Hasin Jahan: ರೈಲಿನಲ್ಲಿ ಟಿಟಿಇ ಅನುಚಿತ ವರ್ತನೆ, ಮೊಹಮದ್‌ ಶಮಿ ಪತ್ನಿ ಹಸಿನ್‌ ಜಹಾನ್‌ ಆರೋಪ!

Published : Oct 15, 2022, 05:50 PM ISTUpdated : Oct 15, 2022, 05:51 PM IST
Hasin Jahan: ರೈಲಿನಲ್ಲಿ ಟಿಟಿಇ ಅನುಚಿತ ವರ್ತನೆ, ಮೊಹಮದ್‌ ಶಮಿ ಪತ್ನಿ ಹಸಿನ್‌ ಜಹಾನ್‌ ಆರೋಪ!

ಸಾರಾಂಶ

ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರು, ರೈಲಿನಲ್ಲಿ ಟಿಟಿಇ ಒಬ್ಬರು ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಹಸಿನ್ ಜಹಾನ್ ಇನ್ಸ್‌ಟಾಗ್ರಾಮ್‌ನಲ್ಲಿ ನಲ್ಲಿ ವಿವರಿಸಿದ್ದಾರೆ. ಹಸೀನ್ ಜಹಾನ್ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡು ರೈಲಿನಲ್ಲಿ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದರು. ಹಸಿನ್ ಜಹಾನ್ ಸದ್ಯ ಮೊಹಮ್ಮದ್ ಶಮಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಬದಲಿಗೆ ಶಮಿ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.  

ಕೋಲ್ಕತ್ತಾ (ಅ.15): ಟೀಮ್‌ ಇಂಡಿಯಾ ವೇಗಿ ಮೊಹಮದ್‌ ಶಮಿ ಅವರ ಪತ್ನಿ ಹಸಿನ್‌ ಜಹಾನ್‌ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ, ಈ ಬಾರಿ ಮೊಹಮದ್‌ ಶಮಿ ವಿಚಾರವಾಗಿ ಅವರು ಸುದ್ದಿಯಾಗಿಲ್ಲ. ಬದಲಾಗಿ ರೈಲ್ವೆ ಸಿಬ್ಬಂದಿಯೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಬಿಹಾರದ ಕತಿಹಾರ್‌ನಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದಾಗ ರೈಲಿನಲ್ಲಿ ಟಿಕೆಟ್ ತಪಾಸಣೆ ಸಿಬ್ಬಂದಿ (ಟಿಟಿಇ) ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಸಿನ್ ಜಹಾನ್ ಆರೋಪ ಮಾಡಿದ್ದಾರೆ, ಹಸಿನ್ ಜಹಾನ್ ನಂತರ ರೈಲ್ವೆ ಸಹಾಯವಾಣಿಯ ಸಹಾಯವನ್ನು ಪಡೆದುಕೊಳ್ಳುವ ಮೂಲಕ, ಭದ್ರತಾ ಸಿಬ್ಬಂದಿಯೊಂದಿಗೆ ಕೋಲ್ಕತ್ತಾಗೆ ವಾಪಸಾಗಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಹಸಿನ್ ಜಹಾನ್ ಇನ್ಸ್‌ಟಾಗ್ರಾಮ್‌ನಲ್ಲಿ  ವಿವರವಾಗಿ ಬರೆದುಕೊಂಡಿದ್ದಾರೆ. 'ನನ್ನ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಬಿಹಾರಕ್ಕೆ ಹೋಗಿದ್ದೆ. ಅವರು ವಾಸ ಮಾಡುವ ಊರಿಗೆ ವಿಮಾನದ  ವ್ಯವಸ್ಥೆ ಇದ್ದಿರಲಿಲ್ಲ. ಹಾಗಾಗಿ ನಾನು ಮರಳುವ ವೇಳೆ, ಬಿಹಾರದಿಂದ ಕೋಲ್ಕತ್ತಕ್ಕೆ ಜೋಗ್‌ಬನಿ ಎಕ್ಸ್‌ಪ್ರೆಸ್‌ನಲ್ಲಿ ಬಂದಿದ್ದೆ. ಈ ವೇಳೆ ನನಗೆ ರೈಲಿನಲ್ಲಿ ಅಪ್ಪರ್‌ ಬರ್ತ್‌ ನೀಡಲಾಗಿತ್ತು. ಆದರೆ, ಲೋವರ್‌ ಬರ್ತ್‌ನ 7ನೇ ನಂಬರ್‌ ಖಾಲಿ ಇತ್ತು. ಈ ಸಂದರ್ಭದಲ್ಲಿ ನಾನು ಅಲ್ಲಿದ್ದ ಪ್ರಯಾಣಿಕನಿಗೆ ಮನವಿ ಮಾಡಿಕೊಂಡು, ಲೋವರ್‌ ಬರ್ತ್‌ನಲ್ಲಿ ಕುಳಿತುಕೊಂಡಿದ್ದೆ' ಎಂದು ಬರೆದಿದ್ದಾರೆ.

