ಟಿ20 ವಿಶ್ವಕಪ್‌ಗೂ ಮುನ್ನ ವೆಸ್ಟ್ ಇಂಡೀಸ್‌ ನಾಯಕರಾಗಿ ನಿಕೋಲಸ್ ಪೂರನ್‌ ನೇಮಕ

By Naveen KodaseFirst Published May 4, 2022, 1:18 PM IST
Highlights

* ವಿಂಡೀಸ್ ನೂತನ ನಾಯಕರಾಗಿ ನಿಕೋಲಸ್ ಪೂರನ್ ನೇಮಕ

* ಕೀರನ್ ಪೊಲ್ಲಾರ್ಡ್ ಅವರಿಂದ ತೆರವಾಗಿದ್ದ ವಿಂಡೀಸ್ ನಾಯಕ ಹುದ್ದೆ

* ವಿಂಡೀಸ್ ಸೀಮಿತ ಓವರ್‌ಗಳ ತಂಡಕ್ಕೆ ಪೂರನ್‌ ಹೊಸ ನಾಯಕ

ಸೇಂಟ್‌ ಜಾನ್ಸ್‌(ಮೇ.04): ಕೀರನ್‌ ಪೊಲ್ಲಾರ್ಡ್‌ (Kieron Pollard) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ತೆರವಾಗಿರುವ ವೆಸ್ಟ್‌ಇಂಡೀಸ್‌ ಏಕದಿನ ಹಾಗೂ ಟಿ20 ತಂಡಗಳ ನಾಯಕನ ಸ್ಥಾನಕ್ಕೆ ನಿಕೋಲಸ್‌ ಪೂರನ್‌ (Nicholas Pooran) ನೇಮಕಗೊಂಡಿದ್ದಾರೆ. ಪೂರನ್‌ ಕಳೆದ ವರ್ಷ ಆಸ್ಪ್ರೇಲಿಯಾ ವಿರುದ್ಧ ತವರಿನ ಸರಣಿಯಲ್ಲಿ ಪೊಲ್ಲಾರ್ಡ್‌ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದೇ ತಿಂಗಳು ನೆದರ್‌ಲೆಂಡ್ಸ್‌ ವಿರುದ್ಧದ ಏಕದಿನ ಸರಣಿಯಿಂದ ಅವರು ಪೂರ್ಣಾವಧಿ ನಾಯಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೀರನ್ ಪೊಲ್ಲಾರ್ಡ್‌ ವಿದಾಯ ಘೋಷಿಸಿದ ಬೆನ್ನಲ್ಲೇ ವೆಸ್ಟ್‌ಇಂಡೀಸ್‌ ಏಕದಿನ ಹಾಗೂ ಟಿ20 ತಂಡಗಳ ನಾಯಕನಾಗಿ ನಿಕೋಲಸ್ ಪೂರನ್ ಅಧಿಕಾರ ಸ್ವೀಕರಿಸಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿ (West Indies Cricket Board) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲ ಕೀರನ್ ಪೊಲ್ಲಾರ್ಡ್ ನಾಯಕರಾಗಿದ್ದಾಗ, ನಿಕೋಲಸ್ ಪೂರನ್‌ ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡದ ಉಪನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದೊಂದು ವರ್ಷದಿಂದ ಉಪನಾಯಕರಾಗಿದ್ದ ನಿಕೋಲಸ್ ಪೂರನ್, ಇದೀಗ ಕೀರನ್ ಪೊಲ್ಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರಿಂದಾಗಿ, ಪೂರನ್ ವಿಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (ICC T20 World Cup) ಹಾಗೂ 2023ರಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಿಕೋಲಸ್ ಪೂರನ್ ನಾಯಕನಾಗಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್‌ ಶಾಯ್ ಹೋಮ್‌ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ವೆಸ್ಟ್ ಇಂಡೀಸ್‌ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ಮುಂಬರುವ ಸವಾಲುಗಳನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎನ್ನುವ ವಿಶ್ವಾಸ ನಮಗಿದೆ. ತಮ್ಮ ಅನುಭವ ಹಾಗೂ ಅದ್ಭುತ ಪ್ರದರ್ಶನದ ಮೂಲಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದು ವೆಸ್ಟ್ ಇಂಡೀಸ್‌ ಕ್ರಿಕೆಟ್ ಮಂಡಳಿಯ ಡೈರೆಕ್ಟರ್‌ ಜಿಮ್ಮಿ ಆಡಮ್ಸ್‌ ಹೇಳಿದ್ದಾರೆ.

ಪಡುಕೋಣೆ-ದ್ರಾವಿಡ್ ಕೇಂದ್ರಕ್ಕೆ ಅನುರಾಗ್ ಭೇಟಿ, ವಿಶ್ವದರ್ಜೆ ಸೌಲಭ್ಯಗಳ ಬಗ್ಗೆ ಸಚಿವರ ಮೆಚ್ಚುಗೆ

ನಾನು ವೆಸ್ಟ್ ಇಂಡೀಸ್‌ ಕ್ರಿಕೆಟ್‌ ತಂಡದ ನಾಯಕರಾಗಿ ನೇಮಕವಾಗಿರುವುದು ನನ್ನ ಪಾಲಿಗೆ ತುಂಬಾ ಗೌರವದ ವಿಷಯವಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ತನ್ನದೇ ಆದ ಪರಂಪರೆಯಿದೆ. ನಾನು ತಂಡದ ಹಲವು ದಿಗ್ಗಜ ನಾಯಕರ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ನಿಕೋಲಸ್ ಪೂರನ್ ಹೇಳಿದ್ದಾರೆ. ಇದೊಂದು ಪ್ರತಿಷ್ಠಿತ ಹುದ್ದೆಯಾಗಿದ್ದು, ಇದು ನನ್ನ ಪಾಲಿಗೆ ಸಿಕ್ಕಂತಹ ಅತಿದೊಡ್ಡ ಗೌರವವಾಗಿದೆ. ನಮ್ಮ ಅಭಿಮಾನಿಗಳು ಹೆಮ್ಮೆ ಪಡುವಂತಹ ಪ್ರದರ್ಶನವನ್ನು ತೋರಲಿದ್ದೇವೆ ಎಂದು ವಿಂಡೀಸ್ ನೂತನ ನಾಯಕ ಪೂರನ್ ಹೇಳಿದ್ದಾರೆ

🚨 JUST IN: Nicholas Pooran has been named the limited-overs captain of West Indies.

Details 👇 https://t.co/U712JWZ2LN

— ICC (@ICC)

ನಿಕೋಲಸ್ ಪೂರನ್ ನಾಯಕರಾಗಿ ಆಯ್ಕೆಯಾದ ಬಳಿಕ ಇದೇ ಮೇ 31ರಿಂದ ನೆದರ್‌ಲೆಂಡ್ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಪೂರ್ಣಪ್ರಮಾಣದ ನಾಯಕರಾಗಿ ನಿಕೋಲಸ್ ಪೂರನ್ ಕಣಕ್ಕಿಳಿಯಲಿದ್ದಾರೆ. ಸದ್ಯ ನಿಕೋಲಸ್ ಪೂರನ್‌ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ

click me!