ಉಗ್ರರ ಪೋಷಿಸಿ ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ; ಮುಖಭಂಗ ತಪ್ಪಿಸಲು ಹರಸಾಹಸ!

By Suvarna NewsFirst Published Sep 17, 2021, 8:25 PM IST
Highlights
  • ಭದ್ರತೆ ಕಾರಣದಿಂದ ಪಂದ್ಯ ಆರಂಭಕ್ಕೂ ಮುನ್ನ ಸರಣಿ ರದ್ದು
  • ಪಾಕಿಸ್ತಾನ ವಿರುದ್ದದ ನಿಗದಿತ ಓವರ್ ಸರಣಿ ರದ್ದು ಮಾಡಿದ ಕಿವೀಸ್
  • ಉಗ್ರರ ದಾಳಿ ಭೀತಿ ಕಾರಣ ಪಾಕ್ ವಿರುದ್ಧದ ಸರಣಿ ಕ್ಯಾನ್ಸಲ್
  • ಉಗ್ರರ ಪೋಷಿಸಿದ ಪಾಕಿಸ್ತಾನಕ್ಕೆ ತಕ್ಕ ಪಾಠ

ರಾವಲ್ಪಿಂಡಿ(ಸೆ.17): ಪಾಕಿಸ್ತಾನ ಉಗ್ರವಾದ ನಿಲ್ಲಿಸಬೇಕು ಎಂದು ಭಾರತ ನೀಡಿದ ಹಲವು ವಾರ್ನಿಂಗ್ ಪಾಕಿಸ್ತಾನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇದರ ಜೊತೆಗೆ ಹಲವರು ಪಾಕಿಸ್ತಾನ ಸ್ವರ್ಗಕ್ಕೆ ಸಮಾನ ಎಂದು ಬಣ್ಣಿಸಿ ಅಟ್ಟಕ್ಕೇರಿಸಿದ ಉದಾಹರಣೆಗಳು ಇವೆ. ಆದರೆ ಉಗ್ರರ ಪೋಷಿಸುವ ಪಾಕಿಸ್ತಾನ ಇದೀಗ ಜಗತ್ತಿನೆದುರು ಮತ್ತೊಮ್ಮೆ ಬೆತ್ತಲಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪಂದ್ಯ ಆರಂಭಕ್ಕೂ ಮುನ್ನ ಟೂರ್ನಿ ರದ್ದು ಮಾಡಿದೆ. ಇದರಿಂದ ಪಾಕಿಸ್ತಾನ ಭಾರಿ ಮುಖಭಂಗಕ್ಕೊಳಗಾಗಿದೆ.

ಉಗ್ರರ ದಾಳಿ ಭೀತಿ; ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಪ್ರವಾಸ ರದ್ದು ಮಾಡಿದ ನ್ಯೂಜಿಲೆಂಡ್!

3 ಏಕದಿನ ಹಾಗೂ 5 ಟಿ20 ಸರಣಿಗಾಗಿ ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಇಂದು ರಾವಲ್ಪಿಂಡಿಯಲ್ಲಿನ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿತ್ತು. ಆದರೆ ಕಿವೀಸ್ ಆಟಗಾರರು ಹೊಟೆಲ್‌ನಿಂದ ಹೊರಬಂದಿಲ್ಲ. ಕಾರಣ ನ್ಯೂಜಿಲೆಂಡ್ ಆಟಗಾರರ ಮೇಲೆ ದಾಳಿ ಭೀತಿ ಆವರಿಸಿತ್ತು. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಯಾರೂ ಕೂಡ ಹೊಟೆಲ್‌ನಿಂದ ಹೊರಬರದಂತೆ ಸೂಚಿಸಿತ್ತು. 

ಮೊದಲ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆಗೆ ಕೆಲ ಕ್ಷಣಗಳು ಬಾಕಿ ಇರುವಾಗ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪಾಕಿಸ್ತಾನ ವಿರುದ್ಧದ ನಿಗದಿತ ಓವರ್ ಟೂರ್ನಿ ರದ್ದು ಮಾಡುವುದಾಗಿ ಘೋಷಿಸಿತು. ನ್ಯೂಜಿಲೆಂಡ್ ಭದ್ರತಾ ದಳ ಉಗ್ರರ ದಾಳಿ ಭೀತಿ ಕುರಿತು ಎಚ್ಚರಿಕೆ ನೀಡಿದೆ ಎಂದು ಮಂಡಳಿ ಹೇಳಿದೆ.

ನ್ಯೂಜಿಲೆಂಡ್ ನಿರ್ಧಾರದಿಂದ ಪಾಕಿಸ್ತಾನ ಕೆರಳಿ ಕೆಂಡವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೂತನ ಚೇರ್ಮೆನ್ ರಮೀಝ್ ರಾಜಾ ತಿರುಗೇಟು ನೀಡಿದ್ದಾರೆ. ನ್ಯೂಜಿಲೆಂಡ್ ಯಾವ ಕಾಲದಲ್ಲಿ ಇದೆ. ನ್ಯೂಜಿಲೆಂಡ್ ಒಪ್ಪಂದ ರದ್ದು ಮಾಡುವ ಮೂಲಕ ನಿಯಮ ಉಲ್ಲಂಘಿಸಿದೆ. ಹೀಗಾಗಿ ಐಸಿಸಿ ಶಿಕ್ಷೆಗೆ ಗುರಿಯಾಬೇಕು ಎಂದು ರಾಜಾ ಹೇಳಿದ್ದಾರೆ.

ಮಾಜಿ ವೇಗಿ ಶೋಯೆಬ್ ಅಕ್ತರ್ ನ್ಯೂಜಿಲೆಂಡ್ ಕ್ರಿಕೆಟ್ ಪಾಕಿಸ್ತಾನವನ್ನು ಹತ್ಯೆ ಮಾಡಿದೆ ಎಂದು ಪ್ರತಿಕ್ರಿಯೆಸಿದ್ದಾರೆ. ಆದರೆ ಇದು ಪಾಕಿಸ್ತಾನ ಉಗ್ರರ ಪೋಷಿಸಿದ ಪರಿಣಾಮ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!