ಪಾಕ್ ವೇಗಿ ನಸೀಂ ಟೆಸ್ಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಅತಿ ಕಿರಿಯ ಬೌಲರ್!

By Suvarna NewsFirst Published Feb 10, 2020, 1:01 PM IST
Highlights

ಪಾಕಿಸ್ತಾನದ ಯುವ ವೇಗಿ ನಸೀಂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಅತಿ ಕಿರಿಯ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ರಾವಲ್ಪಿಂಡಿ(ಫೆ.10): ಟೆಸ್ಟ್‌ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಅತಿಕಿರಿಯ ಬೌಲರ್‌ ಎನ್ನುವ ಹಿರಿಮೆಗೆ ಪಾಕಿಸ್ತಾನದ 17 ವರ್ಷದ ವೇಗಿ ನಸೀಂ ಶಾ ಪಾತ್ರರಾಗಿದ್ದಾರೆ.  ನಸೀಂ ಶಾ ಅಮೋಘ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ಎದುರು ಪಾಕಿಸ್ತಾನ ಇನಿಂಗ್ಸ್ ಹಾಗೂ 44 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಸ್ಪಾಟ್ ಫಿಕ್ಸಿಂಗ್; ಪಾಕ್ ಕ್ರಿಕೆಟಿಗನಿಗೆ 17 ತಿಂಗಳು ಜೈಲು ಶಿಕ್ಷೆ!

ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು ಈ ಸಾಧನೆ ಮಾಡಿದರು. ಪಂದ್ಯದ 41ನೇ ಓವರ್‌ನಲ್ಲಿ ನಸೀಂ ಶಾ ಬಾಂಗ್ಲಾದ ನಜ್ಮುಲ್ ಹುಸೇನ್ ಶ್ಯಾಂಟೋ, ತೈಜುಲ್ ಇಸ್ಲಾಂ ಹಾಗೂ ಮೊಹಮ್ಮುದುಲ್ಲಾ ಅವರನ್ನು ಪೆವಿಲಿಯನ್ನಿಗಟ್ಟಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ನಾಲ್ಕನೇ ಬೌಲರ್ ಎನಿಸಿದರು.

 

2ನೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಕುಲ್ದೀಪ್ ದಾಖಲೆ; ಭಾರತದ ಮೊದಲ ಬೌಲರ್!

Naseem Shah is the youngest bowler ever to take a Test hat-trick 🤯 pic.twitter.com/PmiflPVZJf

— ICC (@ICC)

ಈ ಮೊದಲು ಬಾಂಗ್ಲಾದ ಅಲೋಕ್‌ ಕಪಾಲಿ, 19 ವರ್ಷವಿದ್ದಾಗ ಹ್ಯಾಟ್ರಿಕ್‌ ಕಬಳಿಸಿ ದಾಖಲೆ ಬರೆದಿದ್ದರು. ಅವರ ದಾಖಲೆಯನ್ನು ನಸೀಂ ಮುರಿದರು. 

Pakistan win by an innings and 44 runs!

It was only a matter of time on the fourth morning after Naseem Shah's hat-trick set it up the previous day! SCORECARD: https://t.co/RUiGxTE1nB pic.twitter.com/PaGu3CfBy7

— ICC (@ICC)

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 233 ರನ್‌ ಗಳಿಸಿ ಆಲೌಟ್‌ ಆಯಿತು. ಇನ್ನು ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗೆ ಆಲೌಟ್‌ ಆಗಿತ್ತು. ಗುರಿ ಬೆನ್ನತ್ತಿದ ಬಾಂಗ್ಲಾ 168 ರನ್‌ಗಳಿ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿತು.

click me!