ಬಾಲಿವುಡ್ ನಟಿ ಜತೆ ಮದುವೆ? ಸದ್ಯದಲ್ಲೇ ಗುಡ್‌ ನ್ಯೂಸ್ ಇದೆ ಎಂದ ಟಿ20 ಕ್ರಿಕೆಟ್ ವಿಶ್ವಕಪ್ ಹೀರೋ

By Naveen Kodase  |  First Published Jul 8, 2024, 3:42 PM IST

2024ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆಲುವಿನ ಬೆನ್ನಲ್ಲೇ, ಗೆಲುವಿನ ಹೀರೋ ನಿಮ್ಮೆಲ್ಲರಿಗೂ ಸಿಹಿಸುದ್ದಿಯೊಂದು ಕಾದಿದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ? ಏನ್ ಸಮಾಚಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ನವದೆಹಲಿ: ಸದ್ಯ ಇಡೀ ದೇಶವೇ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ, ಸ್ಟಾರ್ ಲೆಗ್‌ಸ್ಪಿನ್ನರ್ ಹಾಗೂ ಟಿ20 ವಿಶ್ವಕಪ್ ಗೆಲುವಿನ ಹೀರೋ ಕುಲ್ದೀಪ್ ಯಾದವ್, ಇದೀಗ ಮತ್ತೊಂದು ಗುಡ್‌ ನ್ಯೂಸ್ ಕೊಡಲು ರೆಡಿಯಾಗಿದ್ದಾರೆ. ಕುಲ್ದೀಪ್ ಯಾದವ್, ಟಿ20 ವಿಶ್ವಕಪ್ ಗೆದ್ದು ತವರಿಗೆ ಬಂದ ಬಳಿಕ ಖಾಸಗಿ ಚಾನೆಲ್‌ವೊಂದರ ಜತೆ ಮನಬಿಚ್ಚಿ ಮಾತನಾಡಿದ್ದು, ತಮ್ಮ ಖಾಸಗಿ ಬದುಕಿನ ಬಗ್ಗೆಯೂ ತುಟಿಬಿಚ್ಚಿದ್ದಾರೆ.

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ತವರಿಗೆ ಆಗಮಿಸಿದ್ದ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ ನೀಡಲಾಗಿತ್ತು. ಇನ್ನು ಮುಂಬೈನ ಮರೀನ್‌ ಡ್ರೈವ್‌ನಲ್ಲಿ ತೆರೆದ ವಾಹನದ ಮೂಲಕ ಟೀಂ ಇಂಡಿಯಾ ಆಟಗಾರರು ರೋಡ್ ಶೋ ನಡೆಸಿದ್ದರು. ಇದಾದ ಬಳಿಕ ಮುಂಬೈನ ವಾಂಖೇಡೆ ಮೈದಾನದಲ್ಲಿ ಆಟಗಾರರಿಗೆ ಸನ್ಮಾನಿಸಿ 125 ಕೋಟಿ ರುಪಾಯಿ ಮೌಲ್ಯದ ಚೆಕ್ ವಿತರಿಸಲಾಯಿತು. 

Tap to resize

Latest Videos

undefined

ಸ್ಮೃತಿ ಮಂಧನಾ ಜೋಡಿಗೆ 5ನೇ ವಾರ್ಷಿಕೋತ್ಸವ: ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ನಾಯಕಿಗೆ ಕ್ಯೂಟಿ ಎಂದ ಬಾಯ್‌ಫ್ರೆಂಡ್

ಈ ಸಂಭ್ರಮಾಚರಣೆಯ ಮರುದಿನ ಕುಲ್ದೀಪ್ ಯಾದವ್ ತಮ್ಮ ತವರು ಕಾನ್ಪುರಕ್ಕೆ ಬಂದಿಳಿದಿದ್ದಾರೆ. ಈ ವೇಳೆ NDTV ವಾಹಿನಿಯ ಜತೆ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮದುವೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಲ್ದೀಪ್ ಯಾದವ್, "ಸದ್ಯದಲ್ಲಿಯೇ ನೀವೆಲ್ಲರು ಗುಡ್ ನ್ಯೂಸ್ ಕೇಳುತ್ತೀರ. ಹಾಗಂತ ಆಕೆ ನಟಿಯಂತೂ ಅಲ್ಲವೇ ಅಲ್ಲ. ಆಕೆ ನನ್ನ ಹಾಗೂ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲಿದ್ದಾಳೆ" ಎಂದು ಚೈನಾಮನ್ ಖ್ಯಾತಿಯ ಸ್ಪಿನ್ನರ್ ಹೇಳಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕುಲ್ದೀಪ್ ಯಾದವ್ 10 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ20 ವಿಶ್ವಕಪ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಕುಲ್ದೀಪ್, "ನಾವೆಲ್ಲರೂ ತುಂಬಾ ಖುಷಿ ಪಟ್ಟೆವು. ಸಾಕಷ್ಟು ಸಮಯದಿಂದ ಈ ಟ್ರೋಫಿ ಗೆಲ್ಲಲು ಕಾಯುತ್ತಿದ್ದೆವು. ವಿಶ್ವಕಪ್ ಗೆದ್ದಿದ್ದು ಅತ್ಯಂತ ಸಂತಸದ ಕ್ಷಣಗಳಲ್ಲಿ ಒಂದು. ಇನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದು ಕೂಡಾ ಒಳ್ಳೆಯ ಕ್ಷಣಗಳಲ್ಲಿ ಒಂದು" ಹೇಳಿದ್ದಾರೆ. 

ಜೂನ್ 29ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು 7 ರನ್ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಭಾರತ ಎರಡನೇ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು. 
 

click me!