IPL 2024: ಅಭಿಮಾನಿಗಳಿಗೆ ಗುಡ್ ನ್ಯೂಸ್..! ಮತ್ತೆ ವಿರಾಟ್ ಕೊಹ್ಲಿಗೆ RCB ನಾಯಕನ ಪಟ್ಟ..? 

By Suvarna News  |  First Published Jan 5, 2024, 3:55 PM IST

IPL 17ರ ಸೀಸನ್ ಆರಂಭಕ್ಕಿನ್ನು ಮೂರು ತಿಂಗಳು ಬಾಕಿಯಿದೆ. ಆದ್ರೆ, ಅದಾಗ್ಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಫುಲ್ ಪ್ರಿಪರೇಷನ್ ನಡೆಸಿವೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಆಕ್ಷನ್ನಲ್ಲಿ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನ ಖರೀದಿಸಿವೆ. RCB ಫ್ರಾಂಚೈಸಿಯೂ ಅಳೆದು ತೂಗಿ ಕೋಟಿ, ಕೋಟಿ ನೀಡಿ ಕೆಲ ಆಟಗಾರರನ್ನ ತಮ್ಮ ಸೈನ್ಯಕ್ಕೆ ಸೇರಿಸಿಕೊಂಡಿದೆ.


ಬೆಂಗಳೂರು(ಜ.05): ಐಪಿಎಲ್‌ ಇತಿಹಾಸದಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡಗಳ ಪೈಕಿ RCBಯೂ ಒಂದು. ಆದ್ರೆ, ಈ ವರ್ಷ ನಡೆಯುವ ಟೂರ್ನಿಯಲ್ಲಿ ರೆಡ್ ಆರ್ಮಿ ಕಪ್ ಗೆಲ್ಲಲೇಬೇಕು ಅಂತ ಫಿಕ್ಸ್ ಆಗಿದೆ. ಇದಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಖುಷ್ ಅಗಿದ್ದಾರೆ. ಅಷ್ಟಕ್ಕೂ ಏನದು ಮ್ಯಾಟರ್ ಅಂತೀರಾ..? ಇಲ್ಲಿದೆ  ನೋಡಿ ಡಿಟೇಲ್ಸ್...! 

ಮತ್ತೆ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ..? 

Latest Videos

undefined

IPL 17ರ ಸೀಸನ್ ಆರಂಭಕ್ಕಿನ್ನು ಮೂರು ತಿಂಗಳು ಬಾಕಿಯಿದೆ. ಆದ್ರೆ, ಅದಾಗ್ಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಫುಲ್ ಪ್ರಿಪರೇಷನ್ ನಡೆಸಿವೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಆಕ್ಷನ್ನಲ್ಲಿ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನ ಖರೀದಿಸಿವೆ. RCB ಫ್ರಾಂಚೈಸಿಯೂ ಅಳೆದು ತೂಗಿ ಕೋಟಿ, ಕೋಟಿ ನೀಡಿ ಕೆಲ ಆಟಗಾರರನ್ನ ತಮ್ಮ ಸೈನ್ಯಕ್ಕೆ ಸೇರಿಸಿಕೊಂಡಿದೆ. 

IPL ಇತಿಹಾಸದಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡಗಳ ಪೈಕಿ RCB ಯೂ ಒಂದು. ಆದ್ರೆ, ಈ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಬೇಕು ಅಂತ RCB ಫ್ರಾಂಚೈಸಿ ಪಣ ತೊಟ್ಟಿದೆ. ಇದಕ್ಕಾಗಿ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡೋ ಯೋಚನೆಯಲ್ಲಿದೆ. ಮತ್ತೆ ವಿರಾಟ್ ಕೊಹ್ಲಿಗೆ ಪಟ್ಟ ಕಟ್ಟೋ ಪ್ಲಾನ್ ಮಾಡಿದೆ ಎನ್ನಲಾಗಿದೆ. 

ಡು ಪ್ಲೆಸಿಸ್ ನಾಯಕತ್ವದಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ಇಲ್ಲ..!

ಫಾಫ್ ಡು ಪ್ಲೆಸಿಸ್ ಕ್ಯಾಪ್ಟನ್ಸಿಯಲ್ಲಿ ತಂಡ RCB ಹೇಳಿಕೊಳ್ಳುವಂತ ಯಶಸ್ಸು ಸಾಧಿಸಿಲ್ಲ. ಕಳೆದ ಸೀಸನ್ನಲ್ಲಿ 14 ಪಂದ್ಯಗಳಲ್ಲಿ 7ರಲ್ಲಿ ಮಾತ್ರ ಜಯಗಳಿಸಿತ್ತು. ಇನ್ನು ಹೋಂಗ್ರೌಂಡ್ನಲ್ಲಾಡಿದ 7 ಮ್ಯಾಚ್‌ಗಳಲ್ಲಿ 4ರಲ್ಲಿ ಸೋಲು ಕಂಡಿತ್ತು. ಇದ್ರಿಂದ ಡು ಪ್ಲೆಸಿಸ್ ಕ್ಯಾಪ್ಟನ್ಸಿ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದಲ್ಲದೇ ವಯಸ್ಸು ಕೂಡ ಡುಪ್ಲೆಸಿಸ್‌ಗೆ ಅಡ್ಡಿಯಾಗಿದೆ. 38 ವರ್ಷದ ಡು ಪ್ಲೆಸಿಸ್, ಇನ್ನು ಒಂದು ಸೀಸನ್ ಆಡಿದ್ರೆ ಹೆಚ್ಚು. ಈ ಎಲ್ಲಾ ಕಾರಣದಿಂದಾಗಿ ಡುಪ್ಲೆಸಿಸ್‌ಗೆ ಕೊಕ್ ಕೊಟ್ಟು  ಕೊಹ್ಲಿಗೆ ಮತ್ತೆ ನಾಯಕನ ಸ್ಥಾನ ನೀಡಲು ಫ್ರಾಂಚೈಸಿ ಚಿಂತಿಸ್ತಿದೆ. 

