CPL 2021: ರೋಚಕವಾಗಿ ಚಾಂಪಿಯನ್ ಪಟ್ಟಕ್ಕೇರಿದ ಸೇಂಟ್‌ ಕಿಟ್ಸ್‌ & ನೇವಿಸ್‌ ಪೇಟ್ರಿಯಾರ್ಟ್ಸ್‌

Suvarna News   | Asianet News
Published : Sep 16, 2021, 01:03 PM IST
CPL 2021: ರೋಚಕವಾಗಿ ಚಾಂಪಿಯನ್ ಪಟ್ಟಕ್ಕೇರಿದ ಸೇಂಟ್‌ ಕಿಟ್ಸ್‌ & ನೇವಿಸ್‌ ಪೇಟ್ರಿಯಾರ್ಟ್ಸ್‌

ಸಾರಾಂಶ

* ಚೊಚ್ಚಲ ಸಿಪಿಎಲ್‌ ಟ್ರೋಫಿ ಜಯಿಸಿದ ಸೇಂಟ್‌ ಕಿಟ್ಸ್‌ & ನೇವಿಸ್‌ ಪೇಟ್ರಿಯಾರ್ಟ್ಸ್‌ * ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಡ್ವೇನ್ ಬ್ರಾವೋ ಪಡೆ * ಆಲ್ರೌಂಡ್‌ ಪ್ರದರ್ಶನ ತೋರಿದ ರೋಸ್ಟನ್ ಚೇಸ್‌ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನ

ಸೇಂಟ್‌ ಕಿಟ್ಸ್‌(ಸೆ.16): ಕೊನೆಯ ಕ್ಷಣದವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಕೆರಿಬಿಯನ್‌ ಪ್ರೀಮಿಯರ್ ಲೀಗ್ ಫೈನಲ್‌ ಪಂದ್ಯದಲ್ಲಿ ಸೇಂಟ್‌ ಲೂಸಿಯಾ ಕಿಂಗ್ಸ್‌ ಎದುರು ಕೊನೆಯ ಎಸೆತದಲ್ಲಿ 3 ವಿಕೆಟ್‌ಗಳ ಜಯ ಸಾಧಿಸಿದ ಆತಿಥೇಯ ಸೇಂಟ್‌ ಕಿಟ್ಸ್‌ & ನೇವಿಸ್‌ ಪೇಟ್ರಿಯಾರ್ಟ್ಸ್‌ ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಸೆಮಿಫೈನಲ್‌ ಪಂದ್ಯದಂತೆ ಫೈನಲ್‌ನಲ್ಲೂ ಟಾಸ್ ಗೆದ್ದ ಸೇಂಟ್ ಲೂಸಿಯಾ ಕಿಂಗ್ಸ್ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮಹತ್ವದ ಸಂದರ್ಭದಲ್ಲೇ ಉಪಯುಕ್ತ ವಿಕೆಟ್ ಕಳೆದುಕೊಂಡರು ಸಹ ಅಂತಿಮವಾಗಿ ಸೇಂಟ್ ಲೂಸಿಯಾ 7 ವಿಕೆಟ್ ಕಳೆದುಕೊಂಡು 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ರೋಸ್ಟನ್ ಚೇಸ್‌ ಹಾಗೂ ರಾಕೀಮ್‌ ಕಾರ್ನ್‌ವೆಲ್‌ ತಲಾ 43 ರನ್‌ ಬಾರಿಸುವ ಮೂಲಕ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು.

T20 World Cup: ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಬಲಿಷ್ಠ ಟೀಂ ಇಂಡಿಯಾ ಹೆಸರಿಸಿದ ಗಂಭೀರ್

ಇನ್ನು ಈ ಗುರಿ ಬೆನ್ನತ್ತಿದ ಸೇಂಟ್‌ ಕಿಟ್ಸ್‌ & ನೇವಿಸ್‌ ಪೇಟ್ರಿಯಾರ್ಟ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಗೇಲ್‌ ಶೂನ್ಯ ಸುತ್ತಿದರೆ, ಎವಿನ್ ಲೆವಿಸ್‌ 6 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಒಂದು ಹಂತದಲ್ಲಿ 95 ರನ್‌ ಗಳಿಸುವಷ್ಟರಲ್ಲಿ ಡ್ವೇನ್‌ ಬ್ರಾವೋ ಪಡೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊನೆಯಲ್ಲಿ ಡೋಮಿನಿಕ್‌ ಡ್ರಾಕ್ಸ್‌(48* ರನ್‌ 24 ಎಸೆತ 3 ಬೌಂಡರಿ&3ಸಿಕ್ಸರ್) ಹಾಗೂ ಫ್ಯಾಬಿಯನ್‌ ಅಲೆನ್‌(20) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡ ರೋಚಕ ಗೆಲುವು ದಾಖಲಿಸುವಂತೆ ಮಾಡಿದರು.

ಅಜೇಯ ಅರ್ಧಶತಕದ ಮೂಲಕ ತಂಡ ಚಾಂಪಿಯನ್ ಪಟ್ಟಕ್ಕೇರುವಂತೆ ಮಾಡಿದ ಡೋಮಿನಿಕ್ ಡ್ರಾಕ್ಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಟೂರ್ನಿಯುದ್ದಕ್ಕೂ ಆಲ್ರೌಂಡ್‌ ಪ್ರದರ್ಶನ ತೋರಿದ ರೋಸ್ಟನ್ ಚೇಸ್‌ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