BCCI ಆಯ್ಕೆ ಸಮಿತಿ ಅಧ್ಯಕ್ಷರಾಗಲು ಯಾರೂ ನನ್ನನ್ನು ಕೇಳಿಲ್ಲ: ವಿರೇಂದ್ರ ಸೆಹ್ವಾಗ್

Published : Jun 23, 2023, 11:20 AM IST
BCCI ಆಯ್ಕೆ ಸಮಿತಿ ಅಧ್ಯಕ್ಷರಾಗಲು ಯಾರೂ ನನ್ನನ್ನು ಕೇಳಿಲ್ಲ: ವಿರೇಂದ್ರ ಸೆಹ್ವಾಗ್

ಸಾರಾಂಶ

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನ ಗಾಳಿ ಸುದ್ದಿಗೆ ತೆರೆ ಎಳೆದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಯಾರೂ ಕೂಡಾ ನನ್ನನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಎಂದು ಸಂಪರ್ಕಿಸಿಲ್ಲವೆಂದ ವೀರೂ

ನವ​ದೆ​ಹ​ಲಿ(ಜೂ.23): ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಲು ನಿರಾಸಕ್ತಿ ಹೊಂದಿದ್ದಾರೆ ಎನ್ನುವಂತಹ ಸುದ್ದಿಗಳು ವೈರಲ್ ಆಗಿದ್ದವು. ಈ ಕುರಿತಂತೆ ಇದೇ ಮೊದಲ ಬಾರಿಗೆ ತುಟಿಬಿಚ್ಚಿರುವ ಮಾಜಿ ಆರಂಭಿಕ ಬ್ಯಾಟರ್ ಸೆಹ್ವಾಗ್, ಯಾರೂ ಕೂಡಾ ನನ್ನನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಎಂದು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಬಿಸಿಸಿಐ ರಾಷ್ಟ್ರೀಯ ಹಿರಿಯ ಪುರು​ಷ ಆಯ್ಕೆ ಸಮಿತಿ ಮುಖ್ಯ​ಸ್ಥ​ರಿಗೆ ವಾರ್ಷಿಕ 1 ಕೋಟಿ ರುಪಾಯಿ ವೇತನ ದೊರೆ​ಯ​ಲಿದ್ದು, ಆ ಮೊತ್ತ ಕಡಿಮೆಯಾಯಿತು ಎನ್ನುವ ಕಾರ​ಣಕ್ಕೆ ಮಾಜಿ ಕ್ರಿಕೆ​ಟಿಗ ವೀರೇಂದ್ರ ಸೆಹ್ವಾಗ್‌ ಹುದ್ದೆ ನಿರಾ​ಕ​ರಿ​ಸಿ​ದ್ದಾರೆ ಎಂದು ವರದಿಯಾಗಿತ್ತು. ಈ ಗಾಳಿಸುದ್ದಿಯನ್ನು ಇದೀಗ ಸ್ವತಃ ಸೆಹ್ವಾಗ್ ತಳ್ಳಿಹಾಕಿದ್ದಾರೆ. ನಿಮ್ಮನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಲು ಯಾರಾದರೂ ಸಂಪರ್ಕಿಸಿದ್ದರೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್, ಯಾರೂ ಕೂಡಾ ನನ್ನನ್ನು ಈ ವಿಚಾರವಾಗಿ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಚೇತನ್‌ ಶರ್ಮಾ ರಾಜೀ​ನಾಮೆ ನೀಡಿದ 4 ತಿಂಗಳ ಬಳಿಕ ಬಿಸಿ​ಸಿಐ ಉತ್ತರ ವಲ​ಯ​ದಿಂದ ರಾಷ್ಟ್ರೀಯ ಹಿರಿಯ ಪುರು​ಷರ ಆಯ್ಕೆ ಸಮಿ​ತಿ ಸದಸ್ಯ ಸ್ಥಾನಕ್ಕೆ ಅರ್ಜಿ ಆಹ್ವಾ​ನಿ​ಸಿದೆ. ಖಾಸಗಿ ಚಾನೆಲ್‌ವೊಂದರ ರಹಸ್ಯ ಕಾರ್ಯಚರಣೆ ವೇಳೆ ಚೇತನ್ ಶರ್ಮಾ, ಭಾರತ ತಂಡದ ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ತಮ್ಮ ಹುದ್ದೆಗೆ ಚೇತನ್ ಶರ್ಮಾ ರಾಜೀನಾಮೆ ನೀಡಿದ್ದರು. 

