ಸಿಎಸ್‌ಕೆ ಪ್ರದರ್ಶನ, ಧೋನಿ ಆಟಕ್ಕೆ ಭಾರಿ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಹಬ್ಬಿರುವ ನಿವೃತ್ತಿ ಕುರತು ಕೊನೆಗೂ ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯಾಗುತ್ತಿದ್ದಾರಾ ಧೋನಿ? ಹೇಳಿದ್ದೇನು?
ಚೆನ್ನೈ(ಏ.06) ಐಪಿಎಲ್ 2025 ಟೂರ್ನಿಯಲ್ಲಿ ಎಂಎಸ್ ಧೋನಿ ಹಾಗೂ ಸಿಎಸ್‌ಕೆ ತಂಡ ತೀವ್ರ ಟೀಕೆ ಎದುರಿಸುತ್ತಿದೆ. ಇದರ ಬೆನ್ನಲ್ಲೇ ಧೋನಿ ನಿವೃತ್ತಿ ಮಾತುಗಳು ಕೇಳಿಬರುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೇ ಧೋನಿ ನಿವೃತ್ತಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಕಳೆದ ಕೆಲ ದಿನಗಳಿಂದ ಧೋನಿ ನಿವೃತ್ತಿ ಮಾತಗಳು ಹಬ್ಬುತ್ತಿದೆ. ಇಷ್ಟು ದಿನ ಮೌನವಾಗಿದ್ದ ಧೋನಿ ಇದೇ ಮೊದಲ ಬಾರಿಗೆ ತಮ್ಮ ನಿವೃತ್ತಿ ಕುರಿತು ಮೌನ ಮುರಿದಿದ್ದಾರೆ. ಸತತ ಟೀಕೆ ನಡುವೆ ಧೋನಿ ತಮ್ಮ ಐಪಿಎಲ್ ಮಂದಿನ ದಿನಗಳ ಕುರಿತು ಮಾತನಾಡಿದ್ದಾರೆ.
ನಿವೃತ್ತಿ ಕುರಿತು ಧೋನಿ ಮಾತು
ಇದೇ ಮೊದಲ ಬಾರಿಗೆ ಎಂ.ಎಸ್ ಧೋನಿ ಪಾಡ್‌ಕಾಸ್ಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ಶಮಾನಿ ಪಾಡ್‌ಕಾಸ್ಟ್‌ನಲ್ಲಿ ಧೋನಿ ತಮ್ಮ ನಿವೃತ್ತಿ ಮಾತುಗಳು, ಟೀಕೆಗಳಿಗೆ ಉತ್ತರಿಸಿದ್ದಾರೆ. 18ನೇ ಆವೃತ್ತಿ ಐಪಿಎಲ್ ಆಡುತ್ತಿದ್ದೇನೆ. ನನ್ನ ವಯಸ್ಸು 43. ಈ ಐಪಿಎಲ್ ಅಂತ್ಯಗೊಳ್ಳುವಾಗ ಅಂದರೆ ಜುಲೈ ತಿಂಗಳಿಗೆ ನನ್ನ ವಯಸ್ಸು 44 ಆಗಿರುತ್ತದೆ. ಬಳಿಕ ನನಗೆ 10 ತಿಂಗಳ ಸಮಯವಿದೆ. ಈ ಸಮಯದಲ್ಲಿ ಮುಂದಿನ ಐಪಿಎಲ್ ಆಡಬೇಕು ? ಬೇಡವೋ ಅನ್ನೋದು ನಿರ್ಧಾರ ಮಾಡಲಿದ್ದೇನೆ ಎಂದು ಧೋನಿ ಹೇಳಿದ್ದಾರೆ.
ಇನ್ನು ಸಾಕು, ನಿಲ್ಲಿಸಿಬಿಡಿ ಧೋನಿ: ನಿಮ್ಮ ಘನತೆ, ಗೌರವವನ್ನು ನೀವೇ ಕೈಯಾರೆ ನಾಶ ಮಾಡಿಕೊಳ್ಳುತ್ತಿರುವಿರಿ!
ವರ್ಷದಲ್ಲಿ ಒಂದು ಬಾರಿ ಐಪಿಎಲ್ ಆಡುತ್ತಿದ್ದೇನೆ. ಐಪಿಎಲ್ ಆರಂಭಕ್ಕೂ ಮುನ್ನವೇ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಾ ಅನ್ನೋದು ನಿರ್ಧರಿಸುತ್ತೇನೆ. ಇದುವರೆಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಂಡು ಐಪಿಎಲ್ ಆಡಿದ್ದೇನೆ. 2025ರ ಐಪಿಎಲ್ ಟೂರ್ನಿ ಆಡಲು ನಿರ್ಧರಿಸಿ ಪಾಲ್ಗೊಂಡಿದ್ದೇನೆ. ಇನ್ನು 2026ರ ಐಪಿಎಲ್ ಕುರಿತು ಮುಂದಿನ 10 ತಿಂಗಳಲ್ಲಿ ನಿರ್ಧರಿಸುತ್ತೇನೆ ಎಂದು ಧೋನಿ ಹೇಳಿದ್ದಾರೆ.
