
ಹಿಂದೆ ಒಂದು ಜಮಾನದಲ್ಲಿ ಕೆಲವೊಂದು ಕೆಲಸ ಮನ್ನಣೆ ಹೆಚ್ಚಿಸುವ ಸಾಧನವಾಗಿತ್ತು. ಅಲ್ಲದೇ ಆ ಕೆಲಸ ಮಹತ್ವದ್ದಾಗಿದೆ ಎನಿಸಿದಾಗ ಮಾತ್ರ ಆ ಕೆಲಸ ನಿರ್ವಹಿಸುವವರನ್ನು ಇತರರಿಗಿಂತ ವಿಭಿನ್ನ ಎಂದು ಗುರುತಿಸಲಾಗಿತ್ತಿತ್ತು. ಆದರೆ ಈ ಸಾಲು ಇಂದು ಕ್ರಿಕೆಟ್‌ಗೆ ಅನ್ವಯಿಸುತ್ತಿಲ್ಲ ಎನ್ನುವುದು ಕಣ್ಣಿಗೆ ಕಟ್ಟುವಂತೆ ಕಾಣಿಸುತ್ತದೆ. ಏಕೆಂದರೆ ಇವತ್ತು ಕ್ರಿಕೆಟ್ ಕ್ಷೇತ್ರದಲ್ಲಿ ಮಾಡುವ ಕೆಲಸಕ್ಕಿಂತ, ವ್ಯಕ್ತಿ ಹೆಸರಿನಿಂದ ಅವನಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಕೆಲ ಮಾತುಗಳು ಈಗ ಸುದ್ದಿಯಲ್ಲಿವೆ. ಇಲ್ಲಿ ಭಾರತ ತಂಡ ಮೂರು ಫಾರ್ಮ್ಯಾಟ್ನಲ್ಲಿ ಸಿರೀಸ್‌ನ್ನು ನ್ಯೂಜಿಲೆಂಡ್‌ನಲ್ಲಿ ಆಡುತ್ತಿದೆ. ಅದು ಬೇರೆ ವಿಷಯ. ಆದರೆ ಆದ ಪ್ರತಿ ಮ್ಯಾಚ್ ನಂತರ ಈ ವ್ಯಕ್ತಿಯ ಹೆಸರು ಮುನ್ನೆಲೆಗೆ ಬರುತ್ತಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಅವರೇ ಟೀಂ ಇಂಡಿಯಾದ ದಂತಕಥೆ ಮೊಹ್ಮದ್ ಶಮಿ. ಬನ್ನಿ ಅವರು ಹೇಳಿದ ಆ ಒಂದು ಮಾತಿನ ಒಳಾರ್ಥ, ಆ ಅಸಹಾಯಕತೆ, ಅವರಲ್ಲಿನ ಅಸಹನೆಯನ್ನು ಹೇಗೆ ಹೊರಹಾಕಿದೆ ಎನ್ನುವುದನ್ನು ನೋಡೋಣ ಬನ್ನಿ.