ಭಾರತ ತಂಡದ ಕೆಲ ಆಟಗಾರರು ಫಿಟ್ನೆಸ್‌ ಸಾಬೀತಿಗೆ ಇಂಜೆಕ್ಷನ್‌ ತೆಗೆದುಕೊಳ್ಳುತ್ತಾರೆ ಎಂದಿದ್ದ ಚೇತನ್‌ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಭಾರತ ಕ್ರಿಕೆಟ್‌ ತಂಡದೊಳಗಿನ ಹಿಂದೆಂದೂ ಕಂಡ ಕೇಳರಿಯದ ಕೆಲ ವಿಚಾರಗಳನ್ನು ಕುಟುಕು ಕಾರ್ಯಚರಣೆ ವೇಳೆ ಚೇತನ್ ಶರ್ಮಾ ಬಾಯ್ಬಿಟ್ಟಿದ್ದರು. ಇದು ಭಾರತೀಯ ಕ್ರಿಕೆಟ್‌ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಚೇತನ್ ಶರ್ಮಾ ರಾಜೀನಾಮೆ ಬಳಿಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್ ಸದ್ಯ ಹಂಗಾಮಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ದಕ್ಷಿಣ ವಲಯದಿಂದ ಎಸ್ ಶರತ್, ಕೇಂದ್ರ ವಲಯದಿಂದ ಸುಬ್ರೊತೊ ಬ್ಯಾನರ್ಜಿ ಹಾಗೂ ಪಶ್ಚಿಮ ವಲಯದಿಂದ ಸಲಿಲ್ ಅಂಕೋಲಾ ಅವರು ಸದ್ಯ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದೀಗ ಬಿಸಿಸಿಐ ತನ್ನ ಆಯ್ಕೆ ಸಮಿತಿ ಮುಖ್ಯಸ್ಥರಾಗಲು ಜಾಹೀರಾತು ನೀಡಿದೆ. ಅರ್ಜಿ ಸಲ್ಲಿ​ಸು​ವ​ವರು ಭಾರತ ಪರ ಕನಿಷ್ಠ 7 ಟೆಸ್ಟ್‌ ಅಥವಾ 10 ಏಕ​ದಿನ ಅಥವಾ 30 ಪ್ರ.ದರ್ಜೆ ಪಂದ್ಯ​ಗ​ಳ​ನ್ನಾ​ಡಿ​ರ​ಬೇಕು. ನಿವೃತ್ತಿ ಘೋಷಿಸಿ 5 ವರ್ಷವಾಗಿ​ರ​ಬೇಕು ಎಂಬ ಷರತ್ತು ಹಾಕಿ​ರುವ ಬಿಸಿ​ಸಿಐ, ಅರ್ಜಿ ಸಲ್ಲಿ​ಸಲು ಜೂ.30ರ ಗಡುವು ನೀಡಿದೆ. 

ಜನ​ವ​ರಿ​ವ​ರೆಗೆ ಧೋನಿ ಆಡ​ಲ್ಲ: ಚೆನ್ನೈ ಸಿಇ​ಒ

ಚೆನ್ನೈ: ಮಂಡಿ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗಿ​ರುವ ಎಂ.ಎ​ಸ್‌.​ಧೋನಿ ಜನ​ವ​ರಿ-ಫೆಬ್ರ​ವ​ರಿ​ವ​ರೆಗೆ ಆಡು​ವು​ದಿಲ್ಲ ಎಂದು ಐಪಿ​ಎ​ಲ್‌ನ ಚೆನ್ನೈ ತಂಡದ ಸಿಇಒ ಕಾಶಿ ವಿಶ್ವ​ನಾ​ಥನ್‌ ತಿಳಿ​ಸಿ​ದ್ದಾರೆ. ಈ ಬಗ್ಗೆ ಮಾಹಿತಿ ಹಂಚಿ​ಕೊಂಡಿ​ರುವ ಅವರು, ‘ಧೋನಿ ಐಪಿ​ಎಲ್‌ ಪೂರ್ತಿ ಮಂಡಿ ನೋವಿ​ನಿಂದ ಬಳ​ಲು​ತ್ತಿ​ದ್ದರೂ ಒಮ್ಮೆಯೂ ಈ ಬಗ್ಗೆ ನಮ್ಮಲ್ಲಿ ಹೇಳ​ಲಿ​ಲ್ಲ. ವಿಶ್ರಾಂತಿಯನ್ನೂ ಪಡೆ​ದು​ಕೊ​ಳ್ಳ​ಲಿಲ್ಲ. ಅವರು ಟೂರ್ನಿ​ಯು​ದ್ದಕ್ಕೂ ಸಂಕಷ್ಟಅನು​ಭ​ವಿ​ಸಿ​ದರು. ಆದರೆ ತಂಡದ ಮೇಲಿನ ಬದ್ಧತೆ ಅವ​ರನ್ನು ಆಡು​ವಂತೆ ಮಾಡಿತು. ಆದರೆ ಫೈನಲ್‌ ಬಳಿಕ ಮಂಡಿಗೆ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗು​ವು​ದಾಗಿ ತಿಳಿ​ಸಿ​ದರು. 3-4 ವಾರ ವಿಶ್ರಾಂತಿ ಪಡೆದು, ಬಳಿಕ ಪುನ​ಶ್ಚೇ​ತನ ಶಿಬಿ​ರ​ದಲ್ಲಿ ಪಾಲ್ಗೊ​ಳ್ಳ​ಲಿ​ದ್ದಾ​ರೆ​’ ಎಂದು ತಿಳಿ​ಸಿ​ದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?