CSK ಗಿಂತ ನಮ್ಮ ಆರ್‌ಸಿಬಿ ಅತ್ಯುತ್ತಮ ತಂಡವಾಗಿದ್ದು ಹೇಗೆ? ಕೊನೆಗೂ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಎಂ ಎಸ್ ಧೋನಿ..!

Published : Oct 26, 2026, 10:52 AM IST
MS Dhoni

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಆರ್‌ಸಿಬಿ ತಂಡದ ಅದ್ಭುತ ಪ್ರದರ್ಶನವನ್ನು ಎಂಎಸ್ ಧೋನಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಸಿಎಸ್‌ಕೆ ತಂಡದ ಹಿನ್ನಡೆಯನ್ನು ಒಪ್ಪಿಕೊಂಡಿರುವ ಅವರು, 2027ರ ಐಪಿಎಲ್‌ನಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುವುದು ತಮಗೆ ಇಷ್ಟವೆಂದು ಅವರು ತಿಳಿಸಿದ್ದಾರೆ.

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಇತ್ತೀಚಿಗಿನ ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೆಳೆಯುತ್ತಿರುವ ರೀತಿಯನ್ನು ಮನಸಾರೆ ಕೊಂಡಾಡಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಭಿನ್ನ ಸ್ಥಿತಿಗಳನ್ನು ಗಮನಿಸಿದ ಧೋನಿ, ಹಾಲಿ ಚಾಂಪಿಯನ್ ಆರ್‌ಸಿಬಿ ಇತ್ತೀಚಿಗಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಇನ್ನು ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 2027ರ ಐಪಿಎಲ್ ಟೂರ್ನಿಯಲ್ಲಿ ಹಳೆಯ ವೈಫಲ್ಯಗಳನ್ನು ಮರೆತು, ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ವಿಶ್ವಾಸವನ್ನು ಧೋನಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೆಲ್ತ್‌ ಕೇರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ಪೇಪರ್‌ನಲ್ಲಿ ತಂಡ ಎಷ್ಟು ಬಲಿಷ್ಠವಾಗಿದೆ ಎನ್ನುವುದು ಮುಖ್ಯವಲ್ಲ'

ನನಗೆ ಯಾವಾಗಲೂ ಅನಿಸುವುದು, ಪೇಪರ್‌ನಲ್ಲಿ ನಿಮ್ಮ ತಂಡ ಎಷ್ಟು ಬಲಿಷ್ಠವಾಗಿದೆ ಎನ್ನುವುದು ಅಷ್ಟೇನೂ ಮುಖ್ಯವಲ್ಲ. ಪಂದ್ಯ ನಡೆಯುವ ದಿನ ನೀವು ಯಾವ ರೀತಿ ಆಡುತ್ತೀರಾ ಎನ್ನುವುದು ಮುಖ್ಯವಾಗುತ್ತದೆ. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಬೆಸ್ಟ್ ಟೀಮ್ ಎನಿಸಿಕೊಳ್ಳಲು ಸಣ್ಣ ಮಾರ್ಜಿನ್ ಇರುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಾವು ಲಯ ಕಂಡುಕೊಳ್ಳಲು ಪರದಾಡಿದ್ದೇವೆ ಎನ್ನುವುದು ಸತ್ಯ. ಅದೇ ಎರಡು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಷ್ಟೇ ಚೆನ್ನಾಗಿ ಆಡಿದೆ ಎನ್ನುವುದು ಸತ್ಯ ಎಂದು ಧೋನಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು 2023ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಸಿಎಸ್‌ಕೆ ತಂಡವು ಲಯ ಕಂಡುಕೊಳ್ಳಲು ಪರದಾಡುತ್ತಿದೆ. ಧೋನಿ ಕಳೆದ ವರ್ಷ ಫಿಟ್ನೆಸ್ ಸಮಸ್ಯೆಯಿಂದಾಗಿ ಐಪಿಎಲ್ ಆಡಿರಲಿಲ್ಲ. ಈ ವರ್ಷ ಧೋನಿ ಐಪಿಎಲ್ ಆಡುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಸ್ಪಷ್ಟನೆಯಿಲ್ಲ.

