ಸಾನಿಯಾ-ಶೋಯೆಬ್ ದಾಂಪತ್ಯಕ್ಕೆ ಹುಳಿ ಹಿಂಡಿ, ಇದೀಗ ಹೊಸ ಪೋಸ್ಟ್ ಹಾಕಿದ ಸನಾ..! ಮಲಿಕ್ ಹೊಸ ಮಡದಿ ರೋಸ್ಟ್ ಮಾಡಿದ ನೆಟ್ಟಿಗರು

By Naveen Kodase  |  First Published Jan 29, 2024, 12:27 PM IST

ಪಾಕಿಸ್ತಾನದ ಸಮಾ ಟಿವಿಯ ಪಾಡ್‌ಕಾಸ್ಟ್‌ನಲ್ಲಿ ಸನಾ ಹಾಗೂ ಮಲಿಕ್ ಅವರ ನಡುವೆ ಕಳೆದ ಮೂರು ವರ್ಷಗಳಿಂದಲೂ ಡೇಟಿಂಗ್ ನಡೆಯುತ್ತಿತ್ತು ಎನ್ನುವ ವಿಚಾರ ಬಯಲಾಗಿದೆ. ಮೊದಲ ಪತಿ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರೂ ಸಹಾ ಮಲಿಕ್ ಜತೆ  ಸನಾ ಜಾವೆದ್ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.


ಕರಾಚಿ: ಕೆಲ ದಿನಗಳ ಹಿಂದಷ್ಟೇ ನಟಿ ಸನಾ ಜಾವೆದ್ ಅವರೊಂದಿಗೆ ಪಾಕಿಸ್ತಾನ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮೂರನೇ ಇನಿಂಗ್ಸ್ ಆರಂಭಿಸಿದ್ದಾರೆ. ಇದರೊಂದಿಗೆ ಸುಂದರವಾಗಿದ್ದ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ ಸುಮಾರು 14 ವರ್ಷಗಳ ದಾಂಪತ್ಯಕ್ಕೆ ಕಳೆದ ಕೆಲ ವಾರಗಳ ಹಿಂದಷ್ಟೇ ತೆರೆ ಬಿದ್ದಿದೆ.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಪಾಕಿಸ್ತಾನ ಹಾಗೂ ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನವನ್ನೇ ಹುಟ್ಟುಹಾಕಿತ್ತು. ಒಂದು ಕಡೆ ದಿಢೀರ್ ಎನ್ನುವಂತೆ ಶೋಯೆಬ್ ಮಲಿಕ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸನಾ ಜಾವೆದ್ ಅವರೊಂದಿಗೆ ಮದುವೆಯಾಗಿರುವ ಫೋಟೋ ಹಂಚಿಕೊಂಡರೆ, ಇದಾಗಿ ಕೆಲವೇ ಗಂಟೆಗಳಲ್ಲಿ ಸಾನಿಯಾ ಮಿರ್ಜಾ ಕುಟುಂಬದ ಕಡೆಯಿಂದ ಡಿವೋರ್ಸ್ ಆಗಿರುವ ವಿಚಾರವನ್ನು ಖಚಿತಪಡಿಸಿತ್ತು. ಇದಷ್ಟೇ ಅಲ್ಲದೇ ಸಾನಿಯಾ ಮಿರ್ಜಾ ಕೂಡಾ ತುಂಬಾ ಘನತೆಯಿಂದ ನಡೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಇದೀಗ ಸನಾ ಜಾವೆದ್ ಹಾಕಿದ ಒಂದು ಪೋಸ್ಟ್‌ಗೆ ಹಲವು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುವ ಮೂಲಕ ಶೋಯೆಬ್ ಮಲಿಕ್ ಮೂರನೇ ಮುದ್ದಿನ ಮಡದಿಯನ್ನು ಇನ್ನಿಲ್ಲದಂತೆ ರೋಸ್ಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Sana Shoaib Malik (@sanajaved.official)

ಸ್ವತಃ ಮಾಡೆಲ್ ಆಗಿರುವ ಸನಾ ಜಾವೆದ್, ಪಾಕಿಸ್ತಾನದ ಬಟ್ಟೆ ಬ್ರ್ಯಾಂಡ್‌ವೊಂದರ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಕುರಿತಾಗಿ  ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನಕ್ಕೆ ಹುಳಿ ಹಿಂಡಿದ್ದಕ್ಕೆ ಟ್ರೋಲ್ ಮಾಡಿದ್ದಾರೆ. 