ಬಹಳ ಹಿಂದೆಯೇ, ಶಾರುಖ್ ಖಾನ್ ನಟಿಸಿದ ಬಾಲಿವುಡ್ ಸಿನಿಮಾ ಬಿಡುಗಡೆಯಾಯಿತು, ಅದು ಯಾವುದೆಂದರೆ, ಮೈ ನೇಮ್ ಇಸ್ ಖಾನ್ ಅದರಲ್ಲಿ ಅವರು ನನ್ನ ಹೆಸರು ಖಾನ್ ಮತ್ತು ನಾನು ಭಯೋತ್ಪಾದಕನಲ್ಲ ಎನ್ನುವುದನ್ನು ಸಾರಿ, ಸಾರಿ ಹೇಳಿದಂತೆ ಇತ್ತು. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ, ಶಮಿ ದೇಶದ ಪ್ರತಿಯೊಂದು ಸ್ಟೇಡಿಯಂನಲ್ಲೂ ಮೈ ನೇಮ್ ಇಸ್ ಶಮಿ ಮತ್ತು ಐ ಯಾಮ್ ಬೌಲರ್ ಎಂದು ಕೂಗಿ ಹೇಳಿರುವಂತೆ, ಅವರ ಆರ್ತನಾದ ಎದೆಗೆ ಬಡೆದಂತೆ ಕಾಡುತ್ತದೆ. ಆದರೆ ಯಾರೂ ಗಮನ ಹರಿಸುತ್ತಿಲ್ಲ ಎನ್ನುವುದು ವಿಷಾಧದ ಸಂಗತಿ. ಈಗ ಪ್ರಶ್ನೆ ಹುಟ್ಟಿಕೊಳ್ಳುವುದೆಂದರೆ, ಆಯ್ಕೆದಾರರು ಶಮಿ ಹೆಸರಿಗೆ ಕಣ್ಣು ಮುಚ್ಚಿಕೊಳ್ಳಲು ಶಮಿ ಏನು ಮಾಡಿದ್ದಾರೆ, ಈ ಮೌನ ಯಾವುದೇ ನಾಯಕನಿಗೆ ಅವನ ಅಗತ್ಯವಿಲ್ಲ ಎನ್ನುವುದನ್ನು ಮೇಲ್ನೋಟಕ್ಕೆ ಇದು ಕಂಡರು, ಇದೇ ಸತ್ಯ.
ಇಲ್ಲಿ ಒಂದು ವಿಷಯವನ್ನು ಒಪ್ಪಲೇ ಬೇಕು ಅದೇನೆಂದರೆ, 36 ನೇ ವಯಸ್ಸಿನಲ್ಲಿ, ವೇಗದ ಬೌಲರ್‌ನ ಫಿಟ್‌ನೆಸ್ ಅನ್ನು ಪ್ರಶ್ನಿಸುವುದು ನ್ಯಾಯಸಮ್ಮತ. ಅದರಲ್ಲಿ ಎರಡು ಮಾತಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಲಾಂಗ್ ಸ್ಪೆಲ್ ಮತ್ತು ಐದು ದಿನಗಳ ಪ್ರೆಶರ್ ಸಹಿಸಿಕೊಳ್ಳುವುದು ಸುಲಭವಲ್ಲ. ರಣಜಿ ಟ್ರೋಫಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವುದು ಅವರ ಪ್ರಸ್ತುತ ಬೌಲಿಂಗ್ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ. ಆದರೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ಸಂಪೂರ್ಣ ಪ್ರೆಶರ್ ನಿಭಾಯಿಸಲು ಶಮಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆಂದು ಸಾಭೀತುಪಡಿಸಲು ಇದಕ್ಕಿಂತ ಉದಾಹರಣೆ ಬೇಕೆ? ಸಾಮಾನ್ಯ ಅಭಿಮಾನಿಗಳು ಹೊಂದಿರದ ಫಿಟ್‌ನೆಸ್, ಗಾಯಗಳು ಮತ್ತು ಕೆಲಸದ ಹೊರೆಗಳ ಬಗ್ಗೆ ಆಯ್ಕೆದಾರರು ಮಾಹಿತಿ ಹೊಂದಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಯ್ಕೆ ಸಮಿತಿ ವ್ಯಂಗ್ಯಕ್ಕೆ ಸಿಲುಕಿದೆ.
