
ಚೆನ್ನೈ(ಅ.28): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಫಿಟ್ನೆಸ್ ವಿಡಿಯೋವೊಂದು ಭಾರಿ ಸದ್ದು ಮಾಡಿತ್ತು. ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯಲ್ಲಿ ಜಿಮ್ ಅಭ್ಯಾಸ ಮಾಡುತ್ತಿರುವ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ಹಳೇ ವಿಡಿಯೋವನ್ನು ಶೇರ್ ಮಾಡಿದೆ. ಸಿಎಸ್‌ಕೆ ಆಟಗಾರ, ವಿಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ಜೊತೆ ಟೇಬಲ್ ಟೆನಿಸ್ ಆಡುತ್ತಿರುವ ವಿಡಿಯೋ ಕೂಡ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ದೇಶ-ವಿದೇಶದಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ?
ಕ್ರಿಕೆಟಿಗ ಎಂ.ಎಸ್.ಧೋನಿ, ಕ್ರಿಕೆಟ್ ಹೊರತು ಪಡಿಸಿದರೆ, ಫುಟ್ಬಾಲ್, ಬ್ಯಾಡ್ಮಿಂಟನ್‌ಲ್ಲೂ ಕೌಶಲ್ಯ ಹೊಂದಿದ್ದಾರೆ. ಇದೀಗ ಟೇಬಲ್ ಟೆನಿಸ್‌ನಲ್ಲೂ ಧೋನಿ ಕಿಂಗ್ ಅನ್ನೋದನ್ನು ಸಿಎಸ್‌ಕೆ ಹಂಚಿಕೊಂಡಿರುವ ವಿಡಿಯೋ ಹೇಳುತ್ತಿದೆ. ಬ್ರಾವೋ ಜೊತೆ ಟೇಬಲ್ ಟೆನಿಸ್ ಆಡುತ್ತಿರುವ ವಿಡಿಯೋದಲ್ಲಿ ಧೋನಿ ತಿರುಗೇಟಿಗೆ ಬ್ರಾವೋ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ಕಾರು ತೊಳೆದು ಸುಸ್ತಾದ ಧೋನಿಗೆ ಪುತ್ರಿ ಝಿವಾ ಮಸಾಜ್!.
2019ರ ಐಪಿಎಲ್ ಟೂರ್ನಿ ವೇಳೆ ಖಾಸಗಿ ಉತ್ಪನ್ನಗಳ ಜಾಹೀರಾತು ಶೂಟಿಂಗ್ ನಡೆದಿತ್ತು. ಈ ವೇಳೆ ಧೋನಿ ಹಾಗೂ ಬ್ರಾವೋ ಟೇಬಲ್ ಟೆನಿಸ್ ಆಡೋ ಮೂಲಕ ಗಮನಸೆಳೆದಿದ್ದರು. ಇನ್ನು ರವೀಂದ್ರ ಜಡೇಜಾ ಬಿಲಿಯರ್ಡ್ಸ್ ಆಡಿದ್ದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಳೇ ವಿಡಿಯೋ ಶೇರ್ ಮಾಡಿರುವ ಸಿಎಸ್‌ಕೆಗೆ ಅಭಿಮಾನಿಗಳು ಧನ್ಯಾವಾದ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.