ಗಬ್ಬಾ ಟೆಸ್ಟ್ ಪಂದ್ಯದಲ್ಲೂ ಬದಲಾಗಿಲ್ಲ ಆಸಿಸಿ ಫ್ಯಾನ್ಸ್ ವರ್ತನೆ; ಮತ್ತೆ ಜನಾಂಗೀಯ ನಿಂದನೆ!

Published : Jan 15, 2021, 09:42 PM IST
ಗಬ್ಬಾ ಟೆಸ್ಟ್ ಪಂದ್ಯದಲ್ಲೂ ಬದಲಾಗಿಲ್ಲ ಆಸಿಸಿ ಫ್ಯಾನ್ಸ್ ವರ್ತನೆ; ಮತ್ತೆ ಜನಾಂಗೀಯ ನಿಂದನೆ!

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡಲಾಗುತ್ತಿದೆ. ಸಿಡ್ನಿ ಪಂದ್ಯದಲ್ಲಿನ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಇದರ ಬೆನ್ನಲೇ ಇದೀಗ 4ನೇ ಟೆಸ್ಟ್ ಪಂದ್ಯದಲ್ಲೂ ಮತ್ತೆ ಜನಾಂಗೀಯ ನಿಂದನೆ ಮಾಡಲಾಗಿದೆ.   

ಗಬ್ಬಾ(ಜ.15):  ಸಿಡ್ನಿ ಟೆಸ್ಟ್ ಪಂದ್ಯದಲ್ಲಿನ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಮೇಲೆ ಜನಾಂಗೀಯ ನಿಂದನೆ ಮಾಡಲಾಗಿತ್ತು. ಈ ಕುರಿತು ಟೀಂ ಇಂಡಿಯಾ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಇನ್ನು ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಸೇರದಂತೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆದರೆ ಆಸ್ಟ್ರೇಲಿಯಾ ಅಭಿಮಾನಿಗಳ ವರ್ತನೆ ಬದಲಾಗಿಲ್ಲ.

ಸಿರಾಜ್ ಮೇಲೆ ಮತ್ತೆ ಜನಾಂಗೀಯ ನಿಂದನೆ; 6 ಪ್ರೇಕ್ಷಕರ ಹೊರದಬ್ಬಿದ ಸಿಬ್ಬಂದಿ!..

4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಭಿಮಾನಿಗಳು ಮತ್ತೆ ಜನಾಂಗೀಯ ನಿಂದನೆ ಮಾಡಿದ್ದಾರೆ. ಫೀಲ್ಡಿಂಗ್ ಮಾಡುತ್ತಿದ್ದ ವೇಗಿ ಮೊಹಮ್ಮದ್ ಸಿರಾಜ್‌ಗೆ ನಿಂದನೆ ಮಾಡಿದ್ದಾರೆ. ಹುಳ, ಕೋತಿ ಎಂದು ಕರೆದಿದ್ದಾರೆ. ಈ ಕುರಿತು ಟೀಂ ಇಂಡಿಯಾ ಮ್ಯಾಚ್ ರೆಫ್ರಿಗೆ ದೂರು ನೀಡಿದೆ. ಸಿರಾಜ್ ಮಾತ್ರವಲ್ಲ ವಾಶಿಂಗ್ಟನ್ ಸುಂದರ್‌ಗೂ ಇದೇ ರೀತಿ ನಿಂದನೆ ಮಾಡಲಾಗಿದೆ.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಗಳ ವರ್ತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಣೆ ಕೇಳಿತ್ತು. ಇದೀಗ ಗಬ್ಬಾದಲ್ಲೂ ಇದೇ ರೀತಿ ವರ್ತನೆ ಮರುಕಳಿಸಿದೆ. ಇದೀಗ ಗಬ್ಬಾ ಟೆಸ್ಟ್ ಪಂದ್ಯದಲ್ಲಿನ ಘಟನೆ ಕುರಿತು ಆಸ್ಟ್ರೇಲಿಯಾ ತನಿಖೆ ನಡೆಸುತ್ತಿದೆ. ಇತ್ತ ಐಸಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಸೂಚಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿಯ ದೆಹಲಿ ಡೈರಿ: ಮುಂಬರುವ ಟಿ20 ವಿಶ್ವಕಪ್‌ಗೆ ಆಹ್ವಾನಿಸಿದ ಐಸಿಸಿ ಅಧ್ಯಕ್ಷ ಜಯ್ ಶಾ!
IPL Mini Auction: ಎಲ್ಲಾ ಐಪಿಎಲ್ ತಂಡಗಳ ಅವಶ್ಯಕತೆ ಏನು? ಯಾರ ಬಳಿ ಎಷ್ಟಿದೆ ಹಣ?