ದೆಹಲಿ ವಿರುದ್ಧದ ರಣಜಿ ಟ್ರೋಫಿಯಲ್ಲಿ, ಶಮಿ 17 ಓವರ್‌ಗಳಲ್ಲಿ 30 ರನ್‌ಗೆ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಇದು ಅದ್ಭುತ ಪ್ರದರ್ಶನವಾಗಿದೆ ಎನ್ನುವುದನ್ನು ಹಲವಾರು ವರದಿಗಳು ಹೇಳಿವೆ. ಇದಕ್ಕೂ ಮೊದಲು, 2025-26 ರಣಜಿ ಟ್ರೋಫಿಯಲ್ಲಿ, ಅವರು ಏಳು ಪಂದ್ಯಗಳಲ್ಲಿ 37 ವಿಕೆಟ್ ಪಡೆದು, ಸರಾಸರಿ 16.72 ಮತ್ತು ಮೂರು ಬಾರಿ ಐದು ವಿಕೆಟ್ ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿನ ಈ ಪ್ರದರ್ಶನ ಅವರ ಬೌಲಿಂಗ್ ಪರಾಕ್ರಮಕ್ಕೆ ತೆರೆದಿಟ್ಟ ಸಾಕ್ಷಿಯಾಗಿದೆ. ಅಲ್ಲದೇ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಿನಾರಿಯೋ ವಿಭಿನ್ನವಾಗಿದೆ. ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 16 ವಿಕೆಟ್, ವಿಜಯ್ ಹಜಾರೆ ಟ್ರೋಫಿಯಲ್ಲಿ 15 ವಿಕೆಟ್ ಪಡೆದರು. ಅರ್ಥಮಾಡಿಕೊಳ್ಳಿ ಶಮಿ ಇತ್ತೀಚೆಗಿನ ಪ್ರತಿ ಪಾಮ್ರ್ಯಾಟ್‌ನಲ್ಲಿ ಇತ್ತೀಚಿನ ಪರ್ಪಾರಮೆನ್ಸ್ ಅತ್ಯುತ್ತಮವಾಗಿವೆ. ಆದರೆ ಅವರ ಬಗ್ಗೆ ಆಯ್ಕೆದಾರರು ಹೊಂದಿರುವ ಮೌನ ನಿಜಕ್ಕೂ ಹಲವು ಅನುಮಾನವನ್ನು ಮೂಡಿಸುತ್ತದೆ.
ಮೊಹಮ್ಮದ್ ಶಮಿ 2014, 2020ರಲ್ಲಿ ಮೂರು ಬಾರಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದರು, ಈ ಪ್ರವಾಸಗಳಲ್ಲಿ ನಾಲ್ಕು ಟೆಸ್ಟ್ ಪಂದ್ಯ ಆಡಿದ್ದರು. ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಅಪಾರ ಅನುಭವ ಅವರಿಗಿದೆ. 2019 ರ ನ್ಯೂಜಿಲೆಂಡ್ ಏಕದಿನ ಪ್ರವಾಸದಲ್ಲಿ ಒಂಬತ್ತು ವಿಕೆಟ್ ಕಬಳಿಸುವ ಮೂಲಕ ಅವರು ತಮ್ಮ ಮೌಲ್ಯ ಸಾಬೀತುಪಡಿಸಿದ್ದಾರೆ. 2023ರ ವಿಶ್ವಕಪ್ ಸೆಮಿಫೈನಲ್ ಅನ್ನು ಯಾರು ಮರೆಯಲು ಸಾಧ್ಯ? ನ್ಯೂಜಿಲೆಂಡ್ ವಿರುದ್ಧದ ಅವರ 7/57 ಸ್ಪೆಲ್ ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇಡೀ ಟೂರ್ನಮೆಂಟ್‌ನಲ್ಲಿ 24 ವಿಕೆಟ್‌ಗಳೊಂದಿಗೆ, ಶಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರು. ಶಮಿ 2014-15, 2018-19 ಮತ್ತು 2020-21 ರಲ್ಲಿ ಆಸ್ಟ್ರೇಲಿಯಾದಲ್ಲಿ ಒಟ್ಟು ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದರು, 31 ವಿಕೆಟ್ ಕಬಳಿಸಿದರು. 2018 ರ ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಅವರ 6/56 ಅವರ ಅತ್ಯುತ್ತಮ ಬೌಲಿಂಗ್‌ಗೆ ಸಾಕ್ಷಿಯಾಗಿದೆ. ಶಮಿ ನಿರ್ಣಾಯಕ ಪಂದ್ಯಗಳಲ್ಲಿ ಭಾರತಕ್ಕೆ ಪದೇ ಪದೇ ವಿಕೆಟ್ ಒದಗಿಸಿದ್ದಾರೆ ಎಂಬುದನ್ನು ಈ ದಾಖಲೆಗಳೇ ತೋರಿಸುತ್ತವೆ.
