ಪ್ರಧಾನಿ ಮೋದಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಪಿಂಕ್ ಬಾಲ್ ಟೆಸ್ಟ್..!

By Suvarna NewsFirst Published Oct 21, 2020, 6:44 PM IST
Highlights

ಭಾರತ ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯಾಡಲಿದ್ದು, ಈ ವೇಳೆ ಅಹಮದಾಬಾದ್‌ನಲ್ಲಿ ಆಂಗ್ಲರ ಎದುರು ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ ಆಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೋಲ್ಕತ(ಅ.21): ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹಗಲು-ರಾತ್ರಿ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ. 

ಈ ಬಾರಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಂಗಳವಾರ ಹೇಳಿದ್ದಾರೆ. ಜನವರಿ-ಮಾರ್ಚ್ ನಲ್ಲಿ ಇಂಗ್ಲೆಂಡ್‌ ತಂಡ, ಭಾರತ ಪ್ರವಾಸ ಕೈಗೊಳ್ಳಲಿದ್ದು 5 ಟೆಸ್ಟ್‌ ಮತ್ತು ಸೀಮಿತ ಓವರ್‌ ಪಂದ್ಯಗಳ ಸರಣಿಯನ್ನಾಡಲಿದೆ. 

RCB ವಿರುದ್ಧದ ಪಂದ್ಯಕ್ಕೆ ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ?

ಬಯೋ-ಸೆಕ್ಯೂರ್‌ ಬಬಲ್ಸ್‌ನಲ್ಲಿ ಭಾರತದಲ್ಲಿ ಕ್ರಿಕೆಟ್‌ ಟೂರ್ನಿ ನಡೆಸಲು ಅವಕಾಶವಿದೆ. ಅಹಮದಾಬಾದ್‌, ಧರ್ಮಶಾಲಾ ಮತ್ತು ಕೋಲ್ಕತಾ ಕ್ರೀಡಾಂಗಣಗಳಲ್ಲಿ ಟೆಸ್ಟ್‌ ಪಂದ್ಯ ನಡೆಸಲು ನಿರ್ಧರಿಸಲಾಗಿದೆ. ಆದರೆ ಅಂತಿಮವಾಗಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಕಳೆದ ವರ್ಷದ ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಡಿತ್ತು. ಈ ಪಂದ್ಯಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಈ ಪಂದ್ಯವನ್ನು ಟೀಂ ಇಂಡಿಯಾ ಅನಾಯಾಸವಾಗಿ ಗೆದ್ದುಕೊಂಡಿತ್ತು.
 

click me!