18ನೇ ಆವೃತ್ತಿ ಅನುಮಾನಕ್ಕೆ ಧೋನಿ ಉತ್ತರ
ಧೋನಿ ನಿವೃತ್ತಿಯಾಗುತ್ತಿದ್ದಾರೆ ಅನ್ನೋ ಗಾಳಿ ಸುದ್ದಿಗೆ ಧೋನಿ ಸ್ಪಷ್ಟ ಉತ್ತರ ನೀಡಿದ್ದಾರೆ. ಈ ಬಾರಿಯ 18ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಧೋನಿ ನಿವೃತ್ತಿಯಾಗುತ್ತಿಲ್ಲ ಅನ್ನೋದು ಸ್ಪಷ್ಟ. ಇಷ್ಟೇ ಅಲ್ಲ ಧೋನಿ ಅರ್ಧಕ್ಕೆ ವಿದಾಯ ಹೇಳುವುದಿಲ್ಲ ಅನ್ನೋದು ಸ್ಪಷ್ಟಪಡಿಸಿದ್ದಾರೆ.
ಫಿಟ್ನೆಸ್ ಉತ್ತರ ನೀಡುತ್ತೆ
ನಾನು ಆಡಬೇಕೋ, ಬೇಡವೋ ಅನ್ನೋದು ಫಿಟ್ನೆಸ್ ನಿರ್ಧರಿಸುತ್ತೆ. ಮುಂದಿನ 10 ತಿಂಗಳಲ್ಲಿ ನಾನು ಎಷ್ಟರ ಮಟ್ಟಿಗೆ ಫಿಟ್ ಇದ್ದೇನೆ, ಎಷ್ಟರ ಮಟ್ಟಿಗೆ ಆಡಲು ಸಾಧ್ಯವಿದೆ ಅನ್ನೋದರ ಮೇಲೆ ಮುಂದಿನ ಐಪಿಎಲ್ ಟೂರ್ನಿ ನಿರ್ಧಾರವಾಗುತ್ತದೆ ಎಂದಿದ್ದಾರೆ. ಈ ಮೂಲಕ ಧೋನಿ ತಾವು 2025ರ ಐಪಿಎಲ್ ಟೂರ್ನಿಯಲ್ಲಿ ನಿವೃತ್ತಿ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ಮಿಂಚಿನ ವೇಗ, ಅದೇ ಶೈಲಿ, ಅದೇ ಖದರ್ ಈಗಲೂ ಇದೆ. ಕಣ್ಣುಚ್ಚಿ ತೆರೆಯುವುದರೊಳಗೆ ಸ್ಟಂಪ್ ಔಟ್ ಮಾಡುವ ಧೋನ ಛಾತಿ ಈಗಲೂ ಹಾಗೇ ಇದೆ. ಆದರೆ ಬ್ಯಾಟಿಂಗ್‌ನಲ್ಲಿ ಧೋನಿ ಮೊದಲಿನಂತಿಲ್ಲ. ಅಲ್ಲೊಂದು ಇಲ್ಲೊಂದು ಸಿಕ್ಸರ್ ಬಂದರೂ ತಂಡವನ್ನು ದಡ ಸೇರಿಸುವಂತೆ ಕಾಣಿಸುತಿಲ್ಲ. ಇದು ಅಭಿಮಾನಿಗಳಿಗೆ ಬೇಸರವಾಗಿದೆ.
ಅಂಕಪಟ್ಟಿಯಲ್ಲಿ 9ನೇ ಸ್ಥಾನ
ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಮೇಲಿಂದ ಮೇಲೆ ಸೋಲು ಕಾಣುತ್ತಿದೆ. ಈಗಾಗಲೇ ಆಡಿದ 4 ಪಂದ್ಯಗಳಲ್ಲಿ 3 ರಲ್ಲಿ ಸೋಲು ಕಂಡಿದೆ. ಇನ್ನೊಂದು ಪಂದ್ಯ ಮಾತ್ರ ಗೆದ್ದುಕೊಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸಿಎಸ್‌ಕೆ ರೀತಿ ಒಂದು ಪಂದ್ಯ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 10ನೇ ಸ್ಥಾನದಲ್ಲಿದೆ.
ಡಿಸಿ ಪಂದ್ಯದ ಬಳಿಕ ಧೋನಿ ನಿವೃತ್ತಿ ಸುಳಿವು, 18 ವರ್ಷದಲ್ಲಿ ಮೊದಲ ಬಾರಿಗೆ ಪೋಷಕರು ಹಾಜರ್