ಮಿಚೆಲ್‌ ಜಾನ್ಸನ್‌ ಕೋಣೆಯಲ್ಲಿ ಹಾವು ಪತ್ತೆ..! ನಿಮಗೆ ಈ ಹಾವು ಗೊತ್ತೇ ಎಂದು ಪ್ರಶ್ನಿಸಿದ ಆಸೀಸ್ ಕ್ರಿಕೆಟಿಗ

By Naveen Kodase  |  First Published Sep 20, 2022, 11:18 AM IST

* ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಮಿಚೆಲ್ ಜಾನ್ಸನ್
* ಲಖನೌದ ಹೋಟೆಲ್‌ನಲ್ಲಿ ಜಾನ್ಸನ್ ಉಳಿದುಕೊಂಡ ಹೋಟೆಲ್‌ ರೂಂನಲ್ಲಿ ಹಾವು ಪತ್ತೆ
* ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ಆಸೀಸ್ ಮಾಜಿ ವೇಗಿ


ಲಖನೌ(ಸೆ.20): ಭಾರತದಲ್ಲಿ ನಡೆಯುತ್ತಿರುವ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಆಡುತ್ತಿರುವ ಆಸ್ಪ್ರೇಲಿಯಾದ ಮಾಜಿ ವೇಗಿ ಮಿಚೆಲ್‌ ಜಾನ್ಸನ್‌ ಅವರ ಕೋಣೆಯಲ್ಲಿ ಹಾವೊಂದು ಪ್ರತ್ಯಕ್ಷಗೊಂಡಿದ್ದು, ಅದರ ಫೋಟೋಗಳನ್ನು ತಮ್ಮ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಟೂರ್ನಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್‌ ಪರ ಆಡುತ್ತಿರುವ ಜಾನ್ಸನ್‌ ಅವರು ಉಳಿದುಕೊಂಡಿರುವ ಲಖನೌನ ತಮ್ಮ ಕೋಣೆಯಲ್ಲಿ ಭಾನುವಾರ ಹಾವು ಕಾಣಿಸಿಕೊಂಡಿದೆ. 

ಇದರ ಫೋಟೋ ಶೇರ್‌ ಮಾಡಿರುವ ಅವರು, ‘ನನ್ನ ಕೋಣಯ ಬಾಗಿಲ ಸಮೀಪ ಪತ್ತೆಯಾದ ಈ ಹಾವು ಯಾವುದು ಎಂದು ನಿಮಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಹಲವರು ವಿವಿಧ ರೂಪದಲ್ಲಿ ಪ್ರತಿಕ್ರಿಯಿಸಿದ್ದು, ಆಟಗಾರರ ಸುರಕ್ಷತೆಯ ಬಗ್ಗೆಯೂ ಕೆಲವರು ಪ್ರಶ್ನಿಸಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Mitchell Johnson (@mitchjohnson398)

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗಿ ಮಿಚೆಲ್ ಜಾನ್ಸನ್‌, ಸದ್ಯ ಭಾರತದಲ್ಲಿದ್ದು, ಜಾಕ್ ಕಾಲೀಸ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್‌ ತಂಡದ ಪರ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. 40 ವರ್ಷದ ಎಡಗೈ ಮಾರಕ ವೇಗಿ ಮಿಚೆಲ್ ಜಾನ್ಸನ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 73 ಟೆಸ್ಟ್‌, 153 ಏಕದಿನ ಹಾಗೂ 30 ಟಿ20 ಪಂದ್ಯಗಳನ್ನಾಡಿದ್ದಾರೆ.

