₹5.65 ಲಕ್ಷಕ್ಕೆ Nissan 7 ಸೀಟರ್‌ ಕಾರು; 6 ಏರ್‌ಬ್ಯಾಗ್‌, 19.6 kmpl ಮೈಲೇಜ್‌, ಫೀಚರ್ಸ್‌ ಸೂಪರ್‌!

Published : Sep 18, 2026, 04:57 PM IST
nissan gravite

ಸಾರಾಂಶ

ಮಧ್ಯಮ ವರ್ಗದವರಿಗಾಗಿ ನಿಸ್ಸಾನ್ ಕಂಪನಿಯು ಕೇವಲ 5.65 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ 'ನಿಸ್ಸಾನ್ ಗ್ರಾವಿಟ್' 7 ಸೀಟರ್ ಕಾರನ್ನು ಬಿಡುಗಡೆ ಮಾಡಿದೆ. ಇದು 24 ಕಿ.ಮೀ ಮೈಲೇಜ್, 6 ಏರ್‌ಬ್ಯಾಗ್‌ಗಳು ಮತ್ತು ಆಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಕಡಿಮೆ ಬಜೆಟ್‌ನಲ್ಲಿ ಕುಟುಂಬದ ಪ್ರಯಾಣಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮೈಲೇಜ್ ಮತ್ತು 7 ಸೀಟರ್ ಕಾರು ಹುಡುಕುತ್ತಿರುವವರಿಗೆ ನಿಸ್ಸಾನ್ ಭರ್ಜರಿ ಸಿಹಿಸುದ್ದಿ ನೀಡಿದೆ. ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ 'ನಿಸ್ಸಾನ್ ಗ್ರಾವಿಟ್' 7 ಸೀಟರ್ ಎಂಪಿವಿ ಕಾರು ಈಗ ಗ್ರಾಹಕರ ನಿದ್ದೆ ಕದ್ದಿದೆ.

ಮಧ್ಯಮ ವರ್ಗದವರಿಗೆ ಬಂಪರ್ ಆಫರ್.. 5 ಲಕ್ಷಕ್ಕೆ ನಿಸ್ಸಾನ್ 7 ಸೀಟರ್ ಕಾರು

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್‌ನ 7 ಸೀಟರ್ ಕಾರುಗಳಿಗೆ ಯಾವಾಗಲೂ ಭಾರಿ ಡಿಮ್ಯಾಂಡ್ ಇರುತ್ತದೆ. ಕುಟುಂಬದ ಜೊತೆ ಆರಾಮಾಗಿ ಪ್ರಯಾಣಿಸಲು ಹೆಚ್ಚಿನವರು 7 ಸೀಟರ್ ಕಾರುಗಳನ್ನೇ ಇಷ್ಟಪಡುತ್ತಾರೆ. ಆದರೆ ಬಜೆಟ್ ಸಮಸ್ಯೆಯಿಂದ ಹಲವರು ಹಿಂದೆ ಸರಿಯುತ್ತಾರೆ. ಈ ಸಮಸ್ಯೆಗೆ ಪರಿಹಾರವಾಗಿ ಪ್ರಸಿದ್ಧ ಆಟೋಮೊಬೈಲ್ ಕಂಪನಿ ನಿಸ್ಸಾನ್ ತನ್ನ ಹೊಸ ಎಂಪಿವಿ ಮಾಡೆಲ್ 'ನಿಸ್ಸಾನ್ ಗ್ರಾವಿಟ್' (Nissan Gravite) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೇವಲ 5 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಸಿಗುತ್ತಿರುವ ಈ ಕಾರು, ಮೈಲೇಜ್ ಮತ್ತು ಫೀಚರ್‌ಗಳಲ್ಲಿ ಬೇರೆ ಕಾರುಗಳಿಗೆ ಟಫ್ ಕಾಂಪಿಟೇಶನ್ ನೀಡುತ್ತಿದೆ.

ಕಿಲ್ಲರ್ ಲುಕ್, ಮಾಡರ್ನ್ ಡಿಸೈನ್

ನಿಸ್ಸಾನ್ ಗ್ರಾವಿಟ್ ಕಾರು ಹೊರಗಿನಿಂದ ನೋಡಲು ತುಂಬಾ ಆಕರ್ಷಕವಾಗಿದೆ. ಮುಂಭಾಗದಲ್ಲಿರುವ ಗ್ಲಾಸ್ ಬ್ಲಾಕ್ ಫ್ರಂಟ್ ಗ್ರಿಲ್ ಮತ್ತು ಹೆಕ್ಸಾಗನ್ ಇನ್ಸರ್ಟ್‌ಗಳು ಕಾರಿಗೆ ಮಾಡರ್ನ್ ಲುಕ್ ಕೊಡುತ್ತವೆ. ಸ್ಟೈಲಿಶ್ ಎಲ್ಇಡಿ ಡಿಆರ್‌ಎಲ್, ಸ್ಮೋಕ್ಡ್ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್‌ಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಇದರ ಜೊತೆಗೆ 15-ಇಂಚಿನ ಫ್ಲೆಕ್ಸ್ ವೀಲ್ಸ್, ರೂಫ್ ರೈಲ್ಸ್ ಮತ್ತು ಸಿಲ್ವರ್ ಆಕ್ಸೆಂಟ್‌ಗಳು ಈ 7 ಸೀಟರ್ ಕಾರಿಗೆ ಎಸ್‌ಯುವಿ ಫೀಲ್ ನೀಡುತ್ತವೆ.

