
ಗ್ಲಾಸ್ಗೋ(ಸ್ಕಾಟೆಂಡ್): ನೇಪಾಳ ಹಾಗೂ ನೆದರ್‌ಲೆಂಡ್ ನಡುವಿನ ತ್ರಿಕೋನ ಟಿ20 ಸರಣಿಯ ಪಂದ್ಯ ಮೂರು ಸೂಪರ್‌ಗಳಿಗೆ ಸಾಕ್ಷಿಯಾಗಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೇ ಮೊದಲು. ಈ ವರೆಗೂ ಯಾವುದೇ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪಂದ್ಯವೊಂದರಲ್ಲಿ 2ಕ್ಕಿಂತ ಹೆಚ್ಚು ಬಾರಿ ಓವರ್ ಸೂಪರ್ ಆಡಿಸಲಾಗಿರಲಿಲ್ಲ.
ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್‌ಲೆಂಡ್ 7 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತು. ತೇಜ ನಿಡಮನೂರು 35, ವಿಕ್ರಂಜಿತ್ ಸಿಂಗ್ 30, ಸಾಖಿಬ್ ಝುಲಿಕರ್ 25 ರನ್ ಸಿಡಿಸಿದರು. ಇನ್ನು ಗುರಿ ಬೆನ್ನತ್ತಿದ ನೇಪಾಳ ತಂಡ 8 ವಿಕೆಟ್‌ಗೆ 152 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯಿತು. ನಾಯಕ ರೋಹಿತ್ ಪೌಡೆಲ್ 35 ಎಸೆತಕ್ಕೆ 48, ಕುಶಾಲ್ 34 ರನ್ ಸಿಡಿಸಿದರು. ಕೊನೆ ಎಸೆತಕ್ಕೆ 5 ರನ್ ಬೇಕಿದ್ದಾಗ ನಂದನ್ ಯಾದವ್ ಬೌಂಡರಿ ಬಾರಿಸಿದರು. ಹೀಗಾಗಿ ಸ್ಕೋರ್ ಸಮಬಲಗೊಂಡಿತು. ಬಳಿಕ ಫಲಿತಾಂಶ ನಿರ್ಧರಿಸಲು ನಡೆದ 2 ಸೂಪರ್ ಓವರ್‌ಗಳು ಕೂಡಾ ಟೈ ಆಯಿತು. ಬಳಿಕ 3ನೇ ಸೂಪರ್ ಓವರ್‌ನಲ್ಲಿ ನೆದರ್‌ಲೆಂಡ್ಸ್ ಜಯಭೇರಿ ಬಾರಿಸಿತು.
ಸೂಪರ್ ಓವರ್‌ನಲ್ಲಿ ಶೂನ್ಯಕ್ಕೆ ಆಲೌಟ್ 02ನೇ ಬಾರಿ
ಅಂ.ರಾ. ಟಿ20 ಕ್ರಿಕೆಟ್‌ನ ಸೂಪರ್ ಓವರ್‌ನಲ್ಲಿ ತಂಡಗಳು ಸೊನ್ನೆಗೆ ಆಲೌಟ್ ಆಗಿದ್ದು ಇದು 2ನೇ ಬಾರಿ. ಇತ್ತೀಚೆಗಷ್ಟೇ ಹಾಂಕಾಂಗ್ ವಿರುದ್ಧ ಬಹರೈನ್ ತಂಡ ಕೂಡಾ ಸೂಪರ್ ಓವರ್‌ನಲ್ಲಿ ಸೊನ್ನೆಗೆ ಆಲೌಟಾಗಿತ್ತು.
ಹೇಗಿದ್ದವು ಸೂಪರ್ ಓವರ್‌ಗಳು?
ಸೂಪರ್ ಓವರ್ 1
ನೇಪಾಳ ಮೊದಲು ಬ್ಯಾಟ್ ಮಾಡಿ 1 ವಿಕೆಟ್‌ಗೆ 19 ರನ್ ಗಳಿಸಿತು. ಕುಶಾಲ್ 2 ಸಿಕ್ಸರ್, 1 ಬೌಂಡರಿ ಸಹಿತ 18 ರನ್ ಸಿಡಿಸಿದರು. 20 ರನ್ ಗುರಿ ಪಡೆದ ನೆದರ್ಲೆಂಡ್ಸ್ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿತು. ಪಂದ್ಯ ಮತ್ತೆ ಟೈ ಆಯಿತು. ಕರನ್ ಎಸೆದ ಓವರ್‌ನಲ್ಲಿ ಮ್ಯಾಕ್ಸ್ ಒಡೌಡ್ 2 ಸಿಕ್ಸರ್, 1 ಬೌಂಡರಿ ಬಾರಿಸಿದರು.
ಸೂಪರ್ ಓವರ್ 2
ಈ ಬಾರಿ ನೆದರ್‌ಲೆಂಡ್ ಮೊದಲು ಬ್ಯಾಟ್ ಮಾಡಿತು. ತಂಡ 1 ವಿಕೆಟ್‌ಗೆ 17 ರನ್ ಗಳಿಸಿತು. ಒಡೌಡ್ ಮತ್ತೆ ಅಬ್ಬರಿಸಿ 2 ಸಿಕ್ಸರ್ ಸಿಡಿಸಿದರು. ನೇಪಾಳಕ್ಕೆ 18 ರನ್ ಗುರಿ ಲಭಿಸಿತು. ಮೊದಲ ಎಸೆತಕ್ಕೆ ಪೌಡೆಲ್ ಸಿಕ್ಸರ್ ಬಾರಿಸಿದರೆ, ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಿದ ದೀಪೇಂದ್ರ ಸಿಂಗ್ ಪಂದ್ಯ ವನ್ನು ಮತ್ತೆ ಟೈ ಮಾಡಿದರು.
ಸೂಪರ್ ಓವರ್ 3
ಮೊದಲು ಬ್ಯಾಟ್ ಮಾಡಿದ ನೇಪಾಳ 4 ಎಸೆತಗಳನ್ನು ಎದುರಿಸಿ 2 ವಿಕೆಟ್ ಕಳೆದುಕೊಂಡಿತು. ಸೂಪರ್ ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡರೆ ತಂಡ ಆಲೌಟ್. ಹೀಗಾಗಿ ನೆದರ್‌ಲೆಂಡ್‌ಗೆ 1 ರನ್ ಗುರಿ ಲಭಿಸಿತು. ಮೈಕಲ್ ಲೆವಿಟ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಮಹಾರಾಜ ಟ್ರೋಫಿಯಲ್ಲೂ ನಡೆದಿತ್ತು 3 ಸೂಪರ್ ಓವರ್
ಕಳೆದ ವರ್ಷ ಕರ್ನಾಟಕದ ಮಹಾರಾಜ ಟ್ರೋಫಿ ಟಿ20 ಲೀಗ್ ಕೂಡಾ 3 ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಹುಬ್ಬಳ್ಳಿ ಟೈಗರ್ಸ್ 3ನೇ ಸೂಪರ್ ಓವರ್‌ನಲ್ಲಿ ಸೋಲಿಸಿತ್ತು. ಆದರೆ ಇದೀಗ ಇದೇ ಮೊದಲ ಸಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಸೂಪರ್ ಓವರ್‌ಗೆ ನೆದರ್‌ಲೆಂಡ್ಸ್ ಹಾಗೂ ನೇಪಾಳ ನಡುವಿನ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.