ಬಳಿಕ ಮತ್ತಷ್ಟು ಬರೆದುಕೊಂಡಿರುವ ಅವರು 'ಹಾಗಿದ್ದರೂ, ಮಾಲ್ಡಾ ಸ್ಟೇಷನ್ ಬಂದಾಗ, ಟಿಟಿಇ (TTE) ಇನ್ನೊಬ್ಬ ವ್ಯಕ್ತಿಯೊಂದಿಗೆ ನಾನಿದ್ದ ಸ್ಥಳಕ್ಕೆ ಬಂದಿದ್ದಲ್ಲದೆ, ನನ್ನನ್ನು ತಪ್ಪಾಗಿ ಪ್ರಶ್ನಿಸಿದರು. ನಾನಿದ್ದ ಸೀಟ್‌ಅನ್ನು ಖಾಲಿ ಮಾಡುವಂತೆ ಹೇಳಿ ಕೂಗಾಡಿದ ಅವರು, ನನ್ನ ಮೊಬೈಲ್‌ಅನ್ನೂ ಎಸೆದಿದ್ದಾರೆ. ಈ ವೇಳೆ ನಾನು ರೈಲ್ವೆ ಸಹಾಯವಾಣಿಗೆ ದೂರು ನೀಡಿದ್ದೇನೆ. ನಂತರ ಪೊಲೀಸ್ ತಂಡ ಫರಕ್ಕಾ ಠಾಣೆಗೆ ಬಂದು ದೂರು ಆಲಿಸಿ ಸಂಪೂರ್ಣ ರಕ್ಷಣೆಯೊಂದಿಗೆ ಕೋಲ್ಕತ್ತಾ ತಲುಪಿದ್ದೇನೆ. ರೈಲ್ವೇ ಪೊಲೀಸ್ ತಂಡಕ್ಕೆ ಧನ್ಯವಾದಗಳು, ಆದರೆ ಟಿಟಿಇ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ಲವ್‌ ಸ್ಟೋರಿ!

ಮತ್ತೊಂದೆಡೆ, ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲವ್ಯ ಚಕ್ರವರ್ತಿ (Eklavya Chakraborty, Chief Public Relations Officer of Eastern Railway ) ಅವರು ಈ ವಿಷಯದಲ್ಲಿ ರೈಲ್ವೆಗೆ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಸಿನ್‌ ಜಹಾನ್‌ (Hasin Jahan), ಮೊಹಮದ್‌ ಶಮಿ (mohammed shami) ವಿರುದ್ಧ ಹಲ್ಲೆ ಹಾಗೂ ವರದಕ್ಷಣಿಯ ಆರೋಪ ಮಾಡಿದ್ದರು. ಇದು ದೊಡ್ಡ ವಿವಾದವಾದ ಬಳಿಕ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಶಮಿ, ಟಿ20 ವಿಶ್ವಕಪ್‌ (T20 World cup) ತಂಡದಲ್ಲಿ ಜಸ್‌ಪ್ರೀತ್‌ ಬುಮ್ರಾ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಮಗಳನ್ನು ಮಿಸ್‌ ಮಾಡಿಕೊಂಡ ಶಮಿ, ಸೆಲ್ಫಿಯಲ್ಲಿ ಮುಳುಗಿರುವ ಪತ್ನಿ‌!

ಕಳೆದ ತಿಂಗಳು ಏಷ್ಯಾಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಗೆದ್ದ ನಂತರ, ಹಸಿನ್ ಜಹಾನ್ ಹಾರ್ದಿಕ್ ಪಾಂಡ್ಯ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಮೂಲಕ ಹಸಿನ್ ಜಹಾನ್ ಶಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. 'ಅಭಿನಂದನೆಗಳು. ಸ್ಮರಣೀಯ ಗೆಲುವು. ದೇಶವನ್ನು ಗೆಲ್ಲಿಸಿದ ನಮ್ಮ ಹುಲಿಗಳಿಗೆ ಧನ್ಯವಾದಗಳು. ಇದು ಸಂಭವಿಸುವುದು ನಿಶ್ಚಿತವಾಗಿತ್ತು. ದೇಶದ ಪ್ರತಿಷ್ಠೆ ಮತ್ತು ಗೌರವವು ಪ್ರಾಮಾಣಿಕ ದೇಶಭಕ್ತರಿಂದ ರಕ್ಷಿಸಲ್ಪಟ್ಟಿದೆಯೇ ಹೊರತು ಅಪರಾಧಿಗಳು ಮತ್ತು ನಕಲಿ ಸ್ತ್ರೀವಾದಿಗಳಿಂದಲ್ಲ' ಎಂದು ಬರೆದಿದ್ದರು. 2018ರಲ್ಲಿ ಮೊಹಮದ್‌ ಶಮಿ ವೈಯಕ್ತಿಕ ಜೀವನ ಬಿರುಗಾಳಿಗೆ ಸಿಲುಕಿಕೊಂಡಿತ್ತು. ಶಮಿ ವಿರುದ್ಧ ಹಲ್ಲೆ, ವರದಕ್ಷಿಣೆ ಕಿರುಕುಳ ಹಾಗೂ ಮ್ಯಾಚ್‌ ಫಿಕ್ಸಿಂಗ್‌ನ ಆರೋಪವನ್ನು ಪತ್ನಿ ಹಸಿನ್‌ ಜಹಾನ್‌ ಮಾಡಿದ್ದರು. ಆದರೆ, ಸಂಪೂರ್ಣ ತನಿಖೆಯ ಬಳಿಕ ಅವರನ್ನು ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಿಂದ ಖುಲಾಸೆ ಮಾಡಲಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