ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: ಮತ್ತೆ ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್‌

By Kannadaprabha News  |  First Published Jun 14, 2021, 12:38 PM IST

* ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌ನಲ್ಲಿ ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್

* ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ನಂ.1 ಸ್ಥಾನಕ್ಕೇರಿದ ಕಿವೀಸ್‌

* ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ


ದುಬೈ(ಜೂ.14): ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ನ್ಯೂಜಿಲೆಂಡ್‌, ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ ಮತ್ತೊಮ್ಮೆ ನಂ.1 ಸ್ಥಾನಕ್ಕೇರಿದೆ. 

ಟೆಸ್ಟ್‌ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ ಮೊದಲ ಸ್ಥಾನದಲ್ಲಿರುವುದು ವಿಶೇಷ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ಈ ಬೆಳವಣಿಗೆ ಕಿವೀಸ್‌ಗೆ ಮಾನಸಿಕ ಮುನ್ನಡೆ ನೀಡಿದೆ. ನ್ಯೂಜಿಲೆಂಡ್‌ 123 ರೇಟಿಂಗ್‌ ಅಂಕಗಳನ್ನು ಹೊಂದಿದ್ದರೆ, ಭಾರತ 121 ರೇಟಿಂಗ್‌ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆಸ್ಪ್ರೇಲಿಯಾ 3ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್‌ 4ನೇ ಸ್ಥಾನಕ್ಕೆ ಕುಸಿದಿದೆ.

🇳🇿 The are the new No.1 in the ICC Test Team Rankings, displacing India from the top spot 👏

Full rankings: https://t.co/79zdXNr0Dv pic.twitter.com/iZuC2gJRrs

— ICC (@ICC)

Tap to resize

Latest Videos

ಇಂಗ್ಲೆಂಡ್‌ ವಿರುದ್ಧ ಕಿವೀಸ್‌ಗೆ 1-0 ಸರಣಿ ಗೆಲುವು

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ತಂಡ 2014ರ ಬಳಿಕ ಮೊದಲ ಬಾರಿಗೆ ತವರಿನಲ್ಲಿ ಟೆಸ್ಟ್‌ ಸರಣಿ ಸೋತಿದೆ. ನ್ಯೂಜಿಲೆಂಡ್‌ ಕ್ರಿಕೆಟ್ ತಂಡದ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 8 ವಿಕೆಟ್‌ಗಳ ಹೀನಾಯ ಸೋಲು ಅನುಭಿಸಿತು. 2 ಪಂದ್ಯಗಳ ಸರಣಿಯನ್ನು ನ್ಯೂಜಿಲೆಂಡ್‌ 1-0 ಅಂತರದಲ್ಲಿ ಗೆದ್ದುಕೊಂಡಿತು. 

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್: ರೋಹಿತ್-ಬೌಲ್ಟ್ ಫೈಟ್ ನೋಡಲು ಕಾಯುತ್ತಿದ್ದೇನೆಂದ ಸೆಹ್ವಾಗ್

The come out on top ✌️

New Zealand seal their first Test series victory in England since 1999, after an eight-wicket win in Edgbaston! | https://t.co/ukVyuJQZm0 pic.twitter.com/fEzTHYnAq3

— ICC (@ICC)

2ನೇ ಇನ್ನಿಂಗ್ಸ್‌ನಲ್ಲಿ ಕುಸಿತ ಕಂಡ ಇಂಗ್ಲೆಂಡ್‌ 3ನೇ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 122 ರನ್‌ ಗಳಿಸಿತ್ತು. 4ನೇ ದಿನವಾದ ಭಾನುವಾರ ಮೊದಲ ಎಸೆತದಲ್ಲೇ ಓಲಿ ಸ್ಟೋನ್‌ ಔಟಾದರು. 38 ರನ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, 2 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. 7 ವರ್ಷಗಳ ಹಿಂದೆ ಶ್ರೀಲಂಕಾ ವಿರುದ್ಧ ಸರಣಿ ಸೋತಿದ್ದ ಇಂಗ್ಲೆಂಡ್‌, ಮೊದಲ ಬಾರಿಗೆ ತವರಿನಲ್ಲಿ ಸರಣಿ ಕೈಚೆಲ್ಲಿತು.

ಸ್ಕೋರ್‌:

ಇಂಗ್ಲೆಂಡ್: 303 ಹಾಗೂ 122

ನ್ಯೂಜಿಲೆಂಡ್‌ 388 ಹಾಗೂ 41/2

click me!