ಕಿಂಗ್ ಸೈಜ್ ಕ್ಯಾಬಿನ್; ಸೂಪರ್ ಫೀಚರ್‌ಗಳು

ಕಾರಿನ ಇಂಟೀರಿಯರ್ ವಿಚಾರದಲ್ಲಿ ನಿಸ್ಸಾನ್ ಯಾವುದೇ ರಾಜಿ ಮಾಡಿಕೊಂಡಿಲ್ಲ. 7 ಜನ ಆರಾಮಾಗಿ ಕೂರುವಂತಹ ವೈಡ್ ಸೀಟಿಂಗ್ ಆಯ್ಕೆಯನ್ನು ಕಂಪನಿ ನೀಡಿದೆ. ಕ್ಯಾಬಿನ್‌ನಲ್ಲಿರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪ್ರಮುಖ ಆಕರ್ಷಣೆಯಾಗಿದೆ. ಇದರ ಜೊತೆಗೆ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಡ್ರೈವರ್ ಆರ್ಮ್‌ರೆಸ್ಟ್‌ನಂತಹ ಆಧುನಿಕ ಫೀಚರ್‌ಗಳನ್ನು ಒದಗಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಿಂದಿನ ಸೀಟ್‌ಗಳಿಗೂ ಎಸಿ ವೆಂಟ್‌ಗಳನ್ನು ನೀಡಲಾಗಿದೆ.

ಪವರ್‌ಫುಲ್ ಎಂಜಿನ್; ಲೀಟರ್‌ಗೆ 24 ಕಿ.ಮೀ ಮೈಲೇಜ್

ನಿಸ್ಸಾನ್ ಗ್ರಾವಿಟ್ ಕಾರು 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 71 bhp ಪವರ್ ಮತ್ತು 96 Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ. ಇಂಧನ ಉಳಿತಾಯದ ವಿಚಾರದಲ್ಲಿ ಇದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತದೆ. ಪೆಟ್ರೋಲ್ ಜೊತೆಗೆ ಡ್ಯುಯಲ್ ಸಿಲಿಂಡರ್ ಸಿಎನ್‌ಜಿ (CNG) ವೇರಿಯೆಂಟ್‌ನಲ್ಲೂ ಇದು ಸಿಗುತ್ತದೆ. ಇದು ಲೀಟರ್‌ಗೆ ಗರಿಷ್ಠ 24 ಕಿಲೋಮೀಟರ್‌ಗಳವರೆಗೆ ಬೆಸ್ಟ್ ಮೈಲೇಜ್ ನೀಡುವುದು ಇದರ ಪ್ಲಸ್ ಪಾಯಿಂಟ್.

ಸುರಕ್ಷತೆಯಲ್ಲಿ ಕಾಂಪ್ರಮೈಸ್ ಇಲ್ಲವೇ ಇಲ್ಲ

ಪ್ರಯಾಣಿಕರ ರಕ್ಷಣೆಗಾಗಿ ಈ ಕಾರಿನಲ್ಲಿ ಭಾರಿ ಸೇಫ್ಟಿ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳನ್ನು ನೀಡಿರುವುದು ವಿಶೇಷ. ಇದರ ಜೊತೆಗೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರೈನ್ ಸೆನ್ಸಿಂಗ್ ವೈಪರ್‌ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಮಾಡರ್ನ್ ಸೇಫ್ಟಿ ಫೀಚರ್‌ಗಳು ನಿಮ್ಮ ಪ್ರಯಾಣವನ್ನು ಸೇಫ್ ಮಾಡುತ್ತವೆ.

ಬೆಲೆ ಮತ್ತು ವೇರಿಯೆಂಟ್‌ಗಳ ಡೀಟೇಲ್ಸ್ ಇಲ್ಲಿದೆ

ನಿಸ್ಸಾನ್ ಗ್ರಾವಿಟ್ ಕಾರು ವಿಸಿಯಾ (Visia), ಎಸೆಂಟಾ (Acenta), ಎನ್-ಕನೆಕ್ಟಾ (N-Connecta) ಮತ್ತು ಟೆಕ್ನಾ (Tekna) ಎಂಬ ನಾಲ್ಕು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಕಂಪನಿಯು ಇದರ ಆರಂಭಿಕ ಎಕ್ಸ್-ಶೋರೂಮ್ ಬೆಲೆಯನ್ನು ಸುಮಾರು 5.65 ಲಕ್ಷ ರೂ. ನಿಗದಿಪಡಿಸಿದೆ. ವಿವಿಧ ವೇರಿಯೆಂಟ್‌ಗಳಿಗೆ ಅನುಗುಣವಾಗಿ ಬೆಲೆ 5.65 ಲಕ್ಷದಿಂದ 11.30 ಲಕ್ಷ ರೂ.ವರೆಗೆ ಇರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟಾಟಾ ಪಂಚ್ ಮತ್ತು ಕಿಯಾ ಕ್ಯಾರೆನ್ಸ್ ಕಾರುಗಳಿಗೆ ಇದು ಟಫ್ ಫೈಟ್ ನೀಡುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಫೀಚರ್ಸ್ ಮತ್ತು ಮೈಲೇಜ್ ಬಯಸುವ ಕುಟುಂಬಗಳಿಗೆ ಇದೊಂದು ಬೆಸ್ಟ್ ಆಯ್ಕೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮ್ಯಾಚ್ ನೋಡುತ್ತಿದ್ದದ್ದು ಯಾಕೆ? ಆ ಸತ್ಯ ಬಿಚ್ಚಿಟ್ಟ ಗಂಗೂಲಿ
Asian Games 2026 ಪವರ್ ಪ್ಲೇನಲ್ಲೇ ಜಪಾನ್ ಧೂಳೀಪಟ: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತೀಯ ವನಿತೆಯರು