Monsoon ಮುಂದಿನ 48 ಗಂಟೆಗಳಲ್ಲಿ 9 ರಾಜ್ಯದಲ್ಲಿ ಭಾರಿ ಮಳೆ, IMD ಎಚ್ಚರಿಕೆ!

Published : Jun 19, 2022, 03:56 PM IST
Monsoon ಮುಂದಿನ 48 ಗಂಟೆಗಳಲ್ಲಿ 9 ರಾಜ್ಯದಲ್ಲಿ ಭಾರಿ ಮಳೆ, IMD ಎಚ್ಚರಿಕೆ!

ಸಾರಾಂಶ

ಜೂನ್ ಅಂತ್ಯವಾಗುತ್ತದ್ದಂತೆ ಮುಂಗಾರು ಮಳೆ ಅಬ್ಬರ ಆರಂಭ 9ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ ಮುಂದಿನ 2 ದಿನಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ

ನವದೆಹಲಿ(ಜೂ.19): ಜೂನ್ ತಿಂಗಳಲ್ಲಿ ಸುರಿಯತ್ತಿದ್ದ ಮಳೆ ಈ ಬಾರಿ ಕೊಂಚ ವಿಳಂಭವಾಗಿದೆ. ಲೇಟ್ ಆದರೂ ಭರ್ಜರಿಯಾಗಿ ಅಬ್ಬರಿಸಲು ಮುಂಗಾರು ಸಜ್ಜಾಗಿದೆ. ಮುಂದಿನ 48ಗಂಟೆಗಳಲ್ಲಿ 9ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಭಾರತೀಯ ಹವಾಮಾನ ಇಲಾಖೆ ಇಂದು(ಜೂ.19) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮುನ್ಸೂಚನೆ ನೀಡಿದೆ.ವಿದರ್ಭ, ಆಂಧ್ರಪ್ರದೇಶ, ಬೇ ಆಫ್ ಬೆಂಗಾಲ್, ಮಧ್ಯಪ್ರದೇಶ, ಚತ್ತೀಸಘಡ, ಒಡಿಶಾ, ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Weather Forecast: ಇಂಡೋ-ದ. ಆಫ್ರಿಕಾ ನಡುವಿನ ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?

ದೆಹಲಿ, ಹರ್ಯಾಣ, ಚಂಡೀಘಡದಲ್ಲಿ ಜೂನ್ 20 ರಂದು ಭಾರಿ ಮಳೆಯಾಗಲಿದೆ. ಇನ್ನು ಪಂಜಾಬ್‌ ಇತರ ಭಾಗಗಳಲ್ಲಿ ಜೂನ್ 21ಕ್ಕೆ ಮಳೆ ಅಬ್ಬರ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. 

ಬೆಂಗಳೂರಿನಲ್ಲಿ ಮಳೆ ಅಬ್ಬರ, ಟಿ20 ಪಂದ್ಯಕ್ಕೂ ಆತಂಕ
ಬೆಂಗಳೂರಿನಲ್ಲಿ ಶನಿವಾರ ಭಾರಿ ಮಳೆ ಸುರಿದಿದೆ. ಸಂಜೆ ಹೊತ್ತಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇತ್ತ ಮಳೆ ಮನ್ಸೂಚನೆ ಕೂಡ ಕಾಡುತ್ತಿದೆ. ಹೀಗಾಗಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ನಗರದಲ್ಲಿ ಸಂಜೆ ಹೊತ್ತಿಗೆ ಮಳೆ ಸುರಿಯುವುದು ಶನಿವಾರವೂ ಮುಂದುವರೆದಿದ್ದು, ರಾಜ್‌ಮಹಲ್‌ ಗುಟ್ಟಹಳ್ಳಿಯಲ್ಲಿ 20 ಮಿ.ಮೀಟರ್‌ ಮಳೆಯಾಗಿದೆ. ಉಳಿದೆಡೆ ಪಾಲಿಕೆಯ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ.

