ಪಂಜಾಬ್ ಮೇಲೆ ಮೋಸ ಮಾಡಿ ಪಂದ್ಯ ಗೆಲ್ತಾ ಮುಂಬೈ ಇಂಡಿಯನ್ಸ್..? ಮೈದಾನದಲ್ಲೇ ಕರ್ರನ್ ಅಸಮಾಧಾನ

Published : Apr 19, 2024, 05:11 PM IST
ಪಂಜಾಬ್ ಮೇಲೆ ಮೋಸ ಮಾಡಿ ಪಂದ್ಯ ಗೆಲ್ತಾ ಮುಂಬೈ ಇಂಡಿಯನ್ಸ್..? ಮೈದಾನದಲ್ಲೇ ಕರ್ರನ್ ಅಸಮಾಧಾನ

ಸಾರಾಂಶ

ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುವ ವೇಳೆ, ಡಗೌಟ್‌ನಲ್ಲಿ ಕುಳಿತಿದ್ದ ಮುಂಬೈ ಇಂಡಿಯನ್ಸ್ ಆಟಗಾರ ಟಿಮ್ ಡೇವಿಡ್, ಕೋಚ್ ಮಾರ್ಕ್ ಬೌಚರ್ ಸಿಗ್ನಲ್ ನೋಡಿ ಡಿಆರ್‌ಎಸ್ ತೆಗೆದುಕೊಳ್ಳುವ ಸಮಯ ಮುಗಿದ ಮೇಲೂ ಡಿಆರ್‌ಎಸ್ ಲಾಭ ಪಡೆದುಕೊಂಡ ವಿಡಿಯೋಗಳೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

ಮುಲ್ಲನಪುರ(ಏ.19): ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು, ಪಂಜಾಬ್ ಕಿಂಗ್ಸ್ ಎದುರು 9 ರನ್ ರೋಚಕ ಜಯ ಸಾಧಿಸುವ ಮೂಲಕ ಮತ್ತೆ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಮುಂಬೈ ಇಂಡಿಯನ್ಸ್ ಪಾಲಿಗೆ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಆಪತ್ಬಾಂದವ ಎನಿಸಿದರು. 

ಆರಂಭಿಕ ಆಘಾತದ ಹೊರತಾಗಿಯೂ ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ ಒಂದು ಹಂತದಲ್ಲಿ ಅನಾಯಾಸವಾಗಿ ಪಂಜಾಬ್ ಕಿಂಗ್ಸ್‌ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಕೊನೆಯಲ್ಲಿ ಬುಮ್ರಾ, ಮಿಂಚಿನ ದಾಳಿ ನಡೆಸಿ ಪಂದ್ಯ ಮುಂಬೈ ಇಂಡಿಯನ್ಸ್ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು. ಇನ್ನು ಇದೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೋಸ ಮಾಡಿ ಪಂದ್ಯ ಗೆದ್ದಿದೆ ಎನ್ನುವಂತಹ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರಲಾರಂಭಿಸಿದೆ. ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡವು ಡಿಆರ್‌ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಮೋಸ ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಐಪಿಎಲ್ ಪ್ಲೇ ಆಫ್‌ಗೆ ಎಂಟ್ರಿ ನೀಡೋ ನಾಲ್ಕು ತಂಡಗಳು ಯಾವುವು..?

ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುವ ವೇಳೆ, ಡಗೌಟ್‌ನಲ್ಲಿ ಕುಳಿತಿದ್ದ ಮುಂಬೈ ಇಂಡಿಯನ್ಸ್ ಆಟಗಾರ ಟಿಮ್ ಡೇವಿಡ್, ಕೋಚ್ ಮಾರ್ಕ್ ಬೌಚರ್ ಸಿಗ್ನಲ್ ನೋಡಿ ಡಿಆರ್‌ಎಸ್ ತೆಗೆದುಕೊಳ್ಳುವ ಸಮಯ ಮುಗಿದ ಮೇಲೂ ಡಿಆರ್‌ಎಸ್ ಲಾಭ ಪಡೆದುಕೊಂಡ ವಿಡಿಯೋಗಳೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

ಸಮಯ ಮುಗಿದ ಬಳಿಕ ಡಿಆರ್‌ಎಸ್‌ಗೆ ಮೊರೆಹೋಗಿದ್ದಕ್ಕೆ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸ್ಯಾಮ್ ಕರ್ರನ್ ಅಂಪೈರ್ ವಿರುದ್ದ ಅಸಮಾಧಾನ ಹೊರಹಾಕಿದರೂ ಯಾವುದೇ ಪ್ರಯೋಜವಾಗಲಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಭಾರತದ ಹೊಸ ಮುಖಗಳಿಗೆ ಮಣೆಯಿಲ್ಲ? ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಹೀಗಿದೆ ನೋಡಿ ಆ ಕ್ಷಣ:

ಇನ್ನು ಅಂಪೈರ್‌ಗಳು ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನುಕೂಲಕರ ತೀರ್ಮಾನ ಪ್ರಕಟಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಟಾಮ್ ಮೂಡಿ ಕೂಡಾ ಅಸಮಾಧಾನ ಹೊರಹಾಕಿದ್ದಾರೆ.

"ತಜ್ಞ ಮೂರನೇ ಅಂಪೈರ್‌ ಹೊಂದುವುದಕ್ಕೆ ಇದು ಸರಿಯಾದ ಸಮಯ ಎನಿಸುತ್ತಿದೆ. ಈಗಾಗಲೇ ಸಾಕಷ್ಟು ಪ್ರಶ್ನಾರ್ಹ ತೀರ್ಮಾನಗಳನ್ನು ನಾವು ನೋಡಿದ್ದೇವೆ. ಕೆಲವು ಒಳ್ಳೆಯ ಆನ್‌ಫೀಲ್ಡ್ ಅಂಪೈರ್‌ಗಳಿದ್ದಾರೆ. ಆದರೆ ಥರ್ಡ್‌ ಅಂಪೈರ್‌ಗಳು ಸಾಕಷ್ಟು ತಜ್ಞ ಹಾಗೂ ಕೌಶಲ್ಯಭರಿತ ವ್ಯಕ್ತಿಗಳಾಗಿರಬೇಕು" ಎಂದು ಮೂಡಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆಯಲ್ಲಿ ಟಾಸ್ ಟ್ಯಾಂಪರಿಂಗ್ ನಡೆದಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