ವಾಂಖೆಡೆಯಲ್ಲಿ ಇಂದು ಬಿಗ್ ಫೈಟ್! ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್‌ರೈಡರ್ಸ್ ನಡುವಿನ ಯುದ್ದ ಗೆಲ್ಲೋದ್ಯಾರು?

Published : Mar 29, 2026, 09:08 AM IST
KKR vs MI

ಸಾರಾಂಶ

ಇಂದು ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ. ಬಲಿಷ್ಠ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್ ಹೊಂದಿರುವ ಮುಂಬೈಗೆ, ಸ್ಪಿನ್ ವಿಭಾಗದಲ್ಲಿ ಬಲಿಷ್ಠವಾಗಿರುವ ಕೋಲ್ಕತಾ ತಂಡವು ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಉಭಯ ತಂಡಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ.

ಮುಂಬೈ: ಐಪಿಎಲ್‌ನಲ್ಲಿ ಇವತ್ತು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಈ ಹೈವೋಲ್ಟೇಜ್ ಮ್ಯಾಚ್ ಶುರುವಾಗಲಿದೆ. ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಗೆದ್ದಿದ್ರೆ, ಕೋಲ್ಕತಾ 3 ಬಾರಿ ಟ್ರೋಫಿ ಎತ್ತಿದೆ. ಹೀಗಾಗಿ ಇವತ್ತಿನ ಫೈಟ್ ಸಖತ್ ಜೋರಾಗಿರುತ್ತೆ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಕಪ್ ಗೆಲ್ಲಲಾಗದ ಬೇಸರವನ್ನು ಮರೆಯಲು ಮುಂಬೈ ಇಂಡಿಯನ್ಸ್‌ ಈ ಸಲ ಟ್ರೋಫಿ ಗೆಲ್ಲಲೇಬೇಕು. ಅದಕ್ಕೆ ತಕ್ಕ ಹಾಗೆ ಒಂದು ಒಳ್ಳೆ ಆರಂಭ ಬೇಕು. ಕಳೆದ ಬಾರಿ 3ನೇ ಸ್ಥಾನಿಯಾಗಿದ್ದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಈ ಬಾರಿ ಮತ್ತಷ್ಟು ಬಲಿಷ್ಠವಾಗಿದೆ.

ಮುಂಬೈ ತಂಡದ ಹೀರೋ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ:

ಇವತ್ತಿನ ಮ್ಯಾಚ್‌ನಲ್ಲಿ ಫಿಟ್ ಆಗಿ, ಫುಲ್ ಸೆಟ್ ಆಗಿ ಕಣಕ್ಕಿಳಿಯುತ್ತಿರೋ ರೋಹಿತ್, ಇಡೀ ಮೈದಾನದಲ್ಲಿ ಅಬ್ಬರಿಸುತ್ತಾರೆ ಅನ್ನೋದು ಫ್ಯಾನ್ಸ್ ನಿರೀಕ್ಷೆ. ರೋಹಿತ್ ಜೊತೆ ಓಪನಿಂಗ್‌ಗೆ ಕ್ವಿಂಟನ್ ಡಿ ಕಾಕ್ ಇದ್ದಾರೆ. ನಂತರ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ನಮನ್ ಧೀರ್ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ದೊಡ್ಡ ಸ್ಕೋರ್ ಮಾಡಲು ಬೇಕಾದ ಎಲ್ಲಾ ಸೆಟಪ್ ಮುಂಬೈ ಕೈಯಲ್ಲಿದೆ.

ಕಳೆದ ಸೀಸನ್ ನಿರಾಸೆ ಮರೆಯಲು ರೆಡಿಯಾದ ಕೆಕೆಆರ್

ಕಳೆದ ವರ್ಷ 8ನೇ ಸ್ಥಾನಕ್ಕೆ ಕುಸಿದಿದ್ದ ನಿರಾಸೆಯನ್ನು ಕೋಲ್ಕತಾ ತಂಡ ಈ ಸಲ ನೀಗಿಸಿಕೊಳ್ಳಬೇಕಿದೆ. ಫಿನ್ ಅಲೆನ್, ಟಿಮ್ ಸೈಫರ್ಟ್ ಅವರಂತಹ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. 25 ಕೋಟಿ ರೂಪಾಯಿ ಕೊಟ್ಟು ಖರೀದಿಸಿರುವ ಕ್ಯಾಮರೂನ್ ಗ್ರೀನ್ ಅವರಿಂದ ಟೀಮ್ ಮ್ಯಾನೇಜ್ಮೆಂಟ್ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ನಿರೀಕ್ಷಿಸುತ್ತಿದೆ. ಯುವ ಆಟಗಾರ ಅಂಗ್‌ಕೃಷ್ ರಘುವಂಶಿ ಬ್ಯಾಟಿಂಗ್ ನೋಡಲು ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಸೆಂಚುರಿ ಬಾರಿಸಿರುವ ಈ ಆಟಗಾರ, ಇವತ್ತಿನ ಮ್ಯಾಚ್‌ನಲ್ಲೂ ಅಬ್ಬರಿಸುವ ನಿರೀಕ್ಷೆ ಇದೆ.