ಮಳೆಯಿಂದಾಗಿ ಶೇಷಾದ್ರಿಪುರಂ, ಹೆಬ್ಬಾಳ, ಶಾಂತಿನಗರ, ಮಾರುಕಟ್ಟೆ, ಗಾಂಧಿಬಜಾರ್‌, ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೂ ಯಾವುದೇ ಸಂಭವಿಸಿಲ್ಲ. ಸಂಜೆ ಸುಮಾರು 7ಕ್ಕೆ ಆರಂಭವಾದ ಮಳೆ ರಾತ್ರಿ 11ರವರೆಗೂ ಮುಂದುವರೆದಿತ್ತು. ಬಹುತೇಕ ಕಡೆಗಳಲ್ಲಿ ತುಂತುರು ಮಳೆಯಾಗಿದ್ದು ಯಾವುದೇ ವಿದ್ಯುತ್‌ ಕಂಬಗಳು, ಮರಗಳು ಮುರಿದು ಬಿದ್ದಿಲ್ಲ. ಹಾಗೆಯೇ ಯಾವುದೇ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟು ಮಾಡಿದ ಪ್ರಕರಣಗಳು ದಾಖಲಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Karnataka Weather Forecast: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ನಿರೀಕ್ಷೆ

ಎಲ್ಲೆಲ್ಲಿ ಮಳೆ: ರಾಜ್‌ಮಹಲ್‌ ಗುಟ್ಟಳ್ಳಿ 20 ಮಿ.ಮೀ, ರಾಜರಾಜೇಶ್ವರಿ ನಗರದ ಎಚ್‌ಎಂಟಿ ವಾರ್ಡ್‌, ದಯಾನಗರ, ಸಂಪಂಗಿರಾಮ ನಗರದಲ್ಲಿ ತಲಾ 16 ಮಿ.ಮೀ., ಶೆಟ್ಟಿಹಳ್ಳಿ 13 ಮಿ.ಮೀ, ವಿಶ್ವೇಶ್ವರಪುರಂ, ನಾಗಪುರ, ರಾಜಾಜಿನಗರದಲ್ಲಿ ತಲಾ 12 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚಿರಾಪುಂಜಿಯಲ್ಲಿ 97 ಸೆಂ.ಮೀ ಮಳೆ
ಮೇಘಾಲಯದ ಚಿರಾಪುಂಜಿಯಲ್ಲಿ ಭರ್ಜರಿ 97.22 ಸೆ.ಮೀ.ನಷ್ಟುಮಳೆ ಸುರಿದಿದೆ. ಇದು ಕಳೆದ 122 ವರ್ಷಗಳಲ್ಲೇ ಮೂರನೇ ಅತ್ಯಧಿಕ ಮಳೆಯ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎರಡು ದಿನಗಳ ಹಿಂದಷ್ಟೇ ಚಿರಾಪುಂಜಿಯಲ್ಲಿ 81.16 ಸೆ.ಮೀನಷ್ಟುಮಳೆ ಸುರಿದಿತ್ತು.

ವಿಶ್ವದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಹಿರಿಮೆ ಹೊಂದಿದ್ದ ಚಿರಾಪುಂಜಿಯಲ್ಲಿ 1995ರ ಜೂ.15ರಂದು 156.33 ಸೆ.ಮೀನಷ್ಟುದಾಖಲೆಯ ಮಳೆ ಸುರಿದಿತ್ತು. ಆದರೆ ನಂತರದ ವರ್ಷಗಳಲ್ಲಿ ನಾನಾ ಕಾರಣದಿಂದಾಗಿ ಹಂತಹಂತವಾಗಿ ಮಳೆ ಪ್ರಮಾಣ ಇಳಿಕೆಯಾಗುತ್ತಾ ಬಂದಿತ್ತು. ಜೊತೆಗೆ ದೇಶದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಹಿರಿಮೆಯನ್ನೂ ಕಳೆದುಕೊಂಡಿತ್ತು. ಆದರೆ ಈ ವರ್ಷ ಈಗಾಗಲೇ ನಗರದಲ್ಲಿ ಭಾರೀ ಮಳೆಯಾಘಿದೆ. ತಿಂಗಳ ಆರಂಭದಿಂದ ಜೂ.17ರವರೆಗೆ ಚಿರಾಪುಂಜಿ ಒಟ್ಟಾರೆ 408.13 ಸೆಂ.ಮೀ ಮಳೆ ಪಡೆದುಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!