ಏಕದಿನ ಸೂಪರ್‌ ಲೀಗ್‌ ಪಟ್ಟಿಯಲ್ಲಿ ಕುಸಿದ ಭಾರತ

By Suvarna NewsFirst Published Dec 3, 2020, 11:53 AM IST
Highlights

ಪುರುಷರ ಏಕದಿನ ವಿಶ್ವಕಪ್‌ ಸೂಪರ್‌ ಲೀಗ್‌ ಪಾಯಿಂಟ್‌ ಟೇಬಲ್‌ನಲ್ಲಿ ವಿರಾಟ್ ಕೊಹ್ಲಿ ಅಂಕಗಳ ಖಾತೆ ತೆರೆದಿದೆ. ಆದರೆ ಮಂದಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗಾಗಿ ಒಂದು ಅಂಕ ಕಳೆದುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಡಿ.03): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪುರುಷರ ಏಕದಿನ ವಿಶ್ವಕಪ್‌ ಸೂಪರ್‌ ಲೀಗ್‌ ಪಾಯಿಂಟ್‌ ಪಟ್ಟಿಯಲ್ಲಿ ಆರೋನ್‌ ಫಿಂಚ್‌ ನಾಯಕತ್ವದ ಆಸ್ಪ್ರೇಲಿಯಾ ತಂಡ ಅಗ್ರ ಸ್ಥಾನಕ್ಕೇರಿದೆ. ಆಸೀಸ್‌ ವಿರುದ್ಧ ಸರಣಿ ಸೋತಿರುವ ಭಾರತ ತಂಡ 6ನೇ ಸ್ಥಾನಕ್ಕೆ ಕುಸಿದಿದೆ. 

ಬುಧವಾರವಷ್ಟೇ ಮುಕ್ತಾಯವಾದ ಭಾರತ-ಆಸೀಸ್‌ ಏಕದಿನ ಸರಣಿ ಬಳಿಕ ಸೂಪರ್‌ ಲೀಗ್‌ ಪಟ್ಟಿಯಲ್ಲಿ ಏರಿಳಿತವಾಗಿದೆ. ಕಡೆಯ ಪಂದ್ಯ ಗೆದ್ದಿದ್ದಕ್ಕಾಗಿ ಭಾರತ 10 ಅಂಕಗಳಿಸಿದೆ. ಆದರೆ ನಿಧಾನಗತಿ ಬೌಲಿಂಗ್‌ನಿಂದಾಗಿ 1 ಅಂಕ ಕಳೆಯಲಾಗಿದ್ದು ತಂಡದ ಖಾತೆಯಲ್ಲಿ 9 ಅಂಕವಿದೆ. 

ಐಸಿಸಿ ನಿಯಮಾವಳಿ ಪ್ರಕಾರ, ಪಂದ್ಯ ಮುಕ್ತಾಯದ ವೇಳೆಗೆ ತಂಡ ನಿಗದಿತ ಸಮಯಕ್ಕಿಂತ  ಒಂದು ಓವರ್ ಅಥವಾ ಅದಕ್ಕಿಂತ ಹೆಚ್ಚಿನ ಓವರ್‌ಗೆ ತಗುಲುವ ಸಮಯವನ್ನು ಹೆಚ್ಚುವರಿಯಾಗಿ ತೆಗೆದುಕೊಂಡರೆ  ಆ ತಂಡದ ಖಾತೆಯಿಂದ ಒಂದು ಅಂಕ ಕಡಿತಗೊಳಿಸಲಾಗುತ್ತದೆ. 

ದೇಶೀಯ ಕ್ರಿಕೆಟ್‌: ಜಯ್‌ ಶಾ ಪಂಜಾಬ್‌ಗೆ ಭೇಟಿ

ನಂ.1 ಸ್ಥಾನದಲ್ಲಿರುವ ಆಸ್ಪ್ರೇಲಿಯಾ 6 ಪಂದ್ಯಗಳಿಂದ 4ರಲ್ಲಿ ಗೆದ್ದು 2ರಲ್ಲಿ ಸೋತು ಒಟ್ಟು 40 ಅಂಕಗಳಿಸಿದೆ. ಇಂಗ್ಲೆಂಡ್‌ (30 ಅಂಕ), ಪಾಕಿಸ್ತಾನ (20 ಅಂಕ), ಜಿಂಬಾಬ್ವೆ (10 ಅಂಕ), ಐರ್ಲೆಂಡ್‌ (10 ಅಂಕ), ಭಾರತ (9 ಅಂಕ) ನಂತರದ ಸ್ಥಾನದಲ್ಲಿವೆ.

13 ತಂಡಗಳಿರುವ ಏಕದಿನ ಸೂಪರ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೇರಿದಂತೆ ಅಗ್ರ 8 ತಂಡಗಳು 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿವೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿರುವುದರಿಂದ ಸಹಜವಾಗಿಯೇ ವಿಶ್ವಕಪ್ ಟೂರ್ನಿಗೆ ಈಗಾಗಲೇ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
 

click me!