ಶಮಿ ಅವರನ್ನು ಆಯ್ಕೆ ಮಾಡಬೇಕಿತ್ತೇ ಎಂಬುದು ಚರ್ಚಾಸ್ಪದ ವಿಷಯ. ಅವರ ಐಪಿಎಲ್ ಪ್ರದರ್ಶನ ಅವರಿಗೆ ಅನುಕೂಲಕರವಾಗಿರಲಿಲ್ಲ, ಆದರೆ ಅವರ ಇತ್ತೀಚಿನ ರಣಜಿ ಟ್ರೋಫಿ ಪ್ರದರ್ಶನ, 2025-26ರಲ್ಲಿನ ದಾಖಲೆಗಳು ಅವರ ಹಕ್ಕನ್ನು ಬಲಪಡಿಸುತ್ತದೆ. ಅವರ ಇಡೀ ವೃತ್ತಿಜೀವನವನ್ನು ನೋಡಿದರೆ ಆಸ್ಟ್ರೇಲಿಯಾದಲ್ಲಿ ಅವರ ವಿಕೆಟ್ ಟೇಕಿಂಗ್ ದಾಖಲೆ, ನ್ಯೂಜಿಲೆಂಡ್ ವಿರುದ್ಧದ ಅವರ ಟೆಸ್ಟ್ ಅನುಭವ ಮತ್ತು 2023 ರ ವಿಶ್ವಕಪ್‌ನಲ್ಲಿ ಅವರ ಐತಿಹಾಸಿಕ ಪ್ರದರ್ಶನ ಅವರ ಅನುಭವವನ್ನು ಸಾಕ್ಷೀಕರಿಸುತ್ತದೆ. ಆದರೆ ಕ್ರಿಕೆಟ್‌ನಲ್ಲಿ ಆಯ್ಕೆಯು ಹಿಂದಿನ ಪ್ರದರ್ಶನವನ್ನು ಮಾತ್ರ ಆಧರಿಸಿಲ್ಲ, ಆದರೆ ಪ್ರಸ್ತುತ ಪ್ರದರ್ಶನ, ಫಿಟ್‌ನೆಸ್ ಮತ್ತು ಭವಿಷ್ಯದ ಸಿದ್ಧತೆಯನ್ನು ಆಧರಿಸಿದೆ. ಆಟಗಾರನ ಹಿಂದಿನ ಮತ್ತು ವರ್ತಮಾನ ಎರಡನ್ನೂ ಪ್ರಾಮಾಣಿಕವಾಗಿ ನಿರ್ಣಯಿಸುವುದು ಅಷ್ಟೇ ಮುಖ್ಯ, ಇದು ಬಹುಶಃ ಶಮಿ ಪ್ರಕರಣದಲ್ಲಿ ನಡೆಯುತ್ತಿಲ್ಲ, ಇದು ಆಯ್ಕೆದಾರರ ಮೇಲೆ ನಿರಂತರವಾಗಿ ಅನುಮಾನದ ಮೋಡವನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಶಮಿ ಸ್ಟೇಡಿಯಂನಲ್ಲಿ ಅಬ್ಬರಿಸಿದ್ರೂ ಸೆಲೆಕ್ಟರ್ಸ್ ಕಣ್ಣಿಗೆ ಬಟ್ಟೆ ಕಟ್ಟಿದವರಾರು? ಎನ್ನುವ ಪ್ರಶ್ನೆ ಉತ್ತರ ಮಾತ್ರ ಇನ್ನು ಸಿಕ್ಕಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.