ರೋಹಿತ್ ಶರ್ಮಾ ವಿಶ್ವದಾಖಲೆ ಡಬಲ್ ಸೆಂಚುರಿಗೆ 5 ವರ್ಷದ ಸಂಭ್ರಮ!

By Web Desk  |  First Published Nov 13, 2019, 3:43 PM IST

ಕ್ರಿಕೆಟ್‌ನಲ್ಲಿ ಪ್ರತಿ ದಿನ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಕೆಲವು ದಾಖಲೆಗಲು ಅಜರಾಮರವಾಗಿ ಬಿಡುತ್ತೆ. ಯಾರು ಮಾಡಿರದ, ಮುಂದೆ ಯಾರು ಮಾಡಲಾಗದ ದಾಖಲೆಗಳು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿಯುತ್ತೆ. ಹೀಗೆ  ಅಭಿಮಾನಿಗಳ ಮನದಲ್ಲಿ ಬೇರೂರಿರುವ ರೋಹಿತ್ ಶರ್ಮಾ ದ್ವಿಶತಕಕ್ಕೆ ಇಂದು 5ನೇ ವರ್ಷದ ಸಂಭ್ರಮ.


ಮುಂಬೈ(ನ.13): ಸಿಕ್ಸರ್ ಸಿಡಿಸುವುದರಲ್ಲಿ ಮಾತ್ರವಲ್ಲ, ದ್ವಿಶತಕ ಸಿಡಿಸುವುದರಲ್ಲೂ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎತ್ತಿದ ಕೈ. 2013ರಲ್ಲಿ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ದ  ಮೊದಲ ದ್ವಿಶತಕ ಸಿಡಿಸಿದ್ದರು. ಈ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ 3ನೇ ಕ್ರಿಕೆಟಿಗ  ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮರು ವರ್ಷವೇ ರೋಹಿತ್ ಶ್ರೀಲಂಕಾ ವಿರುದ್ದ ವಿಶ್ವದಾಖಲೆಯ ದ್ವಿಶತಕ ಸಿಡಿಸಿ ದಾಖಲೆ ಬರೆದರು. ಈ ದಾಖಲೆ ಅಳಿಸಿ ಹಾಕುವುದು ಅಷ್ಟು ಸುಲಭವಲ್ಲ.

ಇದನ್ನೂ ಓದಿ: 23 ಎಸೆತದಲ್ಲಿ ಅರ್ಧಶತಕ; 100ನೇ ಪಂದ್ಯದಲ್ಲಿ ರೋಹಿತ್ ದಾಖಲೆ!

Tap to resize

Latest Videos

undefined

ನವೆಂಬರ್ 13, 2014ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಮೂಕವಿಸ್ಮಿತರಾಗಿದ್ದರು. ಕೇವಲ 4 ರನ್‌ಗೆ  ರೋಹಿತ್ ನೀಡಿದ್ದ ಕ್ಯಾಚ್ ಡ್ರಾಪ್ ಮಾಡಿದ್ದ ರೋಹಿತ್ ಶರ್ಮಾ, ಬಳಿಕ ಹಿಂತಿರುಗಿ ನೋಡಲೇ ಇಲ್ಲ. ರೋಹಿತ್  264 ರನ್ ಸಿಡಿಸಿ, ಏಕದಿನದ ವೈಯುಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು.

 

in 2014, Rohit Sharma went big!

The Indian opener smashed 264, the highest ever ODI score 🤯

The worst part? Sri Lanka dropped him when he was on 4 🤦 pic.twitter.com/E6wowdoGUL

— ICC (@ICC)

ಇದನ್ನೂ ಓದಿ: ರಾಂಚಿ ಟೆಸ್ಟ್: ಸಿಕ್ಸರ್ ಮೂಲಕವೇ ಡಬಲ್ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ

173 ಎಸೆತದಲ್ಲಿ ರೋಹಿತ್ ಶರ್ಮಾ 33 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ ರೋಹಿತ್ 264 ರನ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 404 ರನ್ ಸಿಡಿಸಿತು. ಶ್ರೀಲಂಕಾ 251 ರನ್‌ಗೆ ಆಲೌಟ್ ಆಗೋ ಮೂಲಕ 153 ರನ್ ಗೆಲುವು ಕಂಡಿತು. ರೋಹಿತ್ ದಾಖಲೆಯ ದ್ವಿಶತಕಕ್ಕೆ 5ನೇ ವರ್ಷದ  ಸಂಭ್ರಮ. 
 

click me!