INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!

By Suvarna News  |  First Published Feb 8, 2020, 9:17 AM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಹಾಗೂ ಮಹತ್ವದ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ‌್‌ಮನ್ ಮಾರ್ಟಿನ್ ಗಪ್ಟಿಲ್ ದಾಖಲೆ ಬರೆದಿದ್ದಾರೆ. ಕಿವೀಸ್ ಬ್ಯಾಟ್ಸ್‌ಮನ್ ನಿರ್ಮಿಸಿದ ದಾಖಲೆ  ವಿವರ ಇಲ್ಲಿದೆ. 


ಆಕ್ಲೆಂಡ್(ಫೆ.08): ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಜೊತೆಯಾದ ಕಿವೀಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಈ ಪಂದ್ಯದಲ್ಲಿ ಆರ್ಧಶತಕ ಸಿಡಿಸಿದ ಗಪ್ಟಿಲ್ ಹೊಸ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: INDvNZ: ಟಾಸ್ ಗೆದ್ದ ಭಾರತ ಫೀಲ್ಡಿಂಗ್; ತಂಡದಲ್ಲಿ 2 ಬದಲಾವಣೆ!

Latest Videos

ತವರಿನಲ್ಲಿ ಗರಿಷ್ಠ ರನ್ ಸಿಡಿಸಿದ ನ್ಯೂಜಿಲೆಂಡ್‌ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಮಾರ್ಟಿನ್ ಗಪ್ಟಿಲ್ ಪಾತ್ರರಾಗಿದ್ದಾರೆ. ರಾಸ್ ಟೇಲರ್ ಸಾಧನೆಯನ್ನು ಹಿಂದಿಕ್ಕಿದ ಗಪ್ಟಿಲ್ ಇದೀಗ ತವರಿನಲ್ಲಿ 4000 ರನ್ ಗಡಿ ದಾಟಿದ್ದಾರೆ.

ತವರಿನಲ್ಲಿ ಗರಿಷ್ಟ ರನ್ ಸಿಡಿಸಿದ ನ್ಯೂಜಿಲೆಂಡ್ ಕ್ರಿಕೆಟರ್ಸ್
4001* - ಮಾರ್ಟಿನ್ ಗಪ್ಟಿಲ್ (92 ಇನಿಂಗ್ಸ್)*
3986 - ರಾಸ್ ಟೇಲರ್ (96 ಇನಿಂಗ್ಸ್)
3448 - ನತನ್ ಆಶ್ಲೆ (84 ಇನಿಂಗ್ಸ್)
3188 - ಬ್ರೆಂಡನ್ ಮೆಕ್ಕಲಂ (106 ಇನಿಂಗ್ಸ್)

ಇದನ್ನೂ ಓದಿ: INDvNZ: ಏಕದಿನಕ್ಕೆ ಪದಾರ್ಪಣೆ ಮಾಡಿದ ವಿಶ್ವದ 2ನೇ ಅತೀ ಎತ್ತರದ ಕ್ರಿಕೆಟಿಗ!

ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಮೊದಲ ವಿಕೆಟ್‌ಗೆ 93 ರನ್ ಜೊತೆಯಾಟ ನೀಡೋ ಮೂಲಕ ಗರಿಷ್ಠ ಜೊತೆಯಾಟದ ದಾಖಲೆ ಬರೆದಿದ್ದಾರೆ. ಆಕ್ಲೆಂಡ್ ಮೈದಾನದಲ್ಲಿ  3ನೇ ಗರಿಷ್ಠ ಜೊತೆಯಾಟ ಅನ್ನೋ ಖ್ಯಾತಿಗೆ  ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಇನಿಂಗ್ಸ್ ಪಾತ್ರವಾಗಿದೆ.

ಆಕ್ಲೆಂಡ್ ಮೈದಾನದಲ್ಲಿ ಗರಿಷ್ಠ ರನ್ ಜೊತೆಯಾಟ
153 ಮಾರ್ಟಿನ್ ಗಪ್ಟಿಲ್ - ಕೇನ್ ವಿಲಿಯಮ್ಸ್, 2014 (2nd wkt)(ನ್ಯೂಜಿಲೆಂಡ್)
109 ಕ್ರೈಗ್ ಇರ್ವಿನ್ - ಬ್ರೆಂಡನ್ ಟೇಲರ್, 2015 (5th)(ಜಿಂಬಾಬ್ವೆ)
93 ಮಾರ್ಟಿನ್ ಗಪ್ಟಿಲ್ - ಹೆನ್ರಿ ನಿಕೋಲಸ್, 2020 (1st)(ನ್ಯೂಜಿಲೆಂಡ್)

click me!