ಇನ್ನು ಈ ಘಟನೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಆಸ್ಟ್ರೇಲಿಯಾದಲ್ಲಿ ಪಂದ್ಯವನ್ನಾಡುತ್ತಿದ್ದೀರಾ ಎಂದರೆ ಖಂಡಿತವಾಗಿಯೂ ಮೂವರು ವೇಗಿಗಳು ತಂಡದಲ್ಲಿರಬೇಕು. ಕೆಲವೊಂದು ಸಂದರ್ಭದಲ್ಲಿ ಪರಿಸ್ಥಿತಿಯನ್ನು ಆಧರಿಸಿ ನಾಲ್ವರು ವೇಗಿಗಳಿದ್ದರೂ ತಂಡಕ್ಕೆ ಪ್ರಯೋಜನವಾಗಲಿದೆ. ಉದಾಹರಣೆಗೆ ಪರ್ತ್‌ನಲ್ಲಿ ಈ ಪ್ರಯೋಗ ಮಾಡಬಹುದು. ಆದರೆ ವಿಶ್ವಕಪ್ ಟೂರ್ನಿಗೆ ಕೇವಲ ನಾಲ್ವರು ವೇಗಿಗಳನ್ನು ಕರೆದುಕೊಂಡು ಹೋಗುವುದು ಸ್ವಲ್ಪ ರಿಸ್ಕ್‌ ಎಂದು ಜಾನ್ಸನ್ ಅಭಿಪ್ರಾಯಪಟ್ಟಿದ್ದರು.

ತಂಡದಲ್ಲಿ ಓರ್ವ ಆಲ್ರೌಂಡರ್(ವೇಗದ ಬೌಲರ್), ಇಬ್ಬರು ಸ್ಪಿನ್ನರ್‌ಗಳು, ನಾಲ್ವರು ವೇಗಿಗಳು ಆಡುವುದು ತಂಡದ ಪಾಲಿಗೆ ಕೊಂಚ ರಿಸ್ಕ್ ಆಗಬಹುದು. ಆದರೆ ಭಾರತ ತಂಡವು ಇಬ್ಬರು ತಜ್ಞ ವೇಗಿಗಳು, ಹಾರ್ದಿಕ್ ಪಾಂಡ್ಯ ರೂಪದಲ್ಲಿ ಓರ್ವ ಆಲ್ರೌಂಡರ್ ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಅವರಿಗೆ ವಿಶ್ವಕಪ್ ತಂಡದ 15ರ ಬಳಗದಲ್ಲಿ ಸ್ಥಾನ ನೀಡದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಲಂಕಾ ಕೋಚ್‌ ಹುದ್ದೆಗೆ ತೊರೆಯಲಿರುವ ಮೂಡಿ

ಕೊಲಂಬೊ: ಟಿ20 ವಿಶ್ವಕಪ್‌ಗೆ ಕೆಲವೇ ವಾರಗಳಿರುವಾಗ ಶ್ರೀಲಂಕಾ ಮುಖ್ಯ ಕೋಚ್‌ ಟಾಮ್‌ ಮೂಡಿ ತಮ್ಮ ಹುದ್ದೆ ತೊರೆಯಲು ಸಜ್ಜಾಗಿದ್ದಾರೆ. ಇದನ್ನು ದೇಶದ ಕ್ರಿಕೆಟ್‌ ಮಂಡಳಿ ಸೋಮವಾರ ಖಚಿತಪಡಿಸಿದೆ. 56 ವರ್ಷದ ಮೂಡಿ ತಮ್ಮ 3 ವರ್ಷದ ಒಪ್ಪಂದವನ್ನು ಮಂಡಳಿಯ ಜೊತೆಗಿನ ಮಾತುಕತೆ ಬಳಿಕ ಕೊನೆಗೊಳಿಸಲು ನಿರ್ಧರಿಸಿದ್ದಾಗಿ ಮಂಡಳಿ ತಿಳಿಸಿದೆ.

Ind vs Aus ಇಂದಿನಿಂದ ಭಾರತ-ಆಸೀಸ್ ಟಿ20 ಕದನ; ಹೈವೋಲ್ಟೇಜ್‌ ಕದನಕ್ಕೆ ಕ್ಷಣಗಣನೆ

‘ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಅವರಿಗೆ ಸಂಭಾವನೆ ನೀಡಲು ಸಾಧ್ಯವಾಗುತ್ತಿಲ್ಲ. ಸದ್ಯ ಅವರು ಪ್ರತಿದಿನ 1850 ಯುಎಸ್‌ ಡಾಲರ್‌(ಸುಮಾರು 1.47 ಲಕ್ಷ ರು.) ಸಂಭಾವನೆ ಪಡೆಯುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ ಮೂಡಿ ಅವಧಿಯಲ್ಲೇ ಲಂಕಾ ಏಷ್ಯಾ ಕಪ್‌ ಚಾಂಪಿಯನ್‌ ಆಗಿತ್ತು. 

click me!