ಕಾರಣ ಅವರ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಿರ್ಧರಿಸಿದೆ.

ಫೆ.20ರಂದು ಕ್ರಿಕೆಟ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಅಮಾನತುಗೊಳಿಸಿದ್ದ ಪಿಸಿಬಿ, ಮಾ.17ರಂದು ನೋಟಿಸ್‌ ನೀಡಿದ್ದು, ಉತ್ತರಿಸಲು 14 ದಿನಗಳ ಕಾಲಾವಕಾಶ ನೀಡಿದೆ. ಅಕ್ಮಲ್‌ ತಪ್ಪಿತಸ್ಥ ಎಂದು ಸಾಬೀತಾದರೆ ನಿಯಮದ ಪ್ರಕಾರ ಕನಿಷ್ಠ 6 ತಿಂಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ.

ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್‌ಗೆ ಅಮಾನತು ಶಿಕ್ಷೆ!

2017ರಲ್ಲಿ ಪಾಕ್ ತಂಡದ ಕೋಚ್ ಆಗಿದ್ದ ಮಿಕ್ ಆರ್ಥರ್‌ಗೆ ಉಗುಳಿ ಅಕ್ಮಲ್ ಮೂರು ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು. 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಅಕ್ಮಲ್ ಹಲವಾರು ಬಾರಿ ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. ಇದುವರೆಗೆ ಉಮರ್ ಅಕ್ಮಲ್ ಪಾಕಿಸ್ತಾನದ ಪರ 16 ಟೆಸ್ಟ್, 121 ಏಕದಿನ ಹಾಗೂ 84 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. 

T20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಕ್ರಿಕೆಟಿಗರಿವರು

ಕಳೆದ 20 ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹಲವಾರು ಆಟಗಾರರು ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. 2017ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪಕ್ಕಾಗಿ ಶಾರ್ಜಿಲ್ ಖಾನ್ ಹಾಗೂ ಖಾಲಿದ್ ಲತೀಫ್ 5 ವರ್ಷಗಳವರೆಗೆ ನಿಷೇಧಕ್ಕೊಳಗಾಗಿದ್ದಾರೆ.   
 

click me!