ಡೆಲ್ಲಿ ಪ್ರೀಮಿಯರ್‌ ಲೀಗ್‌ನಲ್ಲಿ 6-7 ಸೆಲೆಬ್ರೇಷನ್ ಮೂಲಕ ನ್ಯಾಷನಲ್ ಕ್ರಶ್ ಆದ ಮೇಧವಿ ಬಿಧೂರಿ

Published : Aug 21, 2026, 04:51 PM IST
Who Is DPL star Medhavi Bidhuri

ಸಾರಾಂಶ

ಡೆಲ್ಲಿ ಪ್ರೀಮಿಯರ್ ಲೀಗ್ ಮಹಿಳಾ ಟೂರ್ನಿಯಲ್ಲಿ ಮೇಧವಿ ಬಿಧೂರಿ ಸೆಲೆಬ್ರೇಷನ್ ಭಾರಿ ವೈರಲ್ ಆಗಿದೆ. ಈ ಸೆಲೆಬ್ರೇಷನ್‌ನಿಂದ ಮೇಧವಿ ಇದೀಗ ನ್ಯಾಷನಲ್ ಕ್ರಶ್ ಆಗಿ ಮಾರ್ಪಟ್ಟಿದ್ದಾರೆ. ಏನಿದು 6-7 ಸೆಲೆಬ್ರೇಷನ್?

ದೆಹಲಿ (ಆ.21) ಡೆಲ್ಲಿ ಪ್ರೀಮಿಯರ್ ಲೀಗ್ ಮಹಿಳಾ ಟೂರ್ನಿ ರೋಚಕತೆ ಹೆಚ್ಚಿಸುತ್ತಿದೆ. ಭರ್ಜರಿ ಚೇಸಿಂಗ್, ದಿಢೀರ್ ವಿಕೆಟ್ ಪತನ, ಸಂಭ್ರಮಾಚರಣೆ ಮೂಲಕ ಮಹಿಳಾ ಲೀಗ್ ಟೂರ್ನಿ ದೇಶದ ಗಮನಸೆಳೆದಿದೆ. ವಿಶೇಷ ಅಂದರೆ ಈ ಟೂರ್ನಿಯಲ್ಲಿ ಲೆಗ್ ಸ್ಪಿನ್ನರ್ ಮೇಧವಿ ಬಿಧೂರಿಯ 6-7 ಸೆಲೆಬ್ರೇಷನ್ ಇದೀಗ ಭಾರಿ ವೈರಲ್ ಆಗಿದೆ. ಈ ಸಂಭ್ರಮಾಚರಣೆ ಮೂಲಕ ಮೇಧವಿ ಬಿಧೂರಿ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. 20ರ ಹರೆಯದ ಮೇಧವಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

ವಿಕೆಟ್ ಕಬಳಿ ಸಂಭ್ರಮಿಸಿದ ಮೇಧವಿ ಬಿಧೂರಿ

ಸೆಂಟ್ರಲ್ ಡೆಲ್ಲಿ ಕ್ವೀನ್ಸ್ ತಂಡದ ಪರವಾಗಿ ಆಡುತ್ತಿರುವ ಮೇಧವಿ ಬಿಧೂರಿ ಅದ್ಭುತ ಬೌಲಿಂಗ್ ಮೂಲಕ ವಿಕೆಟ್ ಪಡೆದಿದ್ದಾರೆ. ಈ ವಿಕೆಟ್ ಸಂಭ್ರವನ್ನು ಮೇಧವಿ ಬಿಧೂರಿ ವಿಶೇಷವಾಗಿ ಮಾಡಿದ್ದಾರೆ. ಈ ಮೂಲಕ ವೈರಲ್ ಆಗಿದ್ದಾರೆ. ಜೊತಗೆ ತಮ್ಮ ಸೌಂದರ್ಯ, ನಗುವಿನಿಂದ ಕ್ರಿಕೆಟ್ ಅಭಿಮಾನಿಗಳ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಕ್ರಿಕೆಟ್ ಫ್ಯಾನ್ಸ್ ಮೇಧವಿ ಬಿಧೂರಿ ಕುರಿತು ತಿಳಿದುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ.

ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ತಂಡದ ನಿಶಿಕಾ ಸಿಂಗ್ ವಿಕೆಟ್ ಕಬಳಿಸಿದ ಮೇಧವಿ ಈ ಸಂಭ್ರಮಾಚರಣೆ ಮಾಡಿದ್ದಾರೆ. ಫೀಲ್ಡರ್ ಕ್ಯಾಚ್ ಹಿಡಿಯುತ್ತಿದ್ದಂತೆ ವಿಶೇಷ ಸೆಲೆಬ್ರೇಷನ್ ಮಾಡಿದ್ದಾರೆ. 6 ಹಾಗೂ 7 ಅಂಕಿ ಸೂಚಿಸುವ ರೀತಿಯಲ್ಲಿ ಮೇಧವಿ ಬಿಧೂರಿ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸೆಲೆಬ್ರೇಷನ್ ಕುರಿತು ಪಂದ್ಯದ ಬಳಿಕ ವಿವರಣೆ ನೀಡಿದ್ದಾರೆ.

ಏನಿದು 6-7 ನಂಬರ್ ಸೆಲೆಬ್ರೇಷನ್

ಮೇಧವಿ ಬಿಧೂರಿ ಮಾಡಿದ 6-7 ಅಂಕಿ ಸೂಚಿಸುವ ಸೆಲೆಬ್ರೇಷನ್ ಹಿಂದಿ ರಾಕೆಟ್ ಸೈನ್ಸ್ ಇಲ್ಲ ಎಂದು ಮೇಧವಿ ಹೇಳಿದ್ದಾರೆ. ತನ್ನ ಜರ್ಸಿ ನಂಬರ್ 67. ಹೀಗಾಗಿ ಈ ಸೆಲೆಬ್ರೇಷನ್ ಮಾಡಿದ್ದೇನೆ. ನನ್ನ ಇಷ್ಟ ಜರ್ಸಿ ನಂಬರ್ 12 ಆಗಿತ್ತು. ಆದರೆ ಈ ಜರ್ಸಿ ನಂಬರ್ ಲಾಕ್ ಆಗಿತ್ತು. ಹೀಗಾಗಿ ನನಗೆ 67 ಜರ್ಸಿ ನಂಬರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಹೀಗಾಗಿ 6-7 ಅಂಕಿ ಸೂಚಿವು ಸೆಲೆಬ್ರೇಷನ್ ಮಾಡಿದ್ದೇನೆ ಎಂದು ಮೇಧವಿ ಬಿಧೂರಿ ನಗುತ್ತಲೇ ಹೇಳಿದ್ದಾರೆ.

ಕ್ರಿಕೆಟ್ ಫೀಲ್ಡ್‌ನಲ್ಲಿ ಸಿಗ್ನೆಚರ್ ಸೆಲೆಬ್ರೇಷನ್‌ಗಳು ಭಾರಿ ಸದ್ದು ಮಾಡಿದೆ. ಇದೀಗ ಮೇಧವಿ ಬಿಧೂರಿಯ 6-7 ಸೆಲೆಬ್ರೇಷನ್ ಸದ್ದು ಮಾಡುತ್ತಿದೆ. ಲೆಗ್ ಸ್ಪಿನ್ನರ್ ಆಗಿರುವ ಮೇಧವಿ ಬಿಧೂರಿ, ಡೆಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಹೊಸ ಸೆನ್ಸೇಶನ್ ಆಗಿ ಹೊರಹೊಮ್ಮಿದ್ದಾಳೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಭಾರತ-ಅಫ್ಘಾನಿಸ್ತಾನ್ 1ನೇ ಟಿ20 ಪಂದ್ಯ ರದ್ದು?: ಆ ಒಂದು ಪತ್ರದ ಗೊಂದಲ, ಬಿಬಿಸಿಐ ಕೊಟ್ಟ ಸ್ಪಷ್ಟನೆ ಏನು?
ಫೈನಲ್ ಮ್ಯಾಚ್‌ ಡ್ರಾ ಆದರೂ ದುಲಿಪ್ ಟ್ರೋಫಿ ಎತ್ತಿಹಿಡಿದ ಕಿಶನ್; ಗೆದ್ದ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ?