NZ vs SL ಉರಿಯದ ಬೇಲ್ಸ್‌ ದೀಪ: ರನೌಟ್‌ ನೀಡದ ಅಂಪೈರ್‌! ವಿಡಿಯೋ ವೈರಲ್

Published : Mar 26, 2023, 08:58 AM IST
NZ vs SL ಉರಿಯದ ಬೇಲ್ಸ್‌ ದೀಪ: ರನೌಟ್‌ ನೀಡದ ಅಂಪೈರ್‌! ವಿಡಿಯೋ ವೈರಲ್

ಸಾರಾಂಶ

ಅಪರೂಪದ ಘಟನೆಗೆ ಸಾಕ್ಷಿಯಾದ ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ರನೌಟ್‌ ಆಗಿ​ದ್ದರೂ ಬೇಲ್ಸ್‌ ದೀಪ ಉರಿ​ಯದ ಕಾರ​ಣಕ್ಕೆ ನಾಟೌಟ್ ತೀರ್ಮಾನ ನೀಡಿದ ಅಂಪೈರ್ಸ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ನೆಟ್ಟಿಗರು ಕಿಡಿ

ಆಕ್ಲೆಂಡ್‌(ಮಾ.26): ರನೌಟ್‌ ಆಗಿ​ದ್ದರೂ ಬೇಲ್ಸ್‌ ದೀಪ ಉರಿ​ಯದ ಕಾರ​ಣಕ್ಕೆ ಅಂಪೈ​ರ್‌​ಗಳು ಔಟ್‌ ನೀಡದ ಪ್ರಸಂಗ ಲಂಕಾ-ಕಿವೀಸ್‌ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ನಡೆಯಿತು. 18ನೇ ಓವರ್‌ನ 4ನೇ ಎಸೆ​ತ​ದಲ್ಲಿ ಲಂಕಾದ ಕರು​ಣರತ್ನೆ ಅವ​ರನ್ನು ಕಿವೀಸ್‌ ಬೌಲರ್‌ ಟಿಕ್ನ​ರ್‌ ರನೌಟ್‌ ಮಾಡಿ​ದರು. ಟಿಕ್ನರ್‌ ಚೆಂಡನ್ನು ವಿಕೆಟ್ಸ್‌ಗೆ ತಗುಲಿಸಿದಾಗ ಬ್ಯಾಟರಿ ಸಮಸ್ಯೆಯಿಂದಾಗಿ ಬೇಲ್ಸ್‌ನ ದೀಪ ಉರಿಯಲಿಲ್ಲ. 

ಆದರೆ ವಿಕೆಟ್‌ ನೆಲಕ್ಕೆ ಬೀಳುವ ಹೊತ್ತಿಗೆ ಕರುಣರತ್ನೆ ಕ್ರೀಸ್‌ ತಲುಪಿದ್ದರು. ಬೇಲ್ಸ್‌ ದೀಪ ಉರಿಯಲಿಲ್ಲ ಎನ್ನುವ ಕಾರಣಕ್ಕೆ 3ನೇ ಅಂಪೈರ್‌ ನಾಟೌಟ್‌ ಎಂದು ತೀರ್ಪು ನೀಡಿದ್ದು ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಕಿವೀಸ್‌ ವಿರು​ದ್ಧ 198 ಸೋಲು ಕಂಡ ಲಂಕಾ!

ಆಕ್ಲಂಡ್‌: ಹ್ಯಾರಿ ಶಿಪ್ಲೆ(31ಕ್ಕೆ 5 ವಿಕೆ​ಟ್‌) ಮಾರಕ ಬೌಲಿಂಗ್‌ ತುತ್ತಾದ ಶ್ರೀಲಂಕಾ ತಂಡ ನ್ಯೂಜಿ​ಲೆಂಡ್‌ ವಿರು​ದ್ಧದ ಮೊದಲ ಏಕ​ದಿನ ಪಂದ್ಯ​ದಲ್ಲಿ 198 ರನ್‌ ಹೀನಾಯ ಸೋಲುಂಡಿ​ದೆ. ಇದ​ರೊಂದಿ​ಗೆ ಲಂಕಾ 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ರೇಸ್‌ನಲ್ಲಿ ಉಳಿಯಬೇಕಿದ್ದರೆ ಉಳಿದ 2 ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲು​ಕಿದೆ. 

