
ಡಿವೈಎಸ್‌ಪಿ, ಟೀಂ ಇಂಡಿಯಾದ ಮೊಹ್ಮದ್ ಸಿರಾಜ್ ಅವರ ದೇಶಭಕ್ತಿಗೆ ಕ್ರಿಕೆಟ್ ಲೋಕ ಸಲಾಂ ಹೊಡೆದಿದೆ. ಇವತ್ತು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಆಡಿದರು. ಈ ವೇಳೆ ಮೈದಾನದಲ್ಲಿ ಹೈಡ್ರಾಮಾ ನಡೆಯಿತು. ಆಗ ಸಿರಾಜ್ ಮೆರೆದಿರುವ ಸಮಯ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಮಾಡ್ತಿದೆ. ಈ ವೇಳೆ ಭಾರತದ ಅಭಿಮಾನಿಯೊಬ್ಬ ರಾಷ್ಟ್ರಧ್ವಜವನ್ನು ಹಿಡಿದು ಮೈದಾನಕ್ಕೆ ನುಗ್ಗಿದ್ದಾರೆ. ಆಗ ಆತನ ಹಿಡಿಯಲು ಭದ್ರತಾ ಸಿಬ್ಬಂದಿ ಬೆನ್ನಟ್ಟಿದ್ದಾರೆ. ಆಗ ಪಂದ್ಯ ನಿಂತಿದೆ. ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಹೀಗೆ ಅಭಿಮಾನಿ ರಾಷ್ಟ್ರಧ್ವಜ ಹಿಡಿದು ಓಡುವಾಗ ಒಂದು ಕಾಲು ಆಯತಪ್ಪಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ. ಆಗ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದುಕೊಳ್ಳಲು ಹೋಗಿ ಅವರೂ ಜಾರಿದ್ದಾರೆ. ಈ ವೇಳೆ ಭಾರತದ ರಾಷ್ಟ್ರಧ್ವಜ ನೆಲಕ್ಕೆ ಬಿದ್ದಿತ್ತು. ಭದ್ರತಾ ಸಿಬ್ಬಂದಿ ಹಾಗೂ ಅಭಿಮಾನಿಯ ಕೆಳಗೆ ಬಿದ್ದು ಹಾನಿಯಾಗುತ್ತಿತ್ತು.
ಅದನ್ನು ಗಮನಿಸಿದ ಸಿರಾಜ್, ಭದ್ರತಾ ಸಿಬ್ಬಂದಿಯ ಕೈಯಿಂದ ತ್ರಿವರ್ಣ ಧ್ವಜವನ್ನು ಕಸಿದುಕೊಂಡರು. ನಂತರ ಅದನ್ನು ಸಹ ಆಟಗಾರನಿಗೆ ನೀಡಿ ಹೊರಗೆ ಕಳುಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
SIRAJ SAVED THE TRICOLOUR! 🇮🇳❤️
A fan invaded the field carrying the Indian flag after the final ODI. As security personnel caught him, he fell to the ground.
But Siraj quickly grabbed the Tricolour before anyone could step on it. 🫡
RESPECT FOR THIS GESTURE! 🇮🇳 https://t.co/1OpFjNJxoz
— Mukku (@Cric_Mukku) November 15, 2026
ಸಿರಾಜ್ ಅವರಿಗೆ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇವತ್ತಿನ ಪಂದ್ಯ ಗೆಲ್ಲುವಲ್ಲಿ ಸಿರಾಜ್ ಕೊಡುಗೆ ಕೂಡ ಮುಖ್ಯವಾಗಿದೆ. ತಮ್ಮ ಕೋಟಾದ 10 ಓವರ್‍ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಇನ್ನು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ, 42.1 ಓವರ್‍ನಲ್ಲಿ ಎಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು 209 ರನ್‌ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ನ್ಯೂಜಿಲೆಂಡ್ 48.1 ಓವರ್ ಆಡಿ ಎಲ್ಲಾ ವಿಕೆಟ್ ಕಳೆದುಕೊಂಡು 187 ರನ್‌ಗಳಿಸಿ ಸೋಲಿಗೆ ಶರಣಾಯ್ತು.
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು. ಅರ್ಶ್ದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಗುರ್ನೂರ್ ಬ್ರಾರ್ ಟೂರ್ನಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 3 ಪಂದ್ಯಗಳಲ್ಲಿ ಬ್ರಾರ್ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದರು. ಐದನೇ ಏಕದಿನ ಪಂದ್ಯಕ್ಕೂ ಮುನ್ನ ಅವರು ಟೆಸ್ಟ್ ತಂಡವನ್ನು ಸೇರಿಕೊಂಡರು. ಇದರಿಂದಾಗಿ ಮೊಹಮ್ಮದ್ ಸಿರಾಜ್ ಅಂತಿಮ ಏಕದಿನ ಪಂದ್ಯಕ್ಕಾಗಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದರು. ಭಾರತ ಮತ್ತು ನ್ಯೂಜಿಲೆಂಡ್ ಈಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ, ಅದರಲ್ಲಿ ಮೊದಲನೆಯದು ನವೆಂಬರ್ 19 ರಂದು ಪ್ರಾರಂಭವಾಗುತ್ತದೆ.
ಟಿ20 ಸರಣಿ, ಏಕದಿ ಸರಣಿ ಗೆದ್ದುಕೊಂಡಿರುವ ಭಾರತಕ್ಕೆ ಟೆಸ್ಟ್ ಸರಣಿಯೂ ಸವಾಲಾಗಲಿದೆ. ಎರಡು ತಂಡಗಳ ಮಧ್ಯೆ ಎರಡು ಟೆಸ್ಟ್ ಮ್ಯಾಚ್‌ಗಳು ನಡೆಯಲಿವೆ. ಎರಡೂ ತಂಡಕ್ಕೂ ಟೆಸ್ಟ್ ಸರಣಿಯ ಗೆಲುವು ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತುಂಬಾನೇ ಮುಖ್ಯವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.