
ಬೆಂಗಳೂರು, (ಏ.08) : ಗ್ಲೆನ್ ಜೇಮ್ಸ್ ಮ್ಯಾಕ್ಸ್‌ವೆಲ್. ಆರ್ಸಿಬಿಯ ಈ ಆಲ್ರೌಂಡರ್ ಹೆಸರು ಕೇಳಿದರೆ ಐಪಿಎಲ್ನಲ್ಲಿ ಎದುರಾಳಿ ತಂಡಗಳು ಬೆಚ್ಚಿ ಬೀಳ್ತಾವೆ. ಅಯ್ಯೋ, ಈ ವರ್ಷ ಇನ್ನೂ ಒಂದು ಪಂದ್ಯವಾಡಿಲ್ಲ. ಫಾರ್ಮ್ನಲ್ಲಿ ಇದ್ದಾರೋ ಇಲ್ವೋ ಅನ್ನೋದು ಗೊತ್ತಿಲ್ಲ. ಆಗ್ಲೇ ಇಷ್ಟು ಬಿಲ್ಡಪ್ಪಾ ಅನ್ನಬೇಡಿ. ಕಳೆದ ಸೀಸನ್ನಲ್ಲಿ ಮ್ಯಾಕ್ಸ್‌ವೆಲ್ ಕೊಟ್ಟ ಏಟಿಗೆ ಇನ್ನೂ ಚೇತರಿಸಿಕೊಂಡಿಲ್ಲ ಕೆಲ ಬೌಲರ್ಸ್. ಈ ಆಸ್ಟ್ರೇಲಿಯಾ ಥೂಫಾನ್ ಆರ್ಸಿಬಿಗೆ ಎಂಟ್ರಿಕೊಟ್ರು ಅಂತ ಗೊತ್ತಾಗೇ ಎಷ್ಟೋ ಬೌಲರ್ಸ್ ಥಂಡ ಹೊಡೆದಿದ್ದಾರೆ. ಇನ್ನೇನಿದ್ರು ಸಿಕ್ಕ ಸಿಕ್ಕ ಬೌಲರ್ಸ್ಗೆ ದಂಡಿಸೋದೊಂದೆ ಕೆಲಸ.
ಮ್ಯಾಕ್ಸ್ವೆಲ್ಗೆ ಬೌಲರ್ಸ್ ಹೆದರೋದು ಅವರ ಸ್ಫೋಟಕ ಬ್ಯಾಟಿಂಗ್ಗೆ ಅಲ್ಲ. ಬದಲಿಗೆ ಅವರ ಸ್ವಿಚ್ ಹಿಟ್ಗೆ. ಎಂತಹ ಒಳ್ಳೆ ಬಾಲ್ ಹಾಕಿದ್ರು ಸ್ವಿಚ್ ಹಿಟ್ ಹೊಡೆದು ಸಿಕ್ಸರ್ ಸಿಡಿಸ್ತಾರೆ. ಇದು ಬೌಲರ್ಸ್ ಕಾನ್ಫಿಡೆನ್ಸ್ ಅನ್ನೇ ಹಾಳು ಮಾಡಿ ಬಿಡುತ್ತವೆ. ಸ್ಪಿನ್ನರ್ಸ್ ಇರಲಿ, ಫಾಸ್ಟ್ ಬೌಲರ್ ಇರಲಿ, ಎದುರಾಳಿ ಬೌಲರ್ ಯಾರು ಅನ್ನೋದನ್ನೂ ನೋಡದೆ ಸ್ವಿಚ್ ಹಿಟ್ ಮೂಲ್ಕ ಸಿಕ್ಸರ್ ಬಾರಿಸ್ತಾರೆ. ಇದೇ ಮ್ಯಾಕ್ಸಿ ತಾಕತ್ತು.
IPL 2022: ಮ್ಯಾಕ್ಸ್‌ವೆಲ್ RCB ಪರ ಕಣಕ್ಕಿಳಿಯೋದು ಯಾವಾಗ? ಮೈಕ್ ಹೆಸನ್ ಹೇಳಿದ್ದೇನು..?
ಮುಂಬೈ ವಿರುದ್ಧ ಮ್ಯಾಕ್ಸ್‌ವೆಲ್ ಅಖಾಡಕ್ಕೆ:
ಐಪಿಎಲ್ನಲ್ಲಿ ಆಡಲು ಏಪ್ರಿಲ್ 6ರವರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿತ್ತು. ಹಾಗಾಗಿ ಮೊನ್ನೆಯಿಂದ ಕಾಂಗರೂ ಪ್ಲೇಯರ್ಸ್ ಕಲರ್ ಫುಲ್ ಟೂರ್ನಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ನಾಳೆ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಆಡಲಿದ್ದಾರೆ. ಅಲ್ಲಿಗೆ ನಾಳೆ ಪುಣೆಯಲ್ಲಿ ರನ್ ಹೊಳೆ ಹರಿಯೋದು ಗ್ಯಾರಂಟಿ. ಮ್ಯಾಕ್ಸಿ ಬ್ಯಾಟಿಂಗ್ ವೈಭವ ನೋಡಲು ಎಲ್ಲರೂ ಎದುರು ನೋಡ್ತಿದ್ದಾರೆ.
ಜಸ್ಟ್ 6 ತಿಂಗಳಲ್ಲಿ ಬದಲಾಯ್ತು ಮ್ಯಾಕ್ಸಿ ಲೈಫ್:
ಗ್ಲೆನ್ ಮ್ಯಾಕ್ಸ್ವೆಲ್ಗೆ 2020 ಕೆಟ್ಟ ವರ್ಷ. ಐಪಿಎಲ್ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಆದರೆ ಕಳೆದ ವರ್ಷ ಯಾವಾಗ ಆರ್ಸಿಬಿ ಸೇರಿಕೊಂಡೋ ಅಲ್ಲಿಂದ ಮ್ಯಾಕ್ಸಿ ಲೈಫ್ ಚೇಂಜ್ ಆಗಿ ಹೋಯ್ತು. ಭಾರತದಲ್ಲಿ ಮತ್ತು ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ಮ್ಯಾಕ್ಸ್ವಲ್ ಆರ್ಭಟಿಸಿದ್ರು. ಆರ್ಸಿಬಿ ಕಪ್ ಗೆಲ್ಲದಿದ್ದರೂ ಮ್ಯಾಕ್ಸಿ ಮಾತ್ರ ಸ್ಫೋಟಕ ಬ್ಯಾಟಿಂಗ್ನಿಂದ ಗಮನ ಸೆಳೆದರು.
ಫಾರ್ಮ್ಗೆ ಮರಳಿದ ಮ್ಯಾಕ್ಸ್‌ವೆಲ್ ಟಿ20 ವಿಶ್ವಕಪ್ ಆಡೋ ಆಸ್ಟ್ರೇಲಿಯಾ ತಂಡದಲ್ಲೂ ಸ್ಥಾನ ಪಡೆದ್ರು. ಆಸೀಸ್ ಫಸ್ಟ್ ಟೈಮ್ ಟಿ20 ವರ್ಲ್ಡ್ಕಪ್ ಗೆಲ್ತು ಈ ವರ್ಷ ಭಾರತದ ಮೂಲದ ತಮಿಳುನಾಡು ಹುಡುಗಿ ಜೊತೆ ಮ್ಯಾಕ್ಸಿ ಮದುವೆಯಾದ್ರು. ಮದುವೆಯಾಗುವ ಸಲುವಾಗಿಯೇ ಆರ್ಸಿಬಿಯನ್ನ ಲೇಟಾಗಿ ಸೇರಿಕೊಂಡ್ರು. ಜಸ್ಟ್ ಆರೇ ಆರು ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ.
ಆಸ್ಟ್ರೇಲಿಯಾ ಆಟಗಾರನಾಗಿದ್ದಾಲೇ ಮ್ಯಾಕ್ಸ್ವೆಲ್ಗೆ ಭಾರತದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದರು. ಈಗ ಭಾರತದ ಅಳಿಯ. ಅದರಲ್ಲೂ ನಮ್ಮ ಪಕ್ಕದ ರಾಜ್ಯ ತಮಿಳುನಾಡು ಹುಡುಗಿಯನ್ನ ಮದುವೆ ಆಗಿದ್ದಾರೆ. ಮುರಳೀಧರನ್ ನಂತರ ತಮಿಳುನಾಡು ಹುಡುಗಿ ಮ್ಯಾರೇಜ್ ಆಗಿರೋ 2ನೇ ವಿದೇಶಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಫ್ಯಾನ್ಸ್ ಐಪಿಎಲ್ನಲ್ಲಿ ತಂಡಗಳನ್ನ ನೋಡಲ್ಲ. ಆಟಗಾರರಿಗೆ ಫ್ಯಾನ್ಸ್ ಆಗಿ ಬಿಡ್ತಾರೆ. ಹಾಗಾಗಿ ಈಗ ಭಾರತದಲ್ಲಿ ಮ್ಯಾಕ್ಸಿ ಫ್ಯಾನ್ ಫಾಲೋವರ್ಸ್ ದುಪ್ಪಟ್ಟಾದ್ರೂ ಆಶ್ಚರ್ಯವಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.