ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಐಪಿಎಲ್ 2023 ಟೂರ್ನಿಗಾಗಿ ಸಿಎಸ್‌ಕೆ ತಂಡ ಸೇರಿಕೊಳ್ಳಲು ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಧೋನಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಧೋನಿ ನೋಡಲು ಜನಸಾಗರವೇ ಹರಿದುಬಂದಿತ್ತು.
ಚೆನ್ನೈ(ಮಾ.02): IPL 2023 ಟೂರ್ನಿಗೆ ಅಂತಿಮ ಹಂತದ ತಯಾರಿಗಳು ನಡೆಯುತ್ತಿದೆ. ಫ್ರಾಂಚೈಸಿಗಳು ಈಗಾಗಲೇ ಅಭ್ಯಾಸ ಶಿಬಿರ ಆರಂಭಿಸಿದೆ. ಈ ತಿಂಗಳ ಅಂತ್ಯದಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಈ ಬಾರಿ ಸಿಎಸ್‌ಕೆ ಮಾತ್ರವಲ್ಲ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾವುಕ ಟೂರ್ನಿ. ಕಾರಣ ವಿಶ್ವಕಪ್ ಗೆಲ್ಲಿಸಿಕೊಟ್ಟ, ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿದ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿಯ ಕೊನೆಯ ಐಪಿಎಲ್ ಟೂರ್ನಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಕೊನೆಯ ಬಾರಿಗೆ ಧೋನಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಧೋನಿ ಐಪಿಎಲ್ 2023 ಟೂರ್ನಿಗಾಗಿ ಚೆನ್ನೈ ತಲುಪಿದ್ದಾರೆ. ಚೆನ್ನೈಗೆ ಬಂದಿಳಿಯುತ್ತಿದ್ದಂತ ಧೋನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಚೆನ್ನೈಗೆ ಕಾಲಿಡುತ್ತಿದ್ದಂತೆ ಎಂ.ಎಸ್.ಧೋನಿಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಡೋಲು, ಬ್ಯಾಂಡ್ ವಾದ್ಯಗಳ ಮೂಲಕ ಧೋನಿಗೆ ಸ್ವಾಗತ ಕೋರಲಾಗಿದೆ. ಇನ್ನು ಧೋನಿ ಮೇಲೆ ಹೂಮಳೆ ಸುರಿಸಿದ್ದಾರೆ. ವಿಮಾನ ನಿಲ್ದಾಣದಿಂದ ಧೋನಿ ಹೊಟೆಲ್ ಸೇರುವವರೆಗೂ ಜನಸಾಗರವೇ ನಿಂತಿತ್ತು. ಧೋನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಧೋನಿ ಕೈಕುಲುಕಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಹೂವಿನದಳಗಳನ್ನು ಎಸೆದು ಸ್ವಾಗತ ನೀಡಲಾಗಿದೆ.
ಧೋನಿಯ ಮಾತನ್ನು ತಾವು ನಂಬುವುದೇಕೆ ಎನ್ನುವ ಸತ್ಯ ಬಹಿರಂಗ ಮಾಡಿದ ವಿರಾಟ್ ಕೊಹ್ಲಿ..!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ನಾಳೆಯಿಂದಲೇ ಅಭ್ಯಾಸ ಆರಂಭಿಸಲಿದ್ದಾರೆ. ಈಗಾಗಲೇ ಯುವ ಆಟಗಾರರನ್ನೊಳಗೆ ಚೆನ್ನೈ ಶಿಬಿರ ಚಿಪಾಕ್ ಮೈದಾನದಲ್ಲಿ ನಡೆಯುತ್ತಿದೆ. ಇದೀಗ ಧೋನಿ ತಂಡ ಸೇರಿಕೊಳ್ಳಲಿದ್ದಾರೆ. ಇಷ್ಟು ದಿನ ಧೋನಿ, ರಾಂಚಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ್ದರು. ನಾಳೆಯಿಂದ ಚಿಪಾಕ್ ಮೈದಾನದಲ್ಲಿ ಅಭ್ಯಾಸ ಶುರುವಾಗಲಿದೆ.
Fan Favourite💛 pic.twitter.com/j5MUHr7jG8
— Chennai Super Kings (@ChennaiIPL)
ಎಂ.ಎಸ್.ಧೋನಿ ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ಮೇ 14ರಂದು ಕೋಲ್ಕತಾ ವಿರುದ್ಧ ತಮ್ಮ ಕೊನೆ ಐಪಿಎಲ್ ಪಂದ್ಯವಾಡುವ ಸಾಧ್ಯತೆ ಇದೆ ಎಂದು ಚೆನ್ನೈ ಫ್ರಾಂಚೈಸಿ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಧೋನಿ ಮುಂದಿನ ವರ್ಷ ಐಪಿಎಲ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಈ ಬಾರಿ ಚೆನ್ನೈ ಪ್ಲೇ-ಆಫ್ ಪ್ರವೇಶಿಸದಿದ್ದರೆ ಮೇ 14ರ ಲೀಗ್ ಹಂತದ ಕೊನೆ ಪಂದ್ಯ ಧೋನಿ ಪಾಲಿಗೆ ವಿದಾಯದ ಪಂದ್ಯವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಧೋನಿ 2008ರ ಚೊಚ್ಚಲ ಆವೃತ್ತಿಯಿಂದಲೂ ತಂಡಕ್ಕೆ ನಾಯಕತ್ವ ವಹಿಸುತ್ತಿದ್ದು, ಕಳೆದ ಆವೃತ್ತಿಯಲ್ಲಿ ಜಡೇಜಾ ನಾಯಕತ್ವ ಬಿಟ್ಟುಕೊಟ್ಟರೂ ಮತ್ತೆ ನಾಯಕನಾಗಿ ಮುಂದುವರಿದಿದ್ದರು.
IPL 2023ರ ಬಳಿಕ ನಾಯಕ ಎಂ.ಎಸ್ ಧೋನಿ ನಿವೃತ್ತಿ? ಸಿಎಸ್‌ಕೆ ತಂಡದಲ್ಲಿ ಮಹತ್ವದ ಬೆಳವಣಿಗೆ
ವೆಸ್ಟ್‌ಇಂಡೀಸ್‌ನ ಹಿರಿಯ ಆಲ್ರೌಂಡರ್ ಡ್ವೇನ್ ಬ್ರಾವೋ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ಒಂದು ವರ್ಷ ಐಪಿಎಲ್‌ನಿಂದ ದೂರವಿರಲು ನಿರ್ಧರಿಸಿರುವ ಲಕ್ಷ್ಮಿಪತಿ ಬಾಲಾಜಿ ಸ್ಥಾನವನ್ನು ಬ್ರಾವೋ ತುಂಬಲಿದ್ದಾರೆ. ಇತ್ತೀಚೆಗಷ್ಟೇ ಬ್ರಾವೋರನ್ನು ಚೆನ್ನೈ ತಂಡದಿಂದ ಕೈಬಿಡಲಾಗಿತ್ತು. ಅವರು ಹರಾಜಿಗೂ ನೋಂದಣಿ ಮಾಡಿಕೊಂಡಿಲ್ಲ.