ಮುಂಬೈ ಇಂಡಿಯನ್ಸ್ ತಂಡದಿಂದ ಮಹತ್ವದ ನಡೆ, ವೈಭವ್‌ನ ಸ್ಟಾರ್ ಮಾಡಿದ ಜುಬಿನ್‌ಗೆ ಪ್ರಮುಖ ಹುದ್ದೆ

Published : Aug 22, 2026, 06:01 PM IST
Zubin Gets Key Position at Mumbai Indians

ಸಾರಾಂಶ

2027ರಲ್ಲಿ ಟ್ರೋಫಿ ಗೆಲ್ಲಲೇಬೇಕೆಂಬ ಹಠದಲ್ಲಿರುವ ಮುಂಬೈ ಇಂಡಿಯನ್ಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೈಭವ್ ಸೂರ್ಯವಂಶಿಯನ್ನು ಗುರುತಿಸಿ, ಸ್ಟಾರ್ ಮಾಡಿದ ಜುಬಿನ್ ಭರೋಚಾಗೆ ಮುಂಬೈ ತಂಡದ ಪ್ರಮುಖ ಹುದ್ದೆ ನೀಡಿದೆ.

ಮುಂಬೈ (ಆ.22) ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲದೆ ಕೆಲ ವರ್ಷ ಉರುಳಿದೆ. ಪ್ಲೇ ಆಫ್ ಪ್ರವೇಶಕ್ಕೂ ಪರದಾಡುತ್ತಿದೆ. ಘಟಾನುಘಟಿ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ತಂಡ ಮಾತ್ರ ಲೀಗ್ ಹಂತದಿಂದಲೇ ಹೊರಬೀಳುತ್ತಿದೆ. ಇದೀಗ 2027ರ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ಮಹತ್ವದ ಬದಲಾವಣೆ ಮಾಡುತ್ತಿದೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ಪರ್ಫಾಮೆನ್ಸ್ ಡೈರೆಕ್ಟರ್ ಆಗಿ ಜುಬಿನ್ ಬರೋಚಾ ನೇಮಕ ಮಾಡಲಾಗಿದೆ.

ವೈಭವ್, ಜಸ್ವಾಲ್, ರಿಯಾನ್ ಸೇರಿ ಹಲವರ ಸ್ಟಾರ್ ಮಾಡಿದ ಜುಬಿನ್

ರಾಜಸ್ಥಾನ ರಾಯಲ್ಸ್ ತಂಡದ ಪರ್ಫಾಮೆನ್ಸ್ ಮುಖ್ಯಸ್ಥರಾಗಿದ್ದ ಜುಬಿನ್ ಬರೋಚಾ ಹಲವು ಯುವ ಪ್ರತಿಭೆಗಳನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಜುಬಿನ್ ಬರೋಚಾ ಗುರುತಿಸಿದ ಪ್ರತಿಭೆಗಳು ಇದೀಗ ಬಹುದೊಡ್ಡ ಸ್ಟಾರ್ ಆಗಿದ್ದಾರೆ. ಈ ಪೈಕಿ ಇತ್ತಿಚೆಗಿನ ಉದಾಹರಣೆ ವೈಭವ್ ಸೂರ್ಯವಂಶಿ. ವಿಶೇಷ ಅಂದರೆ ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಸೇರಿದಂತೆ ಹಲವು ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸಿದ ಹೆಗ್ಗಳಿಕೆಗ ಇದೇ ಜುಬಿನ್ ಬರೋಚಾಗೆ ಇದೆ. ಇದೀಗ ಮುಂಬೈ ಇಂಡಿಯನ್ಸ್ ತಂಡದ ಪರ್ಫಾಮೆನ್ಸ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಜುಬಿನ್ ಬರೋಚಾ ನೇಮಕ ಮಾಡಿ ಅಧಿಕೃತ ಘೋಷಣೆ ಮಾಡಿದೆ. ಸದ್ಯ ಇರುವ ಸ್ಟಾಫ್ ಜೊತೆ ಜುಬಿನ್ ಬರೋಜಾ ಪರ್ಫಾಮೆನ್ಸ್ ನಿರ್ದೇಶಕರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಹೇಳಿದೆ. 2027ರಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರರಿಗಿಂತ ಯುವ ಪ್ರತಿಭಗಳಿಗೆ ಹೆಚ್ಚು ಮಣೆ ಹಾಕುವ ಸಾಧ್ಯತೆ ಇದೆ. ಈ ಮೂಲಕ ತಂಡಕ್ಕೆ ಹೊರೆಯಾಗದಂತೆ ಬಲಿಷ್ಠ ಯುವ ಪಡೆ ಕಟ್ಟುವ ಸಾಧ್ಯತೆ ಹೆಚ್ಚಿದೆ.

ವೈಭವ್ ಸೇರಿ ಹಲವು ಪ್ರತಿಭೆಗಳ ಗುರುತಿಸಿದ ಹೆಗ್ಗಳಿಕೆ

ವೈಭವ್ ಸೂರ್ಯವಂಶಿಯನ್ನು ಅತ್ಯಂತ ಕಿರಿಯ ವಯಸ್ಸಿನಲ್ಲೇ ಗುರುಸಿತಿದ ಹೆಗ್ಗಳಿಗೆ ಜುಬಿನ್ ಬರೋಚಾಗೆ ಇದೆ. ಯುವ ಪ್ರತಿಭೆಯನ್ನು ಗಮನಿಸಿದ ಜುಬಿನ್ ರಾಜಸ್ಥಾನ ರಾಯಲ್ಸ್ ಟ್ರಯಲ್ಸ್‌ನಲ್ಲಿ ವೇಗಿಗಳ ಮುಂದೆ ಆಡಿಸಿದ್ದರು. ಆಗಲೆ ವೈಭವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಅಷ್ಟೇ ವೇಗದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡು ಇತಿಹಾಸ ನಿರ್ಮಿಸಿದ್ದಾರೆ.

2026ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಮತ್ತೆ ಬಲಿಷ್ಠ ತಂಡ ಕಟ್ಟಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಹಲವು ಬದಲಾವಣೆ ಮಾಡುತ್ತಿದೆ. ಸ್ಟಾರ್ ಪ್ಲೇಯರ್‌ಗೆ ಮಣೆ ಹಾಕುವ ಬದಲು ಯುವ ಪ್ರತಿಭೆಗಳಿಗೆ ಇನ್ನು ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ವೈಭವ್ ಸೂರ್ಯವಂಶಿ ಟೆಸ್ಟ್ ಆಡಲಿ ಅಂತೀರಾ? ‘ದಿ ವಾಲ್’ ರಾಹುಲ್ ದ್ರಾವಿಡ್ ಹೇಳಿದ ಮಾತು ಈಗ ವೈರಲ್!
GenZ '6-7' ಸೆಲಬ್ರೇಷನ್‌ ಮೂಲಕ ನೆಟ್ಟಿಗರ ಗಮನ ಸೆಳೆದ ದೆಹಲಿ ಕ್ರಿಕೆಟ್‌ ಬ್ಯೂಟಿ ಮೇಧವಿ ಬಿಧುರಿ!