ಕಳೆದ ವರ್ಷ ತಂಡವನ್ನ ಮುನ್ನಡೆಸಿದ್ದ ವಿರಾಟ್..!

ಯೆಸ್, ಕಳೆದ ಸೀಸನಲ್ಲಿ ಎರಡು ಪಂದ್ಯಗಳಲ್ಲಿ ಕೊಹ್ಲಿ RCB ಸೈನ್ಯವನ್ನ ಮುನ್ನಡೆಸಿದ್ರು. ಪಂಜಾಬ್ ಕಿಂಗ್ಸ್ ವಿರುದ್ಧದ ಡು ಆರ್ ಡೈ ಮ್ಯಾಚ್‌ನಲ್ಲಿ ನಾಯಕತ್ವ ವಹಿಸಿ ತಂಡಕ್ಕೆ ಗೆಲುವು ತಂದುಕೊಟ್ರು. 555 ದಿನಗಳ ನಂತರ ತಂಡದ ನಾಯಕತ್ವ ವಹಿಸಿದ್ದ ಕೊಹ್ಲಿ, ಬ್ಯಾಟಿಂಗ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ರು. ಇನ್ನು ಫೀಲ್ಡಿಂಗ್ ವೇಳೆ  ಸಖತ್ ಆ್ಯಕ್ಟಿವ್  ಆ್ಯಂಡ್ ಅಗ್ರೆಸಿವ್ ಆಗಿ ಕಂಡು ಬಂದ್ರು. ಇದರಿಂದ ಆಟಗಾರರಲ್ಲೂ ಗೆಲ್ಲಬೇಕು ಅನ್ನೋ ಫೈಯರ್ ಎದ್ದು ಕಾಣ್ತಿತ್ತು. ಹಳೆ ಕೊಹ್ಲಿಯನ್ನ ಕಂಡು ಫ್ಯಾನ್ಸ್ ಫುಲ್ ಖುಷ್ ಆದ್ರು. 

ವರ್ಕ್‌ಲೋಡ್ ಕಾರಣದಿಂದ ಕ್ಯಾಪ್ಟನ್ಸಿಗೆ ಗುಡ್‌ಬೈ..!

ಯೆಸ್, ಹತ್ತು ವರ್ಷ RCB ನಾಯಕರಾಗಿದ್ದ ಕೊಹ್ಲಿ, 2021ರಲ್ಲಿ ನಾಯ ಕತ್ವಕ್ಕೆ ಗುಡ್‌ಬೈ ಹೇಳಿದ್ರು. ಕೊಹ್ಲಿಯ ನಿರ್ಧಾರದಿಂದ ಫ್ಯಾನ್ಸ್ ಬೇಸರ ಗೊಂಡಿದ್ರು. ಕಪ್ ಗೆಲ್ಲದೇ ಹೋದ್ರೂ, RCB ಫ್ರಾಂಚೈಸಿ ಕೊಹ್ಲಿಯನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿರಲಿಲ್ಲ. ಆದ್ರೆ, ವರ್ಕ್‌ಲೋಡ್ ಕಾರಣ ದಿಂದಾಗಿ ಸ್ವತ: ಕೊಹ್ಲಿಯೇ ನಾಯಕತ್ವ ತ್ಯಜಿಸಿದ್ರು. ಮೊದಲಿಗೆ T20 ಫಾರ್ಮ್ಯಾಟ್‌ನಲ್ಲಿ ಟೀಂ ಇಂಡಿಯಾದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೊಹ್ಲಿ, ನಂತರ RCB ನಾಯಕತ್ವದಿಂದಲೂ ಹಿಂದೆ ಸರಿದ್ರು. ಆದ್ರೀಗ, ಕೊಹ್ಲಿಗೆ ಯಾವ ವರ್ಕ್‌ಲೋಡ್ ಟೆನ್ಷನ್ ಇಲ್ಲ. ಇದ್ರಿಂದ ಫ್ರಾಂಚೈಸಿ ಕೊಹ್ಲಿ ಕೈಗೆ ನಾಯಕತ್ವ ಹೋದ್ರೂ ಅಚ್ಚರಿ ಇಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!