ದೇಶೀಯ ಕ್ರಿಕೆಟ್‌: ಜಯ್‌ ಶಾ ಪಂಜಾಬ್‌ಗೆ ಭೇಟಿ

Suvarna News   | Asianet News
Published : Dec 03, 2020, 09:26 AM IST
ದೇಶೀಯ ಕ್ರಿಕೆಟ್‌: ಜಯ್‌ ಶಾ ಪಂಜಾಬ್‌ಗೆ ಭೇಟಿ

ಸಾರಾಂಶ

ದೇಶೀಯ ಟೂರ್ನಿ ಆಯೋಜಿಸಲು ಚಿಂತನೆ ನಡೆಸುತ್ತಿರುವ ಬಿಸಿಸಿಐ ಇದೀಗ ಯಾವ ಮೈದಾನದಲ್ಲಿ ಟೂರ್ನಿ ಆಯೋಜಿಸಬಹುದು ಎನ್ನುವುದರ ಬಗ್ಗೆ ಹುಡುಕಾಟ ನಡೆಸುತ್ತಿವೆ. ಇದರ ಭಾಗವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪಂಜಾಬ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಡಿ.03): ದೇಶೀಯ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಮುಂದಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಸಲಹೆ ಗಳ ಬಳಿಕ ಆಯಾ ರಾಜ್ಯಗಳ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದೆ. 

ಇದರ ಭಾಗವಾಗಿ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಹಾಗೂ ಖಜಾಂಚಿ ಅರುಣ್‌ ಧುಮಾಲ್‌, ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಮತ್ತು ಚಂಡೀಗಢದ ಯುಟಿ ಕ್ರಿಕೆಟ್‌ ಸಂಸ್ಥೆಯ 16 ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಿಸಿಸಿಐ ಬಯೋ-ಬಬಲ್‌ನಲ್ಲಿ ದೇಶೀಯ ಟೂರ್ನಿಗಳಾದ ರಣಜಿ ಟ್ರೋಫಿ, ವಿಜಯ್‌ ಹಜಾರೆ ಸೇರಿದಂತೆ ಇತರೆ ಟೂರ್ನಿಗಳನ್ನು ನಡೆಸಲು ಉತ್ಸಾಹ ತೋರಿದೆ.

ಎಲ್ಲಾ ಟೂರ್ನಿ ನಡೆಸಲು ಬಿಸಿಸಿಐಗೆ ಕೆಎಸ್‌ಸಿಎ ಸಲಹೆ

ಇದೊಂದು ಉತ್ತಮ ಸಭೆಯಾಗಿತ್ತು. ಇಲ್ಲಿ ಜಗತ್ತಿನ ಅತ್ಯುತ್ತಮ ಸ್ಟೇಡಿಯಂ ರೂಪಿಸುವ ಜಯ್ ಶಾ ಅವರ ದೂರಾಲೋಚನೆ ನಮಗೆ ಇಷ್ಟವಾಯಿತು. ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆವು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಜೀಂದರ್ ಗುಪ್ತ ಹೇಳಿದ್ದಾರೆ.  ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಎಲ್ಲಾ ದೇಶಿಯ ಟೂರ್ನಿಗಳನ್ನು ಆಯೋಜಿಸುವಂತೆ ಬಿಸಿಸಿಐಗೆ ಸಲಹೆಯನ್ನು ನೀಡಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಐಪಿಎಲ್ ಟೂರ್ನಿಗೆ ವೇಳಾಪಟ್ಟಿ ಫಿಕ್ಸ್; ಫ್ರಾಂಚೈಸಿಗಳಿಗೆ ಬಿಸಿಸಿಐ ಮಹತ್ವದ ಅಪ್‌ಡೇಟ್ಸ್‌! ಬೆಂಗಳೂರಲ್ಲಿ ಉದ್ಘಾಟನಾ ಮ್ಯಾಚ್?
ಮೆಸ್ಸಿಯ ದೆಹಲಿ ಡೈರಿ: ಮುಂಬರುವ ಟಿ20 ವಿಶ್ವಕಪ್‌ಗೆ ಆಹ್ವಾನಿಸಿದ ಐಸಿಸಿ ಅಧ್ಯಕ್ಷ ಜಯ್ ಶಾ!