ಪಾಕಿಸ್ತಾನದ ಸಮಾ ಟಿವಿಯ ಪಾಡ್‌ಕಾಸ್ಟ್‌ನಲ್ಲಿ ಸನಾ ಹಾಗೂ ಮಲಿಕ್ ಅವರ ನಡುವೆ ಕಳೆದ ಮೂರು ವರ್ಷಗಳಿಂದಲೂ ಡೇಟಿಂಗ್ ನಡೆಯುತ್ತಿತ್ತು ಎನ್ನುವ ವಿಚಾರ ಬಯಲಾಗಿದೆ. ಮೊದಲ ಪತಿ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರೂ ಸಹಾ ಮಲಿಕ್ ಜತೆ  ಸನಾ ಜಾವೆದ್ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.

'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ

ಶೋಯೆಬ್ ಮಲಿಕ್ ಅವರನ್ನು ಮದುವೆಯಾಗುವ ಮೂರು ತಿಂಗಳ ಮೊದಲಷ್ಟೇ ಸನಾ ಜಾವೆದ್, ತಮ್ಮ ಮೊದಲ ಪತಿ ಉಮೈರ್ ಜಾವೆದ್‌ರಿಂದ ವಿಚ್ಛೇದನಾ ಪಡೆದುಕೊಂಡಿದ್ದರು. ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಸಮಾ ಟಿವಿ ಚಾನೆಲ್‌ನ ಯಾವುದೇ ಶೋಗೆ ಮಲಿಕ್ ಬರಬೇಕು ಅಂದರೆ ಅವರು ಒಂದು ಕಂಡೀಷನ್ ಹಾಕುತ್ತಿದ್ದರಂತೆ. ಸನಾ ಜಾವೆದ್ ಆ ಶೋನಲ್ಲಿ ಭಾಗವಹಿಸಿದರೆ ಮಾತ್ರ ತಾವು ಭಾಗವಹಿಸುತ್ತೇನೆ ಎಂದು ಶೋಯೆಬ್ ಮಲಿಕ್ ಹೇಳುತ್ತಿದ್ದರು ಎಂದು ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಗಿದೆ.

'ಅವರಿಬ್ಬರು ಕಳೆದ ಮೂರು ವರ್ಷಗಳಿಂದಲೂ ಅಫೇರ್‌ನಲ್ಲಿದ್ದರು. ಅವರು ಆತ್ಮೀಯ ಒಡನಾಟವನ್ನೂ ಹೊಂದಿದ್ದರು' ಎಂದು ಸಮಾ ಟಿವಿ ಚಾನೆಲ್ ಪ್ರೊಡ್ಯೂಸರ್ ಪಾಡ್‌ಕಾಸ್ಟ್‌ನಲ್ಲಿ ಬಾಯ್ಬಿಟ್ಟಿದ್ದಾರೆ.

ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?

'ಉಮೈರ್ ಜಸ್ವಾಲ್‌ಗೆ ಇದ್ಯಾವುದೂ ಗೊತ್ತಿರಲಿಲ್ಲ. ಆದರೆ ಸಾನಿಯಾ ಮಿರ್ಜಾ ಹಾಗೂ ಮತ್ತವರ ಕುಟುಂಬಕ್ಕೆ ಮತ್ತು ಶೋಯೆಬ್ ಮಲಿಕ್ ಕುಟುಂಬಕ್ಕೆ ಕಳೆದ ವರ್ಷವಷ್ಟೇ ಈ ವಿಚಾರ ಗೊತ್ತಾಗಿತ್ತು. ಈ ಕುರಿತಂತೆ ಗೊಂದಲ ಬಗೆಹರಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ ಶೋಯೆಬ್ ಮಲಿಕ್ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ' ಎಂದು ಆ ಪ್ರಡ್ಯೂಸರ್ ಹೇಳಿದ್ದಾರೆ.

ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ 2010ರಲ್ಲಿ ಹೈದರಾಬಾದ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರಿಬ್ಬರಿಗೆ ಓರ್ವ ಗಂಡು ಮಗನಿದ್ದಾನೆ. ಇನ್ನೊಂದೆಡೆ ಸನಾ ಜಾವೆದ್ ಹಾಗೂ ಉಮೈರ್ ಜಸ್ವಾಲ್  2020ರಲ್ಲಿ ಮದುವೆಯಾಗಿದ್ದರು.
 

click me!