ವೈಜಾಗ್‌ನ ಇದೇ ಮೈದಾನದಲ್ಲಿ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ ಆರಂಭದಲ್ಲಿ ಪಾಕಿಸ್ತಾನ ವಿರುದ್ದ 2005ರಲ್ಲಿ ಸ್ಪೋಟಕ 148 ರನ್ ಸಿಡಿಸಿ ಮಿಂಚಿದ್ದರು. ಇದಾಗಿ 19 ವರ್ಷಗಳ ಬಳಿಕವೂ ಧೋನಿ ತೋಳಿನಲ್ಲಿ ಬಲ ಕಡಿಮೆಯಾದಂತೆ ಕಾಣುತ್ತಿಲ್ಲ.
ವಿಶಾಖಪಟ್ಟಣಂ(ಏ.01): ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ಲೇವಲ 16 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸುವ ಮೂಲಕ ಹಳೆ ಖದರ್ ಅನಾವರಣ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ವರ್ಷಗಳೇ ಕಳೆದಿದ್ದರೂ ಧೋನಿ ಬ್ಯಾಟಿಂಗ್ ಝಲಕ್ ಕಮ್ಮಿಯಾಗಿಲ್ಲ. ಕೊನೆಯಲ್ಲಿ ಧೋನಿ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಲು ಕಂಡಿತು. ಇನ್ನು ಇದರ ಬೆನ್ನಲ್ಲೇ ಧೋನಿ ಪತ್ನಿ ಸಾಕ್ಷಿ, ಮಹಿ ಕಾಲೆಳೆದಿದ್ದಾರೆ.
ಹೌದು, ವೈಜಾಗ್‌ನ ಇದೇ ಮೈದಾನದಲ್ಲಿ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ ಆರಂಭದಲ್ಲಿ ಪಾಕಿಸ್ತಾನ ವಿರುದ್ದ 2005ರಲ್ಲಿ ಸ್ಪೋಟಕ 148 ರನ್ ಸಿಡಿಸಿ ಮಿಂಚಿದ್ದರು. ಇದಾಗಿ 19 ವರ್ಷಗಳ ಬಳಿಕವೂ ಧೋನಿ ತೋಳಿನಲ್ಲಿ ಬಲ ಕಡಿಮೆಯಾದಂತೆ ಕಾಣುತ್ತಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಗೆಲುವಿನ ಬೆನ್ನಲ್ಲೇ ರಿಷಭ್ ಪಂತ್‌ಗೆ ಬಿಗ್ ಶಾಕ್..!
ಗೆಲ್ಲಲ್ಲು 192 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 171 ರನ್ ಗಳಿಸಲಷ್ಟೇ ಶಕ್ತವಾಯಿತು. ಧೋನಿ ಕೊನೆಯಲ್ಲಿ 4 ಆಕರ್ಷಕ ಬೌಂಡರಿ ಹಾಗೂ 3 ಮುಗಿಲೆತ್ತರದ ಸಿಕ್ಸರ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಇನ್ನು ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್, ಇದೀಗ ತಮ್ಮ ಪತಿಯ ಬ್ಯಾಟಿಂಗ್ ಟ್ರೋಲ್ ಮಾಡಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಧೋನಿ, ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ನಗುತ್ತಾ ಫೋಸ್ ಕೊಟ್ಟಿದ್ದರು. ಇದರ ಬಗ್ಗೆ ಹಲವು ನೆಟ್ಟಿಗರು ಧೋನಿಯನ್ನು ಕಾಲೆಳೆದಿದ್ದರು. ಇದನ್ನು ಗಮನಿಸಿದ ಸಾಕ್ಷಿ ಸಿಂಗ್, "ಧೋನಿಯವರೇ, ನಾವು ಪಂದ್ಯವನ್ನು ಸೋತಿದ್ದೇವೆ ಎನ್ನುವುದು ಗೊತ್ತಿಲ್ಲವೇ?" ಎಂದು ಕಾಲೆಳೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ 20 ರನ್ ಅಂತರದ ಸೋಲು ಕಂಡ ಬೆನ್ನಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದೆ.