
ಮುಂಬೈ: ಐಪಿಎಲ್‌ನ ಪ್ರಮುಖ ಎದುರಾಳಿಗಳಾಗಿರುವ, ತಲಾ 5 ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗುರುವಾರ ಪರಸ್ಪರ ಮುಖಾಮುಖಿಯಾಗಲಿವೆ. 2 ತಂಡಗಳೂ ಈ ಬಾರಿ ಸಾಧಾರಣ ಪ್ರದರ್ಶನ ನೀಡುತ್ತಿದ್ದು, 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯಗಳಿಸಿವೆ. ಹೀಗಾಗಿ ಇತ್ತಂಡಕ್ಕೂ ಗೆಲುವು ಅನಿವಾರ್ಯ. ಎಲ್ಲಕ್ಕಿಂತ ಮುಖ್ಯವಾಗಿ ಉಭಯ ತಂಡಗಳ ಪ್ರಮುಖ ಆಟಗಾರರಾಗಿರುವ ಎಂ.ಎಸ್.ಧೋನಿ, ರೋಹಿತ್ ಶರ್ಮಾ ಕಮ್‌ಬ್ಯಾಕ್ ಬಗ್ಗೆ ಕುತೂಹಲವಿದೆ.
ಇವರಿಬ್ಬರೂ ಸ್ನಾಯುಸೆಳೆತಕ್ಕೆ ಒಳಗಾಗಿದ್ದಾರೆ. ಧೋನಿ ಈ ವರ್ಷ ಒಂದೂ ಪಂದ್ಯವಾಡಿಲ್ಲ. ಅವರು ತಂಡದ ಜೊತೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದು, ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ. ಮತ್ತೊಂದೆಡೆ ರೋಹಿತ್ ಕಳೆದೆರಡು ಪಂದ್ಯಕ್ಕೆ ಗೈರಾಗಿದ್ದಾರೆ. ಅವರು ಮಂಗಳವಾರ ಅಭ್ಯಾಸ ಮಾಡಿಲ್ಲ. ಹೀಗಾಗಿ ಅವರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಉಳಿದಂತೆ, ಸತತ 4 ಸೋಲುಗಳ ಬಳಿಕ ಕಳೆದ ಪಂದ್ಯದಲ್ಲಿ ಗೆದ್ದಿದ್ದ ಮುಂಬೈ ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ತಿಲಕ್ ವರ್ಮಾ, ಡಿ ಕಾಕ್ ಉತ್ತಮ ಲಯದಲ್ಲಿದ್ದಾರೆ. ಸಿಎಸ್‌ಕೆ ಸತತ 2 ಗೆಲುವಿನ ಬಳಿಕ ಕೊನೆ ಪಂದ್ಯದಲ್ಲಿ ಸೋತಿತ್ತು. ಗಾಯಾಳುಗಳ ಸಮಸ್ಯೆ ಎದುರಾಗದಂತೆ ಆಡಿ ಗೆಲ್ಲಬೇಕಾದ ಅನಿವಾರ್ಯತೆ ತಂಡಕ್ಕಿದೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್, ದಾನಿಶ್ ಮಾಲೆವರ್, ನಮನ್ ಧೀರ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ಶೆರ್ಫಾನೆ ರುದರ್‌ಫೋರ್ಡ್, ಕ್ರಿಶ್ ಭರತ್, ಮಿಚೆಲ್ ಸ್ಯಾಂಟ್ನರ್, ವಿಲ್ ಜ್ಯಾಕ್ಸ್, ಜಸ್ಪ್ರೀತ್ ಬುಮ್ರಾ, ಅಶ್ವನಿ ಕುಮಾರ್.
ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್(ನಾಯಕ), ಊರ್ವಿಲ್ ಪಟೇಲ್, ಸರ್ಫರಾಜ್ ಖಾನ್, ಶಿವಂ ದುಬೆ, ಡೆವಾಲಲ್ಡ್ ಬ್ರೆವೀಸ್, ಜೇಮಿ ಓವರ್‌ಟನ್, ಎಂ ಎಸ್ ಧೋನಿ(ವಿಕೆಟ್ ಕೀಪರ್), ಅನ್ಸೂಲ್ ಕಂಬೋಜ್, ನೂರ್ ಅಹಮದ್, ಸ್ಪೆನ್ಸರ್ ಜಾನ್ಸನ್, ಗುರುಪನ್‌ಜೀತ್ ಸಿಂಗ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.