ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!

By Suvarna News  |  First Published Feb 6, 2021, 3:56 PM IST

ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಬ್ಬರಿಸಿದೆ. ಮೊದಲೆರೆಡು ದಿನ ಮೇಲುಗೈ ಸಾಧಿಸಿದ್ದು, ಟೀಂ ಇಂಡಿಯಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆ ನಾಯಕ ಜೋ ರೂಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಇನ್ಜಮಾನ್ ಉಲ್ ಹಕ್ ದಾಖಲೆ ಪುಡಿ ಪುಡಿ ಮಾಡಿದ್ದಾರೆ.


ಚೆನ್ನೈ(ಫೆ.06):  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಿಕ 2 ದಿನ ಆಂಗ್ಲರು ಮೇಲುಗೈ ಸಾಧಿಸಿದ್ದಾರೆ. 500 ರನ್ ಗಡಿ ದಾಟಿರುವ ಇಂಗ್ಲೆಂಡ್ ಸುಭದ್ರ ಸ್ಥಿತಿಯಲ್ಲಿದೆ. ಇಂಗ್ಲೆಂಡ್ ಮೇಲುಗೈಗೆ ನಾಯಕ ಜೋ ರೂಟ್ ಸಿಡಿಸಿದ ಡಬಲ್ ಸೆಂಚುರಿ ಪ್ರಮುಖ ಕಾರಣವಾಗಿದೆ.

ನಿಶ್ಚಿತಾರ್ಥ ಮಾಡಿಕೊಂಡ ಐಪಿಎಲ್ ಹೀರೋ ರಾಹುಲ್ ತೆವಾಟಿಯಾ; ಸ್ಟಾರ್ ಆಟಗಾರರು ಭಾಗಿ...

ಮೊದಲ ದಿನ ಶತಕ ಸಿಡಿಸಿದ್ದ ರೂಟ್, ಎರಡನೇ ದಿನ ದ್ವಿಶತಕ ಸಿಡಿಸಿ ಮಿಂಚಿದರು. ಈ ಮೂಲಕ 100ನೇ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ದಿಗ್ಗಜ ಕ್ರಿಕೆಟಿಗರು ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿಲ್ಲ.

Latest Videos

undefined

196 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಜೋ ರೂಟ್, ಭರ್ಜರಿ ಸಿಕ್ಸರ್ ಸಿಡಿಸೋ ಮೂಲಕ ಡಬಲ್ ಸೆಂಚುರಿ ಪೂರೈಸಿದರು. ಈ ಮೂಲಕ ಸಿಕ್ಸರ್ ಮೂಲಕ ಡಬಲ್ ಸೆಂಚುರಿ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಕ್ರೆಕೆಟಿಗ ಅನ್ನೋ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ.

ಡಬಲ್ ಸೆಂಚುರಿ ಮೂಲಕ ರೂಟ್ ಮತ್ತೊಂದು ದಾಖಲೆ ಬರೆದಿದ್ದಾರೆ. 100ನೇ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. 100ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಜಮಾಮ್ ಉಲ್ ಹಕ್ 184 ರನ್  ಸಿಡಿಸಿದ್ದರು. ಇದು ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಜೋ ರೂಟ್ 218 ರನ್ ಸಿಡಿಸಿದ್ದಾರೆ.
 

click me!