ರೋಹಿತ್ ಶರ್ಮಾ ಸೇರಿ ಐವರ ಹೊಟೆಲ್ ಬಿಲ್ ನೋಡಿ ಕೆರಳಿ ಕೆಂಡವಾದ ಫ್ಯಾನ್ಸ್!

Published : Jan 02, 2021, 07:49 PM ISTUpdated : Jan 02, 2021, 08:55 PM IST
ರೋಹಿತ್ ಶರ್ಮಾ ಸೇರಿ ಐವರ ಹೊಟೆಲ್ ಬಿಲ್ ನೋಡಿ ಕೆರಳಿ ಕೆಂಡವಾದ  ಫ್ಯಾನ್ಸ್!

ಸಾರಾಂಶ

ರೋಹಿತ್ ಶರ್ಮಾ ಸೇರಿದಂತೆ ಐವರು ಟೀಂ ಇಂಡಿಯಾ ಕ್ರಿಕೆಟಿಗರು ಕೊರೋನಾ ನಿಯಮ ಉಲ್ಲಂಘಿಸಿ ಇದೀಗ ವಿವಾದ ಸೃಷ್ಟಿಸಿದ್ದಾರೆ. ಹೊಟೆಲ್‌ಗೆ ತೆರಳಿ ಊಟ ಸೇವಿಸಿದ ಕ್ರಿಕೆಟಿಗರ ವಿರುದ್ಧ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಇದೀಗ ತನಿಖೆಗೆ ಸೂಚಿಸಿದೆ. ಆದರೆ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಇದಲ್ಲ.  ಹೊಟೆಲ್‌ನಲ್ಲಿನ ಬಿಲ್  ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಮೆಲ್ಬೊರ್ನ್(ಜ.02): ಕೊರೋನಾ ವೈರಸ್ ಪ್ರೊಟೋಕಾಲ್ ಉಲ್ಲಂಘಿಸಿದ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ ಸೇರಿದಂತೆ ಐವರ ಮೇಲೆ ತನಿಖೆ ನಡೆಸಲು ಬಿಸಿಸಿಐ ಸೂಚಿಸಿದೆ. ನಿಯಮದ ಪ್ರಕಾರ ಕ್ರಿಕೆಟಿಗರು ತಂಗುವ ಹೊಟೆಲ್ ಹಾಗೂ ಕ್ರೀಡಾಂಗಣ ಹೊರತು ಪಡಿಸಿ ಇತರೆಡೆ ತೆರಳುವಂತಿಲ್ಲ. ಆದರೆ ಕ್ವಾರಂಟೈನ್ ಮುಗಿಸಿ ಟೀಂ ಇಂಡಿಯಾ ಸೇರಿಕೊಂಡ ರೋಹಿತ್ ಶರ್ಮಾ ಸಹ ಆಟಗಾರರ ಜೊತೆ ನಿಯಮ ಉಲ್ಲಂಘಿಸಿದ್ದಾರೆ. ಇದು ಬಿಸಿಸಿಐ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇತ್ತ ಅಭಿಮಾನಿಗಳಿಗೆ ಹೊಟೆಲ್ ಬಿಲ್ ಆಕ್ರೋಶ ತರಿಸಿದೆ.

ರೋಹಿತ್ ಶರ್ಮಾ ಸೇರಿ ಐವರ ವಿರುದ್ಧ ತನಿಖೆಗೆ ಆದೇಶಿಸಿದ BCCI; ಸಂಕಷ್ಟದಲ್ಲಿ ಟೀಂ ಇಂಡಿಯಾ!.

ಹೊಟೆಲ್ ತೆರಳಿದ ರೋಹಿತ್ ಶರ್ಮಾ, ರಿಷಬ್ ಪಂತ್, ನವದೀಪ್ ಸೈನಿ, ಶುಬಮನ್ ಗಿಲ್ ಹಾಗೂ ಪೃಥ್ವಿ ಶಾ ಹಲವು ತನಿಸು ಆರ್ಡರ್ ಮಾಡಿದ್ದಾರೆ. ಬಳಿಕ ಬಿಲ್ ಅಭಿಮಾನಿ ನವಲ್‌ದೀಪ್ ಸಿಂಗ್ ಪಾವತಿ ಮಾಡಿದ್ದರು. ಇಷ್ಟೇ ಅಲ್ಲ, ಈ ಬಿಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಿಲ್‌ನಲ್ಲಿ ಟೀಂ  ಇಂಡಿಯಾ ಆಟಗಾರರು ಖರೀದಿಸಿದ ತಿನಿಸುಗಳ ವಿವರ ಇದೆ. ಇದರಲ್ಲಿ ಬೀಫ್(ದನದ ಮಾಂಸ) ಖಾದ್ಯ ಪಡೆದಿರುವ ಮಾಹಿತಿ ಇದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಶರ್ಮಾಜಿಕಾ ಬೇಟೆ ಬೀಫ್ ಖಾತಾ ಹೈ ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಈ ಹಿಂದೆ ಬೀಫ್ ಬೇಡ ಎಂದು ವಿಶ್ವದಲ್ಲಿ ಸುದ್ದಿಯಾಗಿದ್ದರು. ಆದರೆ ಇದು ತೋರ್ಪಡಿ ಮಾತ್ರವೇ ಎಂದು ಪ್ರಶ್ನಿಸಿದ್ದಾರೆ. ಹಂದಿ ಮಾಂಸ ಒಕೆ, ಆದರೆ ದನದ ಮಾಂಸ ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