ಟೀಂ ಇಂಡಿಯಾ ಆಸೀಸ್ ಪ್ರವಾಸಕ್ಕೆ ನ್ಯೂ ಸೌತ್ ವೇಲ್ಸ್ ಒಪ್ಪಿಗೆ

By Kannadaprabha News  |  First Published Oct 23, 2020, 9:33 AM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದು, ಈ ವೇಳೆ ಭಾರತ ತಂಡದ ಆಟಗಾರರು ಸಿಡ್ನಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಪೂರ್ವ ಅಭ್ಯಾಸ ನಡೆಸಬೇಕಿದೆ. ಇದಕ್ಕೆ ನ್ಯೂ ಸೌಥ್ ವೇಲ್ಸ್ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಸಿಡ್ನಿ(ಅ.23): ಭಾರತ ಹಾಗೂ ಆಸ್ಪ್ರೇಲಿಯಾ ನಡುವಣ ಸೀಮಿತ ಓವರ್‌ಗಳ ಪಂದ್ಯಗಳಿಗೆ ಸಿಡ್ನಿ ಹಾಗೂ ಕ್ಯಾನ್‌ಬೆರ್ರಾ ಆತಿಥ್ಯ ವಹಿಸಲಿವೆ. ಮುಂದಿನ ತಿಂಗಳು ಭಾರತ, ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನ್ಯೂ ಸೌತ್‌ ವೇಲ್ಸ್‌ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಭಾರತ ತಂಡದ ಆಟಗಾರರು ಸಿಡ್ನಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಪೂರ್ವ ಅಭ್ಯಾಸ ನಡೆಸಬೇಕಿದೆ. ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುವ ಆಸ್ಪ್ರೇಲಿಯಾ ಆಟಗಾರರು ಕೂಡ, ಸಿಡ್ನಿಯಲ್ಲೇ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.

ಭಾರತ ಕ್ರಿಕೆಟ್‌ ತಂಡ, ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ಇಳಿಯಬೇಕಿತ್ತು. ಆದರೆ ಇಲ್ಲಿನ ಕ್ವೀನ್ಸ್‌ಲ್ಯಾಂಡ್‌ ರಾಜ್ಯ ಆರೋಗ್ಯಾಧಿಕಾರಿಗಳು 14 ದಿನಗಳ ಕ್ವಾರಂಟೈನ್‌ ಅವಧಿಯನ್ನು ಖಡ್ಡಾಯಗೊಳಿಸಿದ್ದರು. ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್‌ ಅವಧಿಯನ್ನು ಕಡಿಮೆಗೊಳಿಸಿ, ಪೂರ್ವಭ್ಯಾಸಕ್ಕೆ ಅವಕಾಶ ನೀಡಲು ಕೋರಿತ್ತು. ಇದನ್ನು ಕ್ವೀನ್ಸ್‌ಲ್ಯಾಂಡ್‌ ಆರೋಗ್ಯ ಇಲಾಖೆ ಮಾನ್ಯ ಮಾಡಿರಲಿಲ್ಲ.

Latest Videos

undefined

ತಮ್ಮ ಬ್ಯಾಕ್‌ಫುಟ್ ಢಿಫೆನ್ಸ್ ಗುಟ್ಟು ಶೇರ್ ಮಾಡಿದ ಕ್ರಿಕೆಟ್ 'ದೇವರು

ಭಾರತ ತಂಡ, ಆಸೀಸ್‌ ಪ್ರವಾಸದಲ್ಲಿ 3 ಟಿ20, 3 ಏಕದಿನ ಹಾಗೂ 4 ಟೆಸ್ಟ್‌ ಪಂದ್ಯಗಳನ್ನಾಡಲಿದೆ. ನ.27ರಿಂದ ಏಕದಿನ ಸರಣಿ, ಡಿ.4 ರಿಂದ ಟಿ20 ಸರಣಿ ಹಾಗೂ ಡಿ.17ರಿಂದ ಟೆಸ್ಟ್‌ ಸರಣಿ ನಡೆಯಲಿದೆ.

ಆಸ್ಪ್ರೇಲಿಯಾ ಪ್ರವಾಸಕ್ಕೆ ಭಾರತದ 32 ಸದಸ್ಯರ ತಂಡ

ನವದೆಹಲಿ: ಐಪಿಎಲ್‌ ಮುಕ್ತಾಯದ ಬಳಿಕ ಟೀಂ ಇಂಡಿಯಾ ಆಸ್ಪ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಆಸೀಸ್‌ ಪ್ರವಾಸಕ್ಕಾಗಿ ಭಾರತ 32 ಸದಸ್ಯರ ತಂಡವನ್ನು ಪ್ರಕಟಿಸಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಸಾಮಾನ್ಯವಾಗಿ ಪ್ರವಾಸ ಕ್ರಿಕೆಟ್‌ ಸರಣಿಗೆ ಒಂದು ತಂಡ 15 ರಿಂದ 16 ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳನ್ನಷ್ಟೇ ಕಳುಹಿಸಲಾಗುತ್ತದೆ. ಆದರೆ ಈ ಬಾರಿ ಆಸೀಸ್‌ ಪ್ರವಾಸಕ್ಕೆ 32 ಕ್ರಿಕೆಟಿಗರು, ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟಾರೆ 50ಕ್ಕೂ ಹೆಚ್ಚು ಮಂದಿ ತೆರಳಲಿದ್ದಾರೆ ಎನ್ನಲಾಗಿದೆ.

ಕೊರೋನಾ ಕಾರಣದಿಂದ ಪ್ರವಾಸದ ಮಧ್ಯೆ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಅಥವಾ ಗಾಯಗೊಂಡರೆ ತಕ್ಷಣಕ್ಕೆ ಬದಲಿ ಆಟಗಾರರನ್ನು ಇಲ್ಲಿಂದ ಕಳುಹಿಸಲು ನಿಯಮಗಳು ಅಡ್ಡಿ ಬರಲಿವೆ. ಇನ್ನು ಆಸೀಸ್‌ನಲ್ಲಿ ಸುರಕ್ಷಿತವಾಗಿ ಅಭ್ಯಾಸ ನಡೆಸಲು, ಅಭ್ಯಾಸ ಪಂದ್ಯಗಳನ್ನಾಡಲು ಪ್ರಥಮ ದರ್ಜೆ ಆಟಗಾರರು ಬೇಕಿದೆ. ಇವರೆಲ್ಲರನ್ನು ಬಿಸಿಸಿಐ ಒಟ್ಟಿಗೆ ಕಳುಹಿಸುವ ಯೋಚನೆ ಹೊಂದಿದೆ. ಈ ನಡುವೆ ಕ್ರಿಕೆಟ್‌ ಆಟಗಾರರ ಜೊತೆ ಕುಟುಂಬ ಆಸ್ಪ್ರೇಲಿಯಾ ಪ್ರವಾಸಕ್ಕೆ ತೆರಳುವಂತಿಲ್ಲ ಎಂದು ಬಿಸಿಸಿಐ ಹೇಳಿದೆ.

click me!