ಕಳೆದೆರಡು ವರ್ಷದಲ್ಲಿ ಸಿಎಸ್‌ಕೆ ಚೆನ್ನಾಗಿ ಆಡಿಲ್ಲ

'ಜೀವನದಲ್ಲೂ ಹಾಗೆ, ಕೆಲವೊಮ್ಮೆ ಒಳ್ಳೆಯ ಸಮಯ ಇರುತ್ತದೆ ಮತ್ತೆ ಕಲವೊಮ್ಮೆ ಕೆಟ್ಟ ಸಮಯ ಬರುತ್ತದೆ. ಆದರೆ ಕಠಿಣ ಸಮಯದಲ್ಲಿ ನೀವು ಹೇಗೆ ವರ್ತಿಸುತ್ತೀರ ಎನ್ನುವುದು ಮುಖ್ಯವಾಗುತ್ತದೆ. ನಾವು ಗೆಲ್ಲುತ್ತಲೇ ಇದ್ದಾಗ ಅಷ್ಟೇನೂ ಅನಿಸುವುದಿಲ್ಲ, ಆದರೆ ನಾವು ಸೋಲಲು ಶುರು ಮಾಡಿದಾಗ ನಿಜವಾದ ಪರೀಕ್ಷೆ ಎದುರಾಗುತ್ತದೆ. ಆರ್‌ಸಿಬಿ ಸತತವಾಗಿ ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ನಾವು ಕಳೆದೆರಡು ವರ್ಷಗಳಲ್ಲಿ ಚೆನ್ನಾಗಿ ಆಡಿಲ್ಲ ಎನ್ನುವುದನ್ನು ಧೋನಿ ಒಪ್ಪಿಕೊಂಡಿದ್ದಾರೆ.

ಪ್ರತಿಯೊಬ್ಬರು ತಮ್ಮ ಪಾತ್ರ ಹಾಗೂ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡರೆ ಕೆಲಸ ಸುಲಭವಾಗುತ್ತದೆ. ಮುಂದಿನ ಸಲ ನಾವು ಇಲ್ಲಿಗೆ ಮ್ಯಾಚ್ ಆಡಲು ಬಂದಾಗ ಮತ್ತೊಂದು ರೋಚಕ ಪಂದ್ಯ ನಡೆಯಲಿ ಎಂದು ಆಶಿಸುತ್ತೇನೆ. ಆ ರೀತಿಯ ಪಂದ್ಯ ನಡೆದಾಗ ಅಭಿಮಾನಿಗಳಿಗೂ ಒಳ್ಳೆಯ ಮನರಂಜನೆ ಸಿಗುತ್ತದೆ. ಓರ್ವ ಬ್ಯಾಟರ್ ಆಗಿ ನನಗೆ ಚಿನ್ನಸ್ವಾಮಿ ಸ್ಟೇಡಿಯಂ ಇಷ್ಟ. ಈ ಸ್ಟೇಡಿಯಂನಲ್ಲಿ ಚೆಂಡನ್ನು ಸ್ಟೇಡಿಯಂನಾಚೆ ಬಾರಿಸಬಹುದು. ಅದಕ್ಕಾಗಿಯೇ ಎಲ್ಲರೂ ಚಿನ್ನಸ್ವಾಮಿ ಸ್ಟೇಡಿಯಂ ಇಷ್ಟಪಡುತ್ತಾರೆ. ಕೆಲವೊಮ್ಮೆ ಮಿಸ್ ಟೈಮ್ ಆದರೂ ಕೂಡಾ ಚೆಂಡು ಇಲ್ಲಿ ಸಿಕ್ಸರ್ ಗಡಿ ದಾಟುತ್ತದೆ ಎಂದು ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Marriage ಬೆನ್ನಲ್ಲೇ ಬ್ರೇಕಪ್: ನಟನ ಮೊದಲ ರಿಯಾಕ್ಷನ್! ಕ್ರಿಕೆಟರ್ ಜೊತೆ ಡೇಟಿಂಗ್‌ನಲ್ಲಿದ್ದಾರಾ ಮಾಜಿ ಪ್ರೇಯಸಿ?
2027ರ ಏಕದಿನ ವಿಶ್ವಕಪ್‌ಗೆ ಭಾರತದ ಟಾಪ್-5 ವೇಗಿಗಳನ್ನು ಆಯ್ಕೆ ಮಾಡಿದ ಅಜಿಂಕ್ಯ ರಹಾನೆ..! ಭುವಿ, ಶಮಿಗಿಲ್ಲ ಸ್ಥಾನ