ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ಕಳೆದ ಬಾರಿ ರನ್ನರ್-ಅಪ್ ಮೈಸೂರು ವಾರಿಯರ್ಸ್, 2022ರ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರ್ಯಾಗನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಆಗಸ್ಟ್ 15ರಿಂದು ಚಾಲನೆ ಸಿಗಲಿದ್ದು, ಸೆ.1ರಂದು ತೆರೆ ಬೀಳಲಿದೆ.
ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಟೂರ್ನಿಯ ದಿನಾಂಕ ಪ್ರಕಟಿಸಿ, ಟ್ರೋಫಿ ಅನಾವರಣಗೊಳಿಸಲಾಯಿತು. ಈ ಬಾರಿಯೂ ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ.
ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ಕಳೆದ ಬಾರಿ ರನ್ನರ್-ಅಪ್ ಮೈಸೂರು ವಾರಿಯರ್ಸ್, 2022ರ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರ್ಯಾಗನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸೆಮಿಫೈನಲ್ ಹೊಸ್ತಿಲಿಗೆ ದಕ್ಷಿಣ ಆಫ್ರಿಕಾ; ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಸೋಲು
ಸಮಾರಂಭದಲ್ಲಿ ದಿಗ್ಗಜ ಕ್ರಿಕೆಟಿಗ ಇಎಎಸ್ ಪ್ರಸನ್ನ, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಹಾರಾಜ ಟ್ರೋಫಿ ಕಮಿಷನರ್ ಸಂಪತ್ ಕುಮಾರ್ ಸೇರಿ ಪ್ರಮುಖರು ಹಾಜರಿದ್ದರು.
ಜು.25ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ
ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಹರಾಜು ಪ್ರಕ್ರಿಯೆ ಜುಲೈ 25ರಂದು ನಡೆಯಲಿದೆ. 700ಕ್ಕೂ ಹೆಚ್ಚಿನ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, 100ಕ್ಕೂ ಅಧಿಕ ಆಟಗಾರರು ವಿವಿಧ ತಂಡಗಳ ಪಾಲಾಗಲಿದ್ದಾರೆ. ಕಳೆದ ಬಾರಿಯ ತಂಡದಲ್ಲಿದ್ದ ಕೆಲ ಆಟಗಾರರನ್ನು ಫ್ರಾಂಚೈಸಿಗಳು ರಿಟೈನ್ ಮಾಡಿಕೊಳ್ಳಲಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ. ಈ ಬಾರಿಯೂ ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ವೈಶಾಖ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಪ್ರಮುಖರು ಕಣಕ್ಕಿಳಿಯುವ ನಿರೀಕ್ಷೆಯಿದೆ.
2024-25ರಲ್ಲಿ ತವರಿನಲ್ಲಿ ಭಾರತಕ್ಕೆ 5 ಟೆಸ್ಟ್, 3 ಏಕದಿನ, 8 ಟಿ20 ಪಂದ್ಯ
ನವದೆಹಲಿ: ಟೀಂ ಇಂಡಿಯಾದ 2024-25ರ ತವರಿನ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಈ ಅವಧಿಯಲ್ಲಿ ಭಾರತ ತಂಡ 5 ಟೆಸ್ಟ್, 3 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನಾಡಲಿದೆ ಎಂದು ಮಂಡಳಿ ತಿಳಿಸಿದೆ.
ಸದ್ಯ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದು, ಬಳಿಕ ಜುಲೈ 6ರಿಂದ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಸೆಪ್ಟೆಂಬರ್‌ನಿಂದ ಭಾರತ ತಂಡ ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಪಂದ್ಯಗಳನ್ನು ಆಡಲಿದೆ. ಪಂದ್ಯಗಳಿಗೆ ಬೆಂಗಳೂರು ಸೇರಿ ಒಟ್ಟು 13 ನಗರಗಳು ಆತಿಥ್ಯ ವಹಿಸಲಿವೆ.
T20 World Cup 2024: ಬುಮ್ರಾ ಮಾರಕ ದಾಳಿಗೆ ಆಫ್ಘನ್ ಧೂಳೀಪಟ, ಟೀಂ ಇಂಡಿಯಾಗೆ ಸುಲಭ ಜಯ
ಬಾಂಗ್ಲಾ ವಿರುದ್ಧ 2 ಟೆಸ್ಟ್ ಹಾಗೂ 3 ಟಿ20, ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್, ಇಂಗ್ಲೆಂಡ್ ವಿರುದ್ಧ 5 ಟಿ20, 3 ಏಕದಿನ ಪಂದ್ಯಗಳ ಸರಣಿ ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ.
ಭಾರತ vs ಬಾಂಗ್ಲಾ ಸರಣಿ
ಪಂದ್ಯ ದಿನಾಂಕ ಸ್ಥಳ
1ನೇ ಟೆಸ್ಟ್ ಸೆ.19-ಸೆ.23 ಚೆನ್ನೈ
2ನೇ ಟೆಸ್ಟ್ ಸೆ.27-ಅ.1 ಕಾನ್ಪುರ
1ನೇ ಟಿ20 ಅ.6 ಧರ್ಮಶಾಲಾ
2ನೇ ಟಿ20 ಅ.9 ನವದೆಹಲಿ
3ನೇ ಟಿ20 ಅ.12 ಹೈದರಾಬಾದ್
ಭಾರತ vs ನ್ಯೂಜಿಲೆಂಡ್ ಸರಣಿ
ಪಂದ್ಯ ದಿನಾಂಕ ಸ್ಥಳ
1ನೇ ಟೆಸ್ಟ್ ಅ.16-ಅ.20 ಬೆಂಗಳೂರು
2ನೇ ಟೆಸ್ಟ್ ಅ.24-ಅ.28 ಪುಣೆ
3ನೇ ಟೆಸ್ಟ್ ನ.1-ನ.5 ಮುಂಬೈ
ಭಾರತ vs ಇಂಗ್ಲೆಂಡ್ ಸರಣಿ
ಪಂದ್ಯ ದಿನಾಂಕ ಸ್ಥಳ
1ನೇ ಟಿ20 ಜ.22 ಚೆನ್ನೈ
2ನೇ ಟಿ20 ಜ.25 ಕೋಲ್ಕತಾ
3ನೇ ಟಿ20 ಜ.28 ರಾಜ್‌ಕೋಟ್
4ನೇ ಟಿ20 ಜ.31 ಪುಣೆ
5ನೇ ಟಿ20 ಫೆ.2 ಮುಂಬೈ
1ನೇ ಏಕದಿನ ಫೆ.6 ನಾಗ್ಪುರ
2ನೇ ಏಕದಿನ ಫೆ.9 ಕಟಕ್
3ನೇ ಏಕದಿನ ಫೆ.12 ಅಹ್ಮದಾಬಾದ್
ಬೆಂಗಳೂರಲ್ಲಿ ಕಿವೀಸ್ ವಿರುದ್ಧ ಟೆಸ್ಟ್
2024-25ರ ಸೆಪ್ಟೆಂಬರ್‌ನಿಂದ ಫೆಬ್ರವರಿ ವರೆಗಿನ ಭಾರತದ ತವರಿನ ಪಂದ್ಯಗಳ ಪೈಕಿ ಒಂದು ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 16ರಿಂದ 20ರ ವರೆಗೆ ನಡೆಯಲಿರುವ ಪಂದ್ಯ ಬೆಂಗಳೂರಿನಲ್ಲಿ ನಿಗದಿಯಾಗಿದೆ.