
ಸಿಡ್ನಿ(ಜ.15): ದಿಗ್ಗಜ ಸ್ಪಿನ್ನರ್ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ ತಮ್ಮ 800 ಟೆಸ್ಟ್ ವಿಕೆಟ್‌ಗಳನ್ನು ಸರಿಗಟ್ಟಲು ಕೇವಲ ಭಾರತದ ಆರ್.ಅಶ್ವಿನ್‌ರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಿಸಿದ್ದಾರೆ.
‘ಅಶ್ವಿನ್‌ಗೆ 800 ವಿಕೆಟ್ ಗಳಿಸುವ ಅವಕಾಶವಿದೆ, ಏಕೆಂದರೆ ಅವರು ಅದ್ಭುತ ಬೌಲರ್. ಬೇರಾರಯವ ಯುವ ಬೌಲರ್‌ಗಳಿಂದಲೂ 800 ವಿಕೆಟ್ ಸಾಧನೆ ಸಾಧ್ಯವಿಲ್ಲ ಎನಿಸುತ್ತದೆ. ನೇಥನ್ ಲಯನ್ ಕೂಡ ಆ ಮೈಲಿಗಲ್ಲು ತಲುಪುವಷ್ಟು ಉತ್ತಮ ಬೌಲರ್ ಅಲ್ಲ’ ಎಂದು ಮುರಳಿ ಹೇಳಿದ್ದಾರೆ. ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೂ 74 ಟೆಸ್ಟ್‌ಗಳಲ್ಲಿ 377 ವಿಕೆಟ್ ಕಬಳಿಸಿದ್ದಾರೆ. ಇನ್ನು ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ನೇಥನ್ ಲಯನ್ 396 ವಿಕೆಟ್ ಪಡೆದು, 400 ವಿಕೆಟ್ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ.
ಆಸ್ಟ್ರೇಲಿಯಾ ಎದುರು ಗಾಯಕ್ಕೆ ತುತ್ತಾದವರು ಟೀಂ ಇಂಡಿಯಾದ ಒಬ್ಬಿಬ್ಬರಲ್ಲ, ಬರೋಬ್ಬರಿ ಅರ್ಧ ಡಜನ್..!
ರವಿಚಂದ್ರನ್ ಅಶ್ವಿನ್ ಹಾಗೂ ನೇಥನ್ ಲಯನ್ ಈ ಇಬ್ಬರು ಸ್ಪಿನ್ನರ್‌ಗಳು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅಶ್ವಿನ್ ಆಸೀಸ್ ಎದುರು ಈ ಸರಣಿಯಲ್ಲಿ 3 ಟೆಸ್ಟ್ ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದಾರೆ. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯನ್ ಈ ಬಾರಿ ತವರಿನಲ್ಲೇ ವಿಕೆಟ್ ಕಬಳಿಸಲು ಪರದಾಡುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಲಯನ್ ಕೇವಲ 6 ವಿಕೆಟ್ ಕಬಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.