ಮುಂಬೈ ತಂಡ ಗೆಲ್ಲಿಸಿದ ಬುಮ್ರಾ ಕೈ ಮುಟ್ಟುವುದಕ್ಕೂ ಮುನ್ನ ಸ್ಯಾನಿಟೈಸರ್ ಹಾಕಿದ ನೀತಾ ಅಂಬಾನಿ!

Published : May 22, 2025, 11:47 AM IST
ಮುಂಬೈ ತಂಡ ಗೆಲ್ಲಿಸಿದ ಬುಮ್ರಾ ಕೈ ಮುಟ್ಟುವುದಕ್ಕೂ ಮುನ್ನ ಸ್ಯಾನಿಟೈಸರ್ ಹಾಕಿದ ನೀತಾ ಅಂಬಾನಿ!

ಸಾರಾಂಶ

ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ೫೯ ರನ್‌ಗಳಿಂದ ಜಯ ಸಾಧಿಸಿ ಪ್ಲೇಆಫ್ ಪ್ರವೇಶಿಸಿದೆ. ಸೂರ್ಯಕುಮಾರ್ ೭೩ ರನ್ ಗಳಿಸಿ ಮಿಂಚಿದರು. ಬುಮ್ರಾ ಮತ್ತು ಸ್ಯಾಂಟ್ನರ್ ತಲಾ ೩ ವಿಕೆಟ್ ಪಡೆದರು. ಮಾಲೀಕ ನೀತಾ ಅಂಬಾನಿ ಆಟಗಾರರಿಗೆ ಸ್ಯಾನಿಟೈಸರ್ ಹಚ್ಚಿ ಕೈಕುಲುಕಿದರು. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮುಂಬೈ (ಮೇ 22): ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಆದರೆ, ತಂಡದ ಗೆಲುವಿಗೆ ಪ್ರಮುಖ ಕಾರಣವಾದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಹ್ಯಾಂಡ್ ಶೇಕ್ ಮಾಡುವ ಮುನ್ನ ಎಂಐ ತಂಡದ ಒಡತಿ ನೀತಾ ಅಂಬಾನಿ ಅವರು ಬುಮ್ರಾ ಕೈಗೆ ಸ್ಯಾನಿಟೈಸರ್ ಹಾಕಿದ ನಂತರ ಕೈ ಕುಲುಕಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳ ಭರ್ಜರಿ ಜಯ ಸಾಧಿಸಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ ಸೂರ್ಯಕುಮಾರ್ ಯಾದವ್ ಒಂದೆಡೆ ಗೆಲುವಿಗೆ ಕಾರಣವಾದರೆ, ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮಿಚೆಲ್ ಸ್ಯಾಂಟ್ನರ್ ಮಿಂಚಿದರು. ಸೂರ್ಯಕುಮಾರ್ 43 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗಿದ್ದರೆ, ಬುಮ್ರಾ ಮತ್ತು ಸ್ಯಾಂಟ್ನರ್ ತಲಾ 3 ವಿಕೆಟ್ ಪಡೆದು ಡೆಲ್ಲಿಯನ್ನು ಕಟ್ಟಿಹಾಕಿ ಗೆಲುವಿನ ದಡವನ್ನು ಸೇರಿಸಿದರು.

ಈ ನಡುವೆ, ಪಂದ್ಯದಲ್ಲಿ ಮುಂಬೈ ಗೆದ್ದ ನಂತರ ಆಟಗಾರರು ಹಸ್ತಲಾಘವಕ್ಕೆ ಸಿದ್ಧರಾಗುತ್ತಿದ್ದಂತೆ, ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಕರೆದು ಕೈಗಳನ್ನು ಸ್ಯಾನಿಟೈಸ್ ಮಾಡಲು ಹೇಳಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಂದ್ಯದ ನಂತರ ಆಟಗಾರರಿಗೆ ಹಸ್ತಲಾಘವ ನೀಡಲು ಮೈದಾನಕ್ಕೆ ಹೋಗಲು ಸಿದ್ಧರಾಗುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರನ್ನು ಕರೆಸಿ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಟ್ಟ ನೀತಾ ಅಂಬಾನಿ, ನಂತರ ಮುಂಬೈ ಬೌಲರ್ ಕರಣ್ ಶರ್ಮಾ ಅವರ ಕೈಗಳಿಗೂ ಸ್ಯಾನಿಟೈಸರ್ ಹಾಕಿಕೊಟ್ಟರು. ಇದಾದ ನಂತರವೇ ಬುಮ್ರಾ ಮತ್ತು ಕರಣ್ ಶರ್ಮಾ ಡೆಲ್ಲಿ ಆಟಗಾರರಿಗೆ ಹಸ್ತಲಾಘವ ನೀಡಲು ಮೈದಾನಕ್ಕೆ ತೆರಳಿದರು. ಕೋವಿಡ್ 19 ಸಮಯದಲ್ಲಿ ಆಟಗಾರರು ಹೆಚ್ಚಾಗಿ ಸ್ಯಾನಿಟೈಸರ್ ಬಳಸುತ್ತಿದ್ದರು.

ಇತ್ತೀಚೆಗೆ ದೇಶದ ವಿವಿಧೆಡೆ ಕೋವಿಡ್ 19 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ತಂಡದ ಮಾಲೀಕ ನೀತಾ ಅಂಬಾನಿ ಆಟಗಾರರ ಬಗ್ಗೆ ಕಾಳಜಿ ವಹಿಸಿದ್ದಾರೆ. ಇತ್ತೀಚೆಗೆ ಕೇರಳ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 250 ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಕೋವಿಡ್ 19 ಮತ್ತೆ ಹರಡುತ್ತಿದೆ ಎಂಬ ಸುದ್ದಿಗಳ ನಡುವೆ, ಆಟಗಾರರು ಪರಸ್ಪರ ಕೈಕುಲುಕುವ ಬದಲು ಮುಷ್ಟಿ ಬಡಿಯುವ ಹಳೆಯ ವಿಧಾನವನ್ನು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ನಿನ್ನೆ ಡೆಲ್ಲಿ ವಿರುದ್ಧದ ಪಂದ್ಯದ ನಂತರ ಅನುಸರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?
ಕೆಎಸ್‌ಸಿಎ ಚುನಾವಣೆ: ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!