ಸದ್ಯ 10ನೇ ಸ್ಥಾನ​ದ​ಲ್ಲಿ​ರುವ ಲಂಕಾ ಉಳಿ​ದೆ​ರಡು ಪಂದ್ಯ ಸೋತರೆ ಜುಲೈ​ನಲ್ಲಿ ಜಿಂಬಾ​ಬ್ವೆ​ಯಲ್ಲಿ ನಡೆ​ಯ​ಲಿ​ರುವ ಅರ್ಹತಾ ಸುತ್ತಿ​ನಲ್ಲಿ ಆಡ​ಬೇ​ಕಿದೆ. ಶನಿ​ವಾ​ರದ ಪಂದ್ಯ​ದ​ಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 49.3 ಓವ​ರಲ್ಲಿ 274ಕ್ಕೆ ಆಲೌ​ಟಾ​ಯಿತು. ಲಂಕಾ 19.5 ಓವ​ರಲ್ಲಿ 76ಕ್ಕೆ ಸರ್ವ​ಪ​ತನ ಕಂಡಿ​ತು.

ಪಾಕ್‌ ವಿರುದ್ಧ ಆಫ್ಘ​ನ್‌​ಗೆ ಮೊದಲ ಟಿ20 ಗೆಲು​ವು

ಶಾ​ರ್ಜಾ: ಟಿ20 ಕ್ರಿಕೆ​ಟ್‌​ನಲ್ಲಿ ಪಾಕಿ​ಸ್ತಾನ ವಿರುದ್ಧ ಆಫ್ಘಾ​ನಿ​ಸ್ಥಾನ ಮೊದಲ ಗೆಲುವು ದಾಖ​ಲಿ​ಸಿದೆ. ಶುಕ್ರ​ವಾರ ಶಾರ್ಜಾ​ದಲ್ಲಿ ನಡೆದ ಮೊದಲ ಟಿ20 ಪಂದ್ಯ​ದಲ್ಲಿ ಪಾಕಿ​ಸ್ತಾ​ನ​ವನ್ನು ಆಫ್ಘನ್‌ 6 ವಿಕೆ​ಟ್‌​ಗ​ಳಿಂದ ಮಣಿ​ಸಿತು. ಪ್ರಮುಖ ಆಟ​ಗಾ​ರರ ಅನು​ಪ​ಸ್ಥಿ​ತಿ​ಯಲ್ಲಿ ಕಣ​ಕ್ಕಿ​ಳಿದ ಪಾಕ್‌ ಮೊದಲು ಬ್ಯಾಟ್‌ ಮಾಡಿ 9 ವಿಕೆ​ಟ್‌ಗೆ ಕೇವಲ 92 ರನ್‌ ಕಲೆ​ಹಾ​ಕಿತು.

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಕೊರಳೊಡ್ಡಿದ ನೀತು & ಸ್ವೀಟಿ

ಇಮಾದ್‌ ವಾಸಿಂ ಬಾರಿ​ಸಿದ 18 ರನ್‌ ತಂಡದ ಪರ ದಾಖ​ಲಾದ ಗರಿಷ್ಠ ಮೊತ್ತ. ನಬಿ, ಮುಜೀಬ್‌, ಫಾರೂಕಿ ತಲಾ 2 ವಿಕೆಟ್‌ ಕಿತ್ತ​ರು. ಸುಲಭ ಗುರಿ ಬೆನ್ನ​ತ್ತಿದ ಆಫ್ಘನ್‌ 17.5 ಓವ​ರಲ್ಲಿ ಜಯ​ಗ​ಳಿ​ಸಿತು. ನಬಿ 38 ರನ್‌ ಸಿಡಿ​ಸಿ​ದ​ರು.

ದಕ್ಷಿಣ ಆಫ್ರಿಕಾ ಎದುರು ವಿಂಡೀಸ್‌ಗೆ 3 ವಿಕೆಟ್‌ ಜಯ

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ತಂಡವು 3 ವಿಕೆಟ್‌ ರೋಚಕ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಚುಟುಕು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಪಂದ್ಯವನ್ನು 11 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 10.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ರೋವ್ಮನ್ ಪೋವೆಲ್‌ ಕೇವಲ 18 ಎಸೆತಗಳಲ್ಲಿ 43 ರನ್ ಸಿಡಿಸಿ ವಿಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇಂಗ್ಲೆಂಡ್‌ನ ದಿ ಹಂಡ್ರೆಡ್‌ಗೆ ಹರ್ಮನ್‌ಪ್ರೀತ್‌, ಸ್ಮೃತಿ

ಲಂಡನ್‌: ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂಧನಾ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಆಯೋಜಿಸುವ ದಿ ಹಂಡ್ರೆಡ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹರ್ಮನ್‌ಪ್ರೀತ್‌ರನ್ನು ಟ್ರೆಂಟ್‌ ರಾಕೆಟ್ಸ್‌ ತಂಡ, ಮಂಧನಾರನ್ನು ಸದ್ರನ್‌ ಬ್ರೇವ್‌ ತಂಡ ಆಯ್ಕೆ ಮಾಡಿಕೊಂಡಿದೆ. 2023ರ ಆವೃತ್ತಿಯು ಆ.1ರಿಂದ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?