ಪೇಸ್ ಬೌಲಿಂಗ್ ವಿಚಾರದಲ್ಲಿ ಮುಂಬೈ ಒಂದು ಕೈ ಮೇಲಿದೆ. ಬುಮ್ರಾ ಮತ್ತು ಬೋಲ್ಟ್ ಅವರ ಡಬಲ್ ಎಂಜಿನ್ ಪವರ್ ತಂಡಕ್ಕಿದೆ. ಇವರ ಜೊತೆಗೆ ದೀಪಕ್ ಚಹರ್, ಶಾರ್ದುಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಇದ್ದಾರೆ. ಆದರೆ, ಕೋಲ್ಕತಾದ ಪೇಸ್ ಬೌಲಿಂಗ್ ವಿಭಾಗ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಹರ್ಷಿತ್ ಮತ್ತು ಆಕಾಶ್‌ದೀಪ್ ಗಾಯಗೊಂಡು ಹೊರಗುಳಿದಿದ್ದಾರೆ. ಲಂಕಾದ ಪೇಸರ್ ಮತೀಶ ಪತಿರಾನ ತಂಡ ಸೇರುವುದು ತಡವಾಗಲಿದೆ. ಸದ್ಯಕ್ಕೆ ಕಾರ್ತಿಕ್ ತ್ಯಾಗಿ ಮತ್ತು ವೈಭವ್ ಅರೋರಾ ಅವರನ್ನೇ ತಂಡ ನಂಬಿಕೊಂಡಿದೆ. ಆದರೆ, ಸ್ಪಿನ್ ವಿಭಾಗದಲ್ಲಿ ಕೋಲ್ಕತಾ ಮೇಲುಗೈ ಸಾಧಿಸಿದೆ. ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್‌ ಅನ್ನು ಮುಂಬೈ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡಿದರಷ್ಟೇ ಪಾರಾಗಲು ಸಾಧ್ಯ.

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ಎರಡೂ ತಂಡಗಳು ಬಲಾಬಲ ಹೊಂದಿವೆ. ರೋಹಿತ್, ಸೂರ್ಯರಂತಹ ಸೀನಿಯರ್‌ಗಳನ್ನು ನಿಭಾಯಿಸುತ್ತಿರುವ ಕ್ಯಾಪ್ಟನ್ ಹಾರ್ದಿಕ್‌ಗೆ ಈ ಸೀಸನ್ ತುಂಬಾನೇ ನಿರ್ಣಾಯಕ. ಕಮ್‌ಬ್ಯಾಕ್ ಮಾಡಿ ಕಪ್ ಗೆಲ್ಲಲು ಇದೇ ಲಾಸ್ಟ್ ಚಾನ್ಸ್ ಅಂದ್ರೂ ತಪ್ಪಾಗಲ್ಲ. ಇತ್ತ ಕೆಕೆಆರ್‌ನಲ್ಲಿ ಕ್ಯಾಪ್ಟನ್ ಅಜಿಂಕ್ಯ ರಹಾನೆ ಫಾರ್ಮ್ ತಂಡಕ್ಕೆ ನಿಜಕ್ಕೂ ತಲೆನೋವಾಗಿದೆ. ರಹಾನೆ ಟಿ20 ಸ್ಟೈಲ್‌ನಲ್ಲಿ ಮಿಂಚದಿದ್ದರೆ ತಂಡಕ್ಕೆ ಕಷ್ಟವಾಗಬಹುದು. ರಹಾನೆಗೆ ಬ್ಯಾಕಪ್ ಆಗಿ ಉಪನಾಯಕನಾಗಿ ರಿಂಕು ಸಿಂಗ್ ಅವರನ್ನು ತರಲಾಗಿದೆ. ಐಪಿಎಲ್‌ನಲ್ಲಿ ಈವರೆಗೆ 35 ಬಾರಿ ಮುಖಾಮುಖಿಯಾದಾಗ, 24 ಸಲ ಮುಂಬೈ ಗೆದ್ದಿದೆ. ಕೋಲ್ಕತಾ ಗೆದ್ದಿದ್ದು ಕೇವಲ 11 ಬಾರಿ. ಆದರೆ, ಕಳೆದ 10 ಮ್ಯಾಚ್‌ಗಳಲ್ಲಿ ಎರಡೂ ತಂಡಗಳು ತಲಾ 5 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ
ಐಪಿಎಲ್ 2026: ನಿನ್ನೆ ನಡೆದ ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?