ಕ್ರಿಕೆಟ್ ಆಡುತ್ತಿದ್ದಾಗ ಯುವ ಕ್ರಿಕೆಟಿಗ ಕುಸಿದು ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಟೀಂ ಇಂಡಿಯಾಗೆ ಆಯ್ಕೆಯಾಗುವ ಕನಸು ಕಂಡಿದ್ದ ಯುವ ಕ್ರಿಕೆಟಿಗನ ಅಗಲಿಕೆ ಆಘಾತ ತಂದಿದೆ.
ಭೋಪಾಲ್(ಅ.06) ಟೀಂ ಇಂಡಿಯಾ ಕನಸು ಕಾಣುತ್ತಾ ಕ್ರಿಕೆಟ್ ಆರಂಭಿಸಿ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಯುವ ಕ್ರಿಕೆಟಿಗ ಆಟವಾಡುತ್ತಲೇ ಮೈದಾನದಲ್ಲಿ ಕುಸಿದು ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಮಧ್ಯಪ್ರದೇಶದ ಸುಸ್ನರ್‌ನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದ ವೇಳೆ 15 ವರ್ಷದ ಯುವ ಕ್ರಿಕೆಟಿಗ ಮಖಾನ್ ಸಿಂಗ್ ಮೃತಪಟ್ಟಿದ್ದಾನೆ. ಮೈದಾನದಲ್ಲಿ ಕುಸಿದು ಬಿದ್ದ ಕೆಲ ಹೊತ್ತಲ್ಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಅಗರ್ ಮಾಲ್ವಾ ಜಿಲ್ಲೆಯ ಆಡಳಿತ ಕಚೇರಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಸುಸ್ನರ್‌ನಲ್ಲಿ ಈ ಘಟನೆ ನಡೆದಿದೆ. ಮಖಾನ್ ಸಿಂಗ್ ಕ್ರಿಕೆಟಿಗನಾಗಬೇಕು ಅನ್ನೋ ಕನಸು ಕಂಡಿದ್ದ. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದ. 15ನೇ ವಯಸ್ಸಿನಲ್ಲಿ ಸುಸ್ನರ್ ಸ್ಥಳೀಯ ಕ್ಲಬ್ ತಂಡದಲ್ಲಿ ಸ್ಥಾನ ಪಡೆದಿದ್ದ. ತಂಡದ ಪ್ರಮುಖ ಆಟಗಾರನಾಗಿ, ತಂಡದ ಹಲವು ಗೆಲುವಿನ ರೂವಾರಿಯಾಗಿ ಗಮನಸೆಳೆದಿದ್ದ.
undefined
ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾದ ಕರ್ನಾಟಕ ಮೂಲದ ಟೀಮ್ ಇಂಡಿಯಾ ಮಾಜಿ ಆಟಗಾರನ ತಾಯಿ!
ಎಂದಿನಂತೆ ಸುಸ್ನರ್ ಮೈದಾನದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಮಖಾನ್ ಸಿಂಗ್ ಅಸ್ವಸ್ಥಗೊಂಡಿದ್ದಾನೆ. ಕ್ರಿಕೆಟ್ ಪಂದ್ಯದ ನಡುವೆಯೇ ಮಖಾನ್ ಸಿಂಗ್ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಮಖಾನ್ ಕುಸಿದು ಬಿದ್ದ ಬೆನ್ನಲ್ಲೇ ಸಹ ಆಟಗಾರರು ನೆರವಿಗೆ ಆಗಮಿಸಿದ್ದಾರೆ. ಮಖಾನ್ ಸಿಂಗ್ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ಮಖಾನ್ ಸಿಂಗ್ ಮುಖಕ್ಕೆ ನೀರು ಚಿಮುಕಿಸಿದ್ದಾರೆ. ಆದರೆ ಮಖಾನ್ ಸಿಂಗ್ ಸ್ಪಂದಿಸಿಲ್ಲ. ಹೀಗಾಗಿ ನೆರವಿಗಾಗಿ ಕೂಗಿ ಕೊಂಡಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಮಖಾನ್ ಸಿಂಗ್ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಸ್ಥಳೀಯರ ನೆರವಿನಿಂದ ಮಖಾನ್ ಸಿಂಗ್‌ನನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಖಾನ್ ಸಿಂಗ್ ಮೃತಪಟ್ಟಿರುವುದಾಗಿ ದೃಢಡಿಸಿದ್ದಾರೆ. ಈ ಮಾಹಿತಿ ತಿಳಿದ ಪೋಷಕರು ಕಂಗಾಲಾಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ. ಇತ್ತ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆ ಧಾವಿಸಿ ಘಟನೆ ಕುರಿತು ವಿವರಣೆ ಕೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಹೃದಯಾಘಾತ ಅಥವಾ ಬೇರೆ ಯಾವ ಕಾರಣಗಳಿಂದ 15 ವರ್ಷದ ಬಾಲಕ ಮೃತಪಟ್ಟಿದ್ದಾನೆ ಅನ್ನೋದು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸರ್ಕಾರ ಒಪ್ಪಿಗೆ ನೀಡಿದರೆ ಭಾರತ ತಂಡ ಪಾಕ್‌ಗೆ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