
ಮುತ್ತಯ್ಯ ಮುರಳೀಧರನ್ ಬಯೋಪಿಕ್ ‘800’ ಇಂದಿನಿಂದ ಜಿಯೋ ಸಿನಿಮಾಸ್‌ನಲ್ಲಿ ಪ್ರಸಾರವಾಗಲಿದೆ. ತಮಿಳು, ಕನ್ನಡ, ತೆಲುಗು, ಹಿಂದಿ, ಬೆಂಗಾಲಿ, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಪ್ರೇಕ್ಷಕರು ಈ ಸಿನಿಮಾ ನೋಡಬಹುದಾಗಿದೆ.
ಶ್ರೀಪತಿ ನಿರ್ದೇಶನದ, ಮಧುರ್ ಮಿತ್ತಲ್ ಅಭಿನಯದ ಈ ಚಿತ್ರದ ಪ್ರಚಾರಕ್ಕಾಗಿ ಮುತ್ತಯ್ಯ ಮುರಳೀಧರನ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ಇಲ್ಲಿವೆ-
- ಬಯೋಪಿಕ್ ವಿಚಾರ ಬಂದಾಗ ನಾನು ಸ್ವಲ್ಪ ಹಿಂಜರಿದಿದ್ದೆ. ನನ್ನ ಬದುಕು ನನಗೆ ಗೊತ್ತಿತ್ತು. ಕ್ರಿಕೆಟ್ ಮೈದಾನದ ಒಳಗೆ ಮತ್ತು ಹೊರಗೆ ನನ್ನ ಬದುಕು ಸುಗಮ ಪ್ರಯಾಣ ಆಗಿರಲಿಲ್ಲ. ಹಾಗಾಗಿ ಮತ್ತೆ ಹಳೆಯ ನೆನಪುಗಳಿಗೆ ಹೋಗಿ ಘಾಸಿಗೊಳ್ಳಲು ಇಷ್ಟವಿರಲಿಲ್ಲ. ನಿಧಾನಕ್ಕೆ ಎಲ್ಲರೂ ಸೇರಿ ನನ್ನ ಒಪ್ಪಿಸಿದರು.
'ರಾಧಾ ರಮಣ' ಕಾವ್ಯಾ ಗೌಡ ಪ್ರೆಗ್ನೆಂಟ್; ವಿದೇಶಕ್ಕೆ ಹಾರಿದ ನಟಿ, ಬಂಪ್ ಫೋಟೋ ವೈರಲ್
- ಶ್ರೀಪತಿ ತುಂಬಾ ಶ್ರಮದಿಂದ ಚಿತ್ರಕತೆ ಬರೆದಿದ್ದಾರೆ. ಅವರು ಬರೆಯುವ ಚಿತ್ರಕತೆ ಸತ್ಯವಾಗಿಬೇಕು ಎಂದು ನಾನು ಹೇಳಿದ್ದೆ. ಅದಕ್ಕೆ ಪೂರಕವಾಗಿ ಅವರು ಚಿತ್ರಕತೆ ಬರೆದಿದ್ದಾರೆ. ಸಿನಿಮಾ ನೋಡಿದಾಗ ನನಗೆ ಬಹಳ ಸಂತೋಷವಾಯಿತು. ನಾನು ಹಳೆಯ ನೆನಪುಗಳಿಗೆ ಜಾರಿದೆ.
- ಅಕ್ಟೋಬರ್‌ನಲ್ಲಿ ಈ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ನಡೆದ ಪ್ರೀಮಿಯರ್‌ಗೆ ನಾನು ಕ್ರಿಕೆಟ್ ಆಡಿದ ಎಲ್ಲರನ್ನೂ ಕರೆದಿದ್ದೆ. ಅವರೆಲ್ಲರೂ ನೋಡಿ ಖುಷಿಪಟ್ಟರು. ಭಾರತದಲ್ಲಿ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಈ ಸಿನಿಮಾ ನೋಡಿದ್ದಾರೆ. ಈ ಚಿತ್ರ ನೋಡುವಾಗ ಹರ್ಭಜನ್ ಭಾವುಕರಾದರು. ಯಾಕೆಂದರೆ ಅವರು ಕೂಡ ಬೌಲಿಂಗ್ ಶೈಲಿಯ ಕಾರಣದಿಂದ ನಾನು ಎದುರಿಸಿದ ಪರಿಸ್ಥಿತಿ ಎದುರಿಸಿದ್ದರು.
IPLಗೂ ಮುನ್ನ ಎದುರಾಳಿಗಳಿಗೆ ದೇವದತ್ ಪಡಿಕ್ಕಲ್ ಸ್ಟ್ರಾಂಗ್ ವಾರ್ನಿಂಗ್..!
- ನಾನು ಹಲವು ವರ್ಷಗಳು ಆರ್‌ಸಿಬಿಯಲ್ಲಿದ್ದೆ. ಆರ್‌ಸಿಬಿ ಅಭಿಮಾನಿಗಳು ಎಷ್ಟು ಒಳ್ಳೆಯವರು ಎಂದರೆ ಸೋತಾಗಲೂ ಅವರು ಏನೂ ಹೇಳುವುದಿಲ್ಲ. ಆದರೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ವಿರಾಟ್ ಕೊಹ್ಲಿ ರಿಟೈರ್ಡ್ ಆಗುವ ಮೊದಲು ಕಪ್ ಬರುತ್ತದೆ.
- ಇವತ್ತಿನಿಂದ ಜಿಯೋ ಸಿನಿಮಾದಲ್ಲಿ 800 ಪ್ರಸಾರವಾಗಲಿದೆ. ಎಲ್ಲರೂ ಈ ಸಿನಿಮಾ ನೋಡುತ್ತಾರೆ ಎಂಬ ನಂಬಿಕೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.