ಪಾಕ್‌ ವೇಗಿಗಳು ವಯಸ್ಸಿನ ವಂಚನೆ ನಡೆಸಿದ್ದಾರೆ: ಆಸಿಫ್‌ ಸ್ಪೋಟಕ ಹೇಳಿಕೆ

By Suvarna NewsFirst Published Jan 3, 2021, 9:11 AM IST
Highlights

ಪಾಕಿಸ್ತಾನ ಮಾಜಿ ವೇಗದ ಬೌಲರ್‌ ಮೊಹಮದ್ ಆಸಿಫ್‌ ಪಾಕ್‌ ಯುವ ವೇಗದ ಬೌಲರ್‌ಗಳ ವಯಸ್ಸಿನ ಸೀಕ್ರೇಟ್ ಬಿಚ್ಚಿಟ್ಟಿದ್ದು, ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಕರಾಚಿ(ಜ.03): ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ಸದ್ಯ ಆಡುತ್ತಿರುವ ವೇಗದ ಬೌಲರ್‌ಗಳು ತಾವು ಹೇಳಿಕೊಳ್ಳುತ್ತಿರುವ ವಯಸ್ಸಿಗಿಂತ 9ರಿಂದ 10 ವರ್ಷ ದೊಡ್ಡವರು. ಅವರ ಜನನ ಪ್ರಮಾಣ ಪತ್ರಗಳು ನಕಲಿ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಮೊಹಮದ್‌ ಆಸಿಫ್‌ ಗಂಭೀರ ಆರೋಪ ಮಾಡಿದ್ದಾರೆ. 

ತಮ್ಮ ಸಹ ಆಟಗಾರರಾಗಿದ್ದ ಕಮ್ರಾನ್‌ ಅಕ್ಮಲ್‌ರ ಯುಟ್ಯೂಬ್‌ ಚಾನೆಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ 101 ರನ್‌ಗಳ ಸೋಲು ಅನುಭವಿಸಿದ್ದರ ಬಗ್ಗೆ ಚರ್ಚೆ ನಡೆಸುವಾಗ ಆಸಿಫ್‌ ಈ ಆರೋಪ ಮಾಡಿದ್ದಾರೆ. ‘ತಂಡದಲ್ಲಿ ಹಾಲಿ ಇರುವ ಬೌಲರ್‌ಗಳ ವಯಸ್ಸು ದಾಖಲೆಯಲ್ಲಷ್ಟೇ 17ರಿಂದ 18, ಆದರೆ ಅವರಿಗೆ 27ರಿಂದ 28 ವರ್ಷ ವಯಸ್ಸಾಗಿದೆ’ ಎಂದಿರುವ ಆಸಿಫ್‌, ಇಂತದ್ದೇ ಬೌಲರ್‌ ವಯೋ ವಂಚನೆ ಮಾಡಿದ್ದಾರೆ ಎಂದು ಹೆಸರು ಬಹಿರಂಗಪಡಿಸಿಲ್ಲ.

ನಾನಿನ್ನೂ ಸಂಪೂರ್ಣ ಫಿಟ್‌ ಆಗಿಲ್ಲ: ಡೇವಿಡ್ ವಾರ್ನರ್‌ ಅಚ್ಚರಿಯ ಹೇಳಿಕೆ

ಪಾಕಿಸ್ತಾನ ಕ್ರಿಕೆಟ್‌ ಕಂಡ ಅದ್ಭುತ ಬೌಲರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಮೊಹಮದ್ ಆಸಿಫ್‌ ಐಸಿಸಿಯಿಂದ ನಿಷೇಧಕ್ಕೆ ಒಳಗಾಗುವ ಮೂಲಕ ಕ್ರಿಕೆಟ್ ವೃತ್ತಿಜೀವನ ಅಂತ್ಯವಾಯಿತು. 2010ರಲ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ವೇಳೆ ಸ್ಪಾಟ್‌ ಫಿಕ್ಸಿಂಗ್ ಮಾಡಿದ ತಪ್ಪಿಗೆ ಆಸಿಫ್‌ಗೆ 5 ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಿತ್ತು. 

click me!