ಎಲ್ಲಾ ಮಾದರಿ ಕ್ರಿಕೆಟ್‌‌‌ಗೆ ಲಸಿತ್ ಮಲಿಂಗ ವಿದಾಯ; ಮುಂಬೈ ಇಂಡಿಯನ್ಸ್‌ಗೆ ಕೃತಜ್ಞತೆ!

By Suvarna NewsFirst Published Sep 14, 2021, 6:44 PM IST
Highlights
  • ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಶ್ರೀಲಂಕಾ ವೇಗಿ ಲಸಿತ್ ಮಲಿಂಗ
  • ಶ್ರೀಲಂಕಾ ಕ್ರಿಕೆಟ್ ಮಂಡಳಿ, ಮುಂಬೈ ಇಂಡಿಯನ್ಸ್‌ಗೆ ಕೃತಜ್ಞತೆ
  • ದಿಗ್ಗಜ ಬೌಲರ್‌ಗೆ ಅಭಿಮಾನಿಗಳ ಶುಭ ಹಾರೈಕೆ
     

ಕೊಲೊಂಬೊ(ಸೆ.14): ಶ್ರೀಲಂಕಾ ವೇಗಿ, ಮುಂಬೈ ಇಂಡಿಯನ್ಸ್ ಸ್ಟಾರ್ ಬೌಲರ್ ಲಸಿತ್ ಮಲಿಂಗಾ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 38ರ ಹರೆಯದ ಮಲಿಂಗ ಇಂದು(ಸೆ.14) ನಿಗದಿತ ಓವರ್ ಕ್ರಿಕೆಟ್‌ಗೆ ವಿದಾಯ ಹೇಳೋ ಮೂಲಕ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದಾಗಿ ಹೇಳಿದ್ದಾರೆ.

ಫ್ರಾಂಚೈಸಿ ಕ್ರಿಕೆಟ್‌ಗೆ ಯಾರ್ಕರ್‌ ಸ್ಪೆಷಲಿಸ್ಟ್ ಲಸಿತ್‌ ಮಾಲಿಂಗ ವಿದಾಯ

ವಿದಾಯ ಘೋಷಿಸಿದ ಮಲಿಂಗ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನನಗಿಂದು ವಿಶೇಷ ಹಾಗೂ ಮಹತ್ವದ ದಿನ. ನನ್ನ ವೃತ್ತಿ ಜೀವನದಲ್ಲಿ ನನ್ನ ಬೆಂಬಲಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ. ನನ್ನ ಟಿ20 ಬೌಲಿಂಗ್ ಶೂಗೆ ವಿಶ್ರಾಂತಿ ನೀಡಲು ಬಯಸುತ್ತಿದ್ದೇನೆ. ಈ ಸಂದರ್ಭದಲ್ಲಿ ಲಂಕಾ ಮಂಡಳಿ, ಮುಂಬೈ ಇಂಡಿಯನ್ಸ್, ಮೆಲ್ಬೋರ್ನ್ ಸ್ಟಾರ್ಸ್, ಕೆಂಟ್ ಕ್ರಿಕೆಟ್ ಕ್ಲಬ್, ರಂಗಪುರ ರೈಡರ್ಸ್, ಗಯಾನ ವಾರಿಯರ್ಸ್, ಮರಾಠ ವಾರಿಯರ್ಸ್ ಹಾಗೂ ಮಾಂಟ್ರಿಯಲ್ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.  

 

"Today I decided I want to give 100% rest to my T20 bowling shoes."

Lasith Malinga has called time on his playing career 🌟

— ICC (@ICC)

2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಮಲಿಂಗ, ಏಕದಿನ, ಟಿ20 ಹಾಗೂ ಲೀಗ್ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದರು. 2019ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ  ಪಂದ್ಯದಲ್ಲಿ ಕಾಣಿಸಿಕೊಂಡ ಮಲಿಂಗ ಬಳಿಕ ಏಕದಿನದಿಂದ ದೂರವಾಗಿದ್ದರು.  ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಮಿಂಚಿನ ಬೌಲಿಂಗ್ ದಾಳಿ ಸಂಘಟಿಸಿ ಗರಿಷ್ಠ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಮಲಿಂಗ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ದೇಶಕ್ಕೆ ನನ್ನ ಕೊಡುಗೆ ಏನೆಂಬುದು ಇಡೀ ಜಗತ್ತಿಗೆ ಗೊತ್ತು; ಟೀಕಾಕಾರರ ಬಾಯಿ ಮುಚ್ಚಿಸಿದ ಮಾಲಿಂಗ

ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲಿಂಗ, ಇದೀಗ ಎಲ್ಲಾ ಮಾದರಿಯಿಂದಲೂ ವಿದಾಯ ಹೇಳಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಲಿಂಗ, 30 ಟೆಸ್ಟ್, 226 ಏಕದಿನ ಹಾಗೂ 83 ಟಿ20 ಪಂದ್ಯ ಆಡಿದ್ದಾರೆ. ಟೆಸ್ಟ್‌ನಲ್ಲಿ 101 ವಿಕೆಟ್, ಏಕದಿನದಲ್ಲಿ 338 ಹಾಗೂ ಟಿ20ಯಲ್ಲಿ 107 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಲಸಿತ್ ಮಲಿಂಗ ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಜನಪ್ರಿಯರಾಗಿದ್ದಾರೆ. ಮಲಿಂಗ ರೀತಿ ನಿಖರವಾಗಿ ಯಾರ್ಕರ್ ಎಸೆತ ಬೌಲಿಂಗ್ ಮಾಡಬಲ್ಲ ಮತ್ತೊಬ್ಬ ಬೌಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಕಂಡಿಲ್ಲ. ಹೀಗಾಗಿ ಡೆತ್ ಓವರ್‌ನಲ್ಲಿ ಮಲಿಂಗ ಅತ್ಯಂತ ಡೇಂಜರಸ್ ಬೌಲರ್. 

ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!

ಐಪಿಎಲ್ ಟೂರ್ನಿಯಲ್ಲಿ 122 ಪಂದ್ಯ ಆಡಿರುವ ಮಲಿಂಗ 170 ವಿಕೆಟ್ ಉರುಳಿಸಿದ್ದಾರೆ. 13 ರನ್ ನೀಡಿ 5 ವಿಕೆಟ್ ಕಬಳಿಸಿರುವುದು ಐಪಿಎಲ್ ಬೆಸ್ಟ್ ಪರ್ಫಾಮೆನ್ಸ್. ಇದೀಗ ನಿವೃತ್ತಿ ಘೋಷಿಸಿರುವ ಮಲಿಂಗ, ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ, ತರಬೇತಿ ನೀಡಲು ಮುಂದಾಗಿದ್ದಾರೆ.

click me!