ಧೋನಿ ನಾಯಕತ್ವಕ್ಕೆ ಸರಿಸಾಟಿ ಇಲ್ಲ, ಟೀಂ ಇಂಡಿಯಾಗೆ ಹೊಸ ಭಾಷ್ಯ ಬರೆದ ನಾಯಕ

Published : Aug 15, 2020, 08:52 PM IST
ಧೋನಿ ನಾಯಕತ್ವಕ್ಕೆ ಸರಿಸಾಟಿ ಇಲ್ಲ, ಟೀಂ ಇಂಡಿಯಾಗೆ ಹೊಸ ಭಾಷ್ಯ ಬರೆದ ನಾಯಕ

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ 2020ರ ಐಪಿಎಲ್ ಟೂರ್ನಿ ಅಭ್ಯಾಸಕ್ಕಾಗಿ ಚೆನ್ನೈನಲ್ಲಿ ಬೀಡು ಬಿಟ್ಟಿದ್ದಾರೆ. ಎಲ್ಲರೂ ಐಪಿಎಲ್ ಟೂರ್ನಿ ಆರಂಭಕ್ಕೆ ಎದುರನೋಡುತ್ತಿರುವಾಗಲೇ ಧೋನಿ ವಿದಾಯ ಘೋಷಿಸಿ ಅಚ್ಚರಿ ನೀಡಿದ್ದಾರೆ. ನಾಯಕನಾಗಿ ಧೋನಿ ಟೀಂ ಇಂಡಿಯಾಗೆ ಹೊಸ ಭಾಷ್ಯ ಬರೆದಿದ್ದಾರೆ. ಧೋನಿ ಸಾಧನೆಗೆ ಸರಿಸಾಟಿ ಯಾರೂ ಇಲ್ಲ.

ಚೆನ್ನೈ(ಆ.15):  ದೇಶ, ಸೈನಿಕರ ಕುರಿತು ಅಪಾರ ಗೌರವ ಹೊಂದಿರುವ ಎಂ.ಎಸ್.ಧೋನಿ ಭಾರತೀಯ ಸೇನೆಯ ಪ್ಯಾರಾರೆಜಿಮೆಂಟ್ ವಿಭಾಗದಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಗೌರವ ಹೊಂದಿದ್ದಾರೆ. ಇದೀಗ 74ನೇ ಸ್ವಾತಂತ್ರ್ಯ ದಿನಾಚರಣೆ ದಿನವೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿರುವ ನಡುವೆ ಧೋನಿ ವಿದಾಯ ಘೋಷಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್; ವಿದಾಯ ಘೋಷಿಸಿದ ಎಂ.ಎಸ್.ಧೋನಿ

ಟೀಂ ಇಂಡಿಯಾ ನಾಯಕನಾಗಿ ಧೋನಿ ಸಾಧನೆ ಅಪಾರ.  2004ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಧೋನಿ, 2007ರಲ್ಲಿ ನಾಯಕನಾಗಿ ಬಡ್ತಿ ಪಡೆದರು. ಇಷ್ಟೇ ಅಲ್ಲ, 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ ಧೋನಿ ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು.

ನಾಯಕನಾಗಿ ಮೊದಲ ಪ್ರಯತ್ನದಲ್ಲಿ ಇತಿಹಾಸ ರಚಿಸಿದ ಧೋನಿ ಹೆಜ್ಜೆ ಹೆಜ್ಜೆಗೂ ದಾಖಲೆ ಬರೆದರು. ಐತಿಹಾಸಿಕ ಟೂರ್ನಿಗಳಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮೆರೆಯಿತು. 28 ವರ್ಷಗಳ ಬಳಿಕ 2011ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ, ವಿಶ್ವದ ಬೆಸ್ಟ್ ಕ್ಯಾಪ್ಟನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಕೂಲ್ ಕ್ಯಾಪ್ಟನ್ ಅನ್ನೋ ಹಿರಿಮೆಯೊಂದಿಗೆ ಮುನ್ನುಗ್ಗಿದ ಧೋನಿ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದು, ಐಸಿಸಿಯ 3 ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಅನ್ನೋ ಕೀರ್ತಿಗೆ ಪಾತ್ರರಾದರು.

2010 ಮತ್ತು 2016ರಲ್ಲಿ ಏಷ್ಯಾಕಪ್ ಟ್ರೋಫಿ ಗೆಲ್ಲಿಸಿಕೊಟ್ಟ ಚಾಂಪಿಯನ್ ಧೋನಿ, ಇನ್ನು 3 ಬಾರಿ ಐಪಿಎಲ್ ಟ್ರೋಫಿ, ಒಂದು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಗೆ ಮುತ್ತಿಟ್ಟ ನಾಯಕ ಧೋನಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

RCB ಅಭಿಮಾನಿಗಳ ಹೊಸ ಕ್ರಶ್ ಲಾರೆನ್ ಬೆಲ್; ಈಕೆ ಅಪ್ಸರೆಗಿಂತ ಕಮ್ಮಿಯೇನಿಲ್ಲ!
WPL 2026: ಎಲ್ಲಾ ತಂಡಗಳ ನಾಯಕಿಯರ ಸಂಬಳ ಎಷ್ಟು? ಸ್ಮೃತಿ ಸಂಬಳ ಇಷ್ಟೊಂದಾ?