ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ!

Published : Feb 06, 2021, 10:17 PM IST
ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ!

ಸಾರಾಂಶ

ರೈತ ಪ್ರತಿಭಟನೆ ಕುರಿತು ವಿದೇಶಿ ಸೆಲೆಬ್ರೆಟಿಗಳ ಟ್ವಿಟರ್ ಅಭಿಯಾನಕ್ಕೆ ತಕ್ಕೆ ತಿರುಗೇಟು ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ ಕೇರಳ ಯೂಥ್ ಕಾಂಗ್ರೆಸ್, ಸೇರಿದಂತೆ ಕೆಲವರು ಅವಮಾನ ಮಾಡೋ ಪ್ರಯತ್ನ ಮಾಡಿದ್ದರು. ಆದರೆ ಸಚಿನ್‌ಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ಕುರಿತ ವಿವರ ಇಲ್ಲಿದೆ.

ನವೆದೆಹಲಿ(ಫೆ.06): ಭಾರತ ವಿರುದ್ಧ ಷಡ್ಯಂತ್ರ ನಡೆಸಿದ ವಿದೇಶಿ ಸೆಲೆಬ್ರೆಟಿಗಳ ಪಿತೂರಿಗೆ ತಿರುಗೇಟು ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಇದೀಗ ಭಾರಿ ಬೆಂಬಲ ವ್ಯಕ್ತವಾಗಿದೆ. ಸಚಿನ್ ಹಿಂದೆ ನಾವಿದ್ದೇವೆ ಅನ್ನೋ ಅಭಿಯಾನ ಜೋರಾಗಿದೆ. #IStandWithSachin ಸಚಿನ್ ಹ್ಯಾಶ್‌ಟ್ಯಾಗ್ ಮೂಲಕ ಸಚಿನ್ ಟ್ವೀಟ್‌ಗೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ.

ಸಚಿನ್ ತೆಂಡುಲ್ಕರ್ ಕಟೌಟ್‌‍ಗೆ ಮಸಿ ಬಳಿದು ಅವಮಾನ ಮಾಡಿದ ಯೂಥ್ ಕಾಂಗ್ರೆಸ್!

ಸಚಿನ್‌ಗೆ ಈ ರೀತಿ ಬೆಂಬಲ ವ್ಯಕ್ತವಾಗಲು, ಅಭಿಯಾನ ಆರಂಭವಾಗಲು ಕಾರಣವಿದೆ. ರೈತರ ಪ್ರತಿಭಟನೆ ಹೆಸರಿನಲ್ಲಿ ಭಾರತ ವಿರುದ್ಧ ಪಿತೂರಿ ನಡೆಸಿದ ವಿದೇಶಿ ಸೆಲೆಬ್ರೆಟಿಗಳಿಗೆ ಸಚಿನ್ ತಕ್ಕ ಉತ್ತರ ನೀಡಿದ್ದರು. ಭಾರತದ ಆತಂಕರಿಕ ವಿಚಾರದಲ್ಲಿ ಮೂಗುತೂರಿಸಬೇಡಿ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ ಎಂದಿದ್ದರು. ಸಚಿನ್ ಟ್ವೀಟ್‌ಗೆ ಕೇರಳದ ಯೂಥ್ ಕಾಂಗ್ರೆಸ್, ಕೇರಳದ ಕೆಲ ಮಂದಿ ಹಾಗೂ ಕೆಲವೇ ಕೆಲವರು ಸಚಿನ್‌ಗೆ ಅವಮಾನ ಮಾಡೋ ಪ್ರಯತ್ನ ಮಾಡಿದ್ದರು.

ಸಚಿನ್ ಕಟೌಟ್‌ಗೆ ಮಸಿ ಬಳಿದ ಕೇರಳ ಯೂಥ್ ಕಾಂಗ್ರೆಸ್ ರಸ್ತೆಯುದ್ದಕ್ಕೂ ಪ್ರತಿಭಟನೆ ನಡೆಸಿತ್ತು. ಇನ್ನು ಕೇರಳದ ಕೆಲ ಮಂದಿ ಸಚಿನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಚಿನ್ ನಿರ್ಧಾರವನ್ನು ಬೆಂಬಲಿಸಿ ಇಡೀ ದೇಶವೇ ನಿಂತುಕೊಂಡಿತು. 

#IStandWithSachin ಅಭಿಯಾನ ಇಡೀ ದೇಶದಲ್ಲೇ ಜೋರಾಗಿದೆ. ಭಾರತ ರತ್ನ, 24 ವರ್ಷ ಭಾರತೀಯ ಕ್ರಿಕೆಟ್ ಹೆಗಲ ಮೇಲೆ ಹೊತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದ ಸಚಿನ್ ತೆಂಡುಲ್ಕರ್ ಜೊತೆ ನಾವಿದ್ದೇನೆ ಅನ್ನೋ ಕೂಗು ಹೆಚ್ಚಾಗುತ